3 ತಂದೆ, 3 ತಾಯಿಯಂದಿರು ಈ ಬಾಲಿವುಡ್ ನಟನಿಗೆ!
ಬಾಲಿವುಡ್ ನಟ ಶಾಹಿದ್ ಕಪೂರ್ 40ರ ಸಂಭ್ರಮ. 25 ಫೆಬ್ರವರಿ 1981 ರಂದು ದೆಹಲಿಯಲ್ಲಿ ಜನಿಸಿದ ಶಾಹಿದ್ ತಮ್ಮ ಡ್ಯಾನ್ಸ್, ಲುಕ್ಸ್ ಹಾಗೂ ರೊಮ್ಯಾಂಟಿಕ್ ಫಿಲ್ಮಂಗಳಿಗೆ ಹೆಸರುವಾಸಿಯಾಗಿದ್ದಾರೆ. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಹಿದ್ ಕಪೂರ್ ಇತ್ತೀಚೆಗೆ ಜರ್ಸಿ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಅದೇ ಸಮಯದಲ್ಲಿ,ರಾಜ್ ಮತ್ತು ಡಿಕೆ ನೆಕ್ಸ್ಟ್ ಸಿನಿಮಾದ ಶೂಟಿಂಗ್ ಪ್ರಾರಂಭಿಸಲಿದ್ದಾರೆ. ಮದುವೆಗೆ ಮುಂಚಿನ ಇವರ ಹಲವು ಆಫೇರ್ಸ್ ಸಖತ್ ಸದ್ದು ಮಾಡಿದ್ದವು. ಅಂದಹಾಗೆ, ಶಾಹಿದ್‌ಗೆ ಮೂವರು ತಂದೆ ಮತ್ತು ಮೂವರು ತಾಯಂದಿರು ಇದ್ದಾರೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ಪೂರ್ಣ ವಿವರ.
ಪಂಕಜ್ ಕಪೂರ್ ಮತ್ತು ನೀಲಿಮಾ ಅಜೀಮ್ ಶಾಹಿದ್ ಕಪೂರ್ ಅವರ ಸ್ವಂತ ತಂದೆ ತಾಯಿ. ನೀಲಿಮಾ ಅಜೀಮ್ ಮೊದಲ ಬಾರಿಗೆ ಪಂಕಜ್ ಕಪೂರ್ ಅವರನ್ನು 1975 ರಲ್ಲಿ ವಿವಾಹವಾದರು. ಶಾಹಿದ್ ಹುಟ್ಟಿದ ಮೂರು ವರ್ಷಗಳ ನಂತರ 1984 ರಲ್ಲಿ ನೀಲಿಮಾ ಮತ್ತು ಪಂಕಜ್ ವಿಚ್ಛೇದನ ಪಡೆದಾಗ ಶಾಹಿದ್ ತನ್ನ ತಾಯಿ ಜೊತೆ ವಾಸಿಸುತ್ತಿದ್ದರು.
ನಂತರ, ಪಂಕಜ್ ಕಪೂರ್ 1989 ರಲ್ಲಿ ನಟಿ ಸುಪ್ರಿಯಾ ಪಾಠಕ್ ಅವರನ್ನು ವಿವಾಹವಾದರು ಮತ್ತು ಅವರು ಶಾಹಿದ್‌ರ ಎರಡನೇ ತಾಯಿಯಾದರು. ಪಂಕಜ್ - ಸುಪ್ರಿಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ರುಹಾನ್ ಕಪೂರ್ ಮತ್ತು ಮಗಳು ಸನಾ ಕಪೂರ್. ಸನಾ 'ಶನ್ದಾರ್; ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
1990 ರಲ್ಲಿ ನಟ ರಾಜೇಶ್ ಖಟ್ಟರ್ ಅವರನ್ನು ನೀಲಿಮಾ ವಿವಾಹವಾದರು ಮತ್ತು ರಾಜೇಶ್ ಶಾಹಿದ್ ಅವರ ಎರಡನೇ ತಂದೆಯಾದರು. ಆದರೆ, ನೀಲಿಮಾರ ಎರಡನೇ ಮದುವೆ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. 2001 ರಲ್ಲಿ ಇಬ್ಬರು ವಿಚ್ಛೇದನ ಪಡೆದರು.
ಈ ಜೋಡಿಗೆ 1995 ರಲ್ಲಿ ಇಶಾನ್ ಖಟ್ಟರ್ ಎಂಬ ಮಗ ಜನಿಸಿದನು. ಮಜಿದ್ ಮಜೀದಿ ಅವರ ಬಿಯಾಂಡ್ ದಿ ಕ್ಲೌಡ್ಸ್ ಚಿತ್ರದ ಮೂಲಕ ಇಶಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಶಾನ್ ತನ್ನ ತಾಯಿಯೊಂದಿಗೆ ವಾಸಿಸುತ್ತಾನೆ.
ರಾಜೇಶ್ 2007 ರಲ್ಲಿ ನಲಿಮಾ ವಂದನಾ ಸಜ್ನಾನಿಯನ್ನು ವಿವಾಹವಾದರು. ಅದರಂತೆ ವಂದನಾ ಶಾಹಿದ್ ಅವರ ಮೂರನೇ ತಾಯಿಯಾದರು.
ಶಾಹಿದ್ ತನ್ನ ಎಲ್ಲ ತಂದೆ ತಾಯಿಯನ್ನು ಪ್ರೀತಿಸುತ್ತಾರೆ ಮತ್ತು ಅವರೆಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಇದು ಮಾತ್ರವಲ್ಲ, ಅವರು ತನ್ನ ಅಕ್ಕತಂಗಿಯರಿಗೆ ಸಹ ತುಂಬಾ ಕ್ಲೋಸ್ ಆಗಿದ್ದಾರೆ.
2006 ರಲ್ಲಿ ಸೂರಜ್ ಬರ್ಜತ್ಯ ಅವರ ವಿವಾಹ್ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸಿತು. 2007 ರಲ್ಲಿ ಇಮ್ತಿಯಾಜ್ ಅಲಿಯ ಜಬ್ ವಿ ಮೆಟ್ ಶಾಹಿದ್ ಅವರ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿದೆ. 2009 ರಲ್ಲಿ ಶಾಹಿದ್ ವಿಶಾಲ್ ಭರದ್ವಾಜ್ ಅವರ ಕಮಿನೀ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಸಾಕಷ್ಟು ಸದ್ದು ಮಾಡಿದರು .
ನಟನೆಯ ಜೊತೆಗೆ, ಶಾಹಿದ್‌ರ ಲವ್‌ಸ್ಟೋರಿಗಳು ಕಥೆಗಳನ್ನೂ ಸಹ ಬಹಳ ಚರ್ಚೆಯಾಗವೆ. ಅವರ ಹೆಸರು ಅಮೃತ ರಾವ್ ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ಸಾನಿಯಾ ಮಿರ್ಜಾ ಅವರೊಂದಿಗೆ ಕೇಳಿಬಂದಿತ್ತು.
ಕರೀನಾ ಹಾಗೂ ಈ ನಟನ ಸಂಬಂಧ ಬಹಳ ಕಾಲ ನಡೆಯಿತು ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದವು, ಆದರೆ ನೆಡೆಯಲಿಲ್ಲ.
ಕರೀನಾ 2012 ರಲ್ಲಿ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರೆ, 2015 ರಲ್ಲಿ ಮೀರಾ ರಜಪೂತ್ ಅವರನ್ನು ವರಿಸಿರುವ ಶಾಹಿದ್ ಪ್ರಸ್ತುತ ಮಗಳು ಮತ್ತು ಮಗನನ್ನು ಹೊಂದಿದ್ದಾರೆ.