ಸೋನಂ ಸಹೋದರಿ ರಿಯಾ ಹನಿಮೂನ್..! ಮಾಲ್ಡೀವ್ಸ್‌ನಲ್ಲಿ ರೊಮ್ಯಾಂಟಿಕ್ ವೈಬ್ಸ್
- ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಹನಿಮೂನ್
- ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನವಜೋಡಿ
ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಅವರು ಮಾಲ್ಡೀವ್ಸ್‌ಗೆ ಭೇಟಿ ನೀಡಿದಾಗಿನಿಂದ ಅಲ್ಲಿಂದ ಫೋಟೋಗಳ ಮೂಲಕ ರೊಮ್ಯಾಂಟಿಕ್ ವೈಬ್ಸ್ ಕಳುಹಿಸುತ್ತಿದ್ದಾರೆ. ನವ ಜೋಡಿ ದ್ವೀಪ ರಾಷ್ಟ್ರದಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.
ಈ ವಾರದ ಆರಂಭದಲ್ಲಿ ದಂಪತಿಗಳು ತಮ್ಮ ಮಧುಚಂದ್ರಕ್ಕಾಗಿ ದ್ವೀಪ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದರು. ಈಗ, ಕರಣ್ ಅವರ ಇತ್ತೀಚಿನ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಅವರು ವಿಹಾರ ನೌಕೆಯಲ್ಲಿ ಕಳೆದ ಸಂದರ್ಭ ಫೋಟೋದಲ್ಲಿ ಕಾಣಬಹುದು.
ರೋಮ್ಯಾಂಟಿಕ್ ವೈಬ್ಸ್ ಹೊತ್ತು ತಂದಿದೆ ಮಾಲ್ಡೀವ್ಸ್ ಮಧುಚಂದ್ರದ ಫೋಟೋಗಳು. ರಿಯಾ ಕರಣ್ ನ ಹಣೆಗೆ ಮುತ್ತಿಡುತ್ತಿರುವುದು ಕಂಡುಬಂದಿದೆ. ಮುಂದಿನ ಫೋಟೋಗಲ್ಲಿ ಪ್ರೀತಿಯ ಜೋಡಿಯನ್ನು ಕಾಣಬಹುದು.
ಕೊನೆಯ ಫೋಟೋದಲ್ಲಿ ಸುಂದರವಾದ ಸೂರ್ಯಾಸ್ತಮಾನ ಹಿನ್ನೆಲೆಯಲ್ಲಿ ರಿಯಾರನ್ನು ತೋರಿಸಿದೆ. ಜೋಡಿಯ ಫೋಟೋಗಳು ಸಖತ್ ವೈರಲ್ ಆಗಿವೆ
ಸೆಪ್ಟೆಂಬರ್ 6 ರಂದು, ರಿಯಾ ಕಪೂರ್ ಅದ್ಭುತ ಚಿತ್ರದೊಂದಿಗೆ ಮಾಲ್ಡೀವ್ಸ್ ತಲುಪಿದನ್ನು ತಿಳಿಸಿದ್ದರು. ಬಾಸ್ ಲೇಡಿಯಂತೆ ಪೂಲ್‌ನಲ್ಲಿ ರಿಯಾ ಕೂಲಾಗಿರುವುದನ್ನು ಕಾಣಬಹುದು.
ರಿಯಾ ಕಪೂರ್ ಆಗಸ್ಟ್ 14 ರಂದು ಕರಣ್ ಬೂಲಾನಿಯನ್ನು ವಿವಾಹವಾದರು. ವಿವಾಹವು ಮುಂಬೈನ ಅವರ ನಿವಾಸದ ಕೋಣೆಯಲ್ಲಿ ನಡೆಯಿತು. ವಿವಾಹದ ನಂತರ ರಿಯಾ ಅವರ ಮೊದಲ ಪೋಸ್ಟ್ ಮಾಡಿದ್ದು ಪ್ರೀತಿಯ ಬಗ್ಗೆ.