ಫ್ಯಾಮಿಲಿ ವಿರುದ್ಧ ಹೋಗಿ ಐಷರಾಮಿ ಬಂಗಲೆ ಒಡತಿಯಾದ ಕಂಗನಾ!

First Published 27, May 2020, 6:33 PM

ನಟಿ ಕಂಗನಾ ರನೌತ್‌ ಯಾವುದೇ ಗಾಡ್‌ ಫಾದರ್‌ ಇಲ್ಲದೆ ಸಿನಿಮಾರಂಗದಲ್ಲಿ ನೆಲೆ ನಿಂತವರು. ಅವರ ಕಠಿಣ ಪರಿಶ್ರಮದಿಂದ ಬಾಲಿವುಡ್‌ನಲ್ಲಿ ದೊಡ್ಡ ಸ್ಥಾನ ಗಳಿಸಿದ್ದಾರೆ. ಅದ್ಭುತ ಅಭಿನಯದ ಜೊತೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ಕೀರ್ತಿ ಇವರದ್ದು. ಇತ್ತೀಚೆಗೆ ಮುಂಬೈನ ಪಾಲಿ ಹಿಲ್‌ನಲ್ಲಿ ದೊಡ್ಡ ಕಚೇರಿಯೊಂದನ್ನು ಖರೀದಿಸಿದ್ದಾರೆ. ಅದರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 48 ಕೋಟಿ ಬೆಲೆಯ ಆ ಬಂಗಲೆಯ ಬಗ್ಗೆ  ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅದನ್ನು ಖರೀದಿಸುವಾಗ ಅವರ ಕುಟುಂಬವು ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ವಿವರಿಸಿದರು. ಕಂಗಾನಾಳ ಫ್ಯಾಮಿಲಿ ಈ ಬಂಗ್ಲೆ ಕೊಳ್ಳಲು ಒಪ್ಪಿರಲಿಲ್ಲವಂತೆ.

ಮುಂಬೈನ ಪಾಲಿ ಹಿಲ್‌ನಲ್ಲಿ 48 ಕೋಟಿ ಬೆಲೆ ಐಷರಾಮಿ ಬಂಗಲೆಯ ಒಡತಿಯಾಗಿದ್ದಾರೆ ಬಾಲಿವುಡ್‌ ನಟಿ ಕಂಗನಾ ರಣಾವತ್.

ಕಂಗನಾ ರನೌತ್‌‌  ಐಷಾರಾಮಿ ಬಂಗಲೆ ಖರೀದಿಸಿ ಈಗ ಸುದ್ದಿಯಲ್ಲಿದ್ದಾರೆ.ಬಂಗಲೆಯನ್ನು ಪ್ರೊಡಕ್ಷನ್‌ ಹೌಸ್‌ ಆಗಿ ಬಳಸಲಿದ್ದು  'ಮಣಿಕರ್ನಿಕಾ ಫಿಲ್ಮ್ಸ್' ಎಂದು ಹೆಸರಿಟ್ಟಿದ್ದಾರೆ. ಲಾಕ್‌ಡೌನ್‌ಗೆ ಮುಂಚಿತವಾಗಿ ಕೆಲವು ಫೋಟೋಶೂಟ್‌ಗಳನ್ನು ಸಹ ಮಾಡಿದ್ದಾರೆ.

ಕಂಗನಾ  ತನ್ನದೇ ಆದ ಸ್ಟುಡಿಯೋವನ್ನು ನಿರ್ಮಿಸಲು ಬಯಸಿದ್ದರು, ಆದರೆ ಕೆಲವು ಸಮಸ್ಯೆಗಳಿಂದಾಗಿ ಮೊದಲು  ಸಾಧ್ಯವಾಗಲಿಲ್ಲ.

'ಮಣಿಕರ್ಣಿಕಾ' ನಂತರ ಪರಿಸ್ಥಿತಿ ಬದಲಾಯಿತು ಮತ್ತು ಸ್ವಂತ ಕಚೇರಿಯನ್ನು ಸಿದ್ಧಪಡಿಸಿದರು. ಕಂಗನಾ ಸಂದರ್ಶನವೊಂದರಲ್ಲಿ ತನ್ನ ಕುಟುಂಬ ಈ ಬಂಗ್ಲೆ ಖರೀದಿಯನ್ನು ವಿರೋಧಿಸಿತ್ತು ಎಂದು ಹೇಳಿದರು.

ತನ್ನ ಆಪ್ತರು ಅನೇಕ ಬಾರಿ ಮನವರಿಕೆ ಮಾಡಲು ಪ್ರಯತ್ನಿಸಿದರು ಮತ್ತು ಇದನ್ನು ಬಾಡಿಗೆಗೆ ಸಹ ತೆಗೆದುಕೊಳ್ಳಬಹುದು ಎಂದೇ ಹೇಳಿದ್ದರು.

ಆದರೆ ನಾನು ಗಾಜಿನ ಬಾಟಲಿಯಲ್ಲಿ ಪ್ಯಾಕ್ ಆಗಿ ಕೆಲಸ ಮಾಡಲು ಬಯಸುವುದಿಲ್ಲ. ನನ್ನ ಸುತ್ತ ಆರ್ಗ್ಯಾನಿಕ್‌ ಫ್ಯಾಬ್ರಿಕ್‌ ಹಾಗೂ ಪ್ಲಾಂಟ್‌ ಬಯಸುತ್ತಿದೆ ಎಂದು ಕಂಗನಾ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ.

ಈ ಬಂಗಲೆ ಖರೀದಿಸಲು ತನ್ನ ಸಿಎ ಸಹ ನಿರಾಕರಿಸಿದ್ದರು. ಹಣವನ್ನು ಬಾಂಡ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಹೂಡಿಕೆ ಮಾಡಬೇಕೆಂದು ಸಲಹೆ ನೀಡಿದ್ದರೆಂದು ಹೇಳುತ್ತಾರೆ ಕ್ವೀನ್ ನಟಿ.

ಅದೇ ಸಮಯದಲ್ಲಿ, ಆಕೆಯ ಕುಟುಂಬವೂ ಅವಳು ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ಭಾವಿಸಿತಂತೆ.

ಕುಟುಂಬ ಸದಸ್ಯರು ನನ್ನ ಹಿಂದೆ ಬಿದ್ದಿದ್ದರೂ ಕುಟುಂಬದ ವಿರುದ್ಧ ಹೋಗಿ ಮುಂದುವರೆದೆ ಎಂದು ನಟಿ ಹೇಳುತ್ತಾರೆ.

ಇದು ಒಂದು ಸವಾಲಾಗಿತ್ತು. ಸರಿಯಾದ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡಲು ಆಕೆಗೆ ಸಾಧ್ಯವಿದೆಯೇ ಎಂದು ಸ್ವತಃ ಪ್ರಯತ್ನಿಸಲು ಅವರು ಬಯಸಿದ್ದರು ಎಂದು ಆಸ್ತಿ ಖರೀದಿಯ ಬಗ್ಗೆ ಮಾತಾನಾಡುತ್ತಾ ಹೇಳುತ್ತಾರೆ ಕಂಗನಾ.

loader