ಮೋಹನ್‌ಲಾಲ್‌ಗೆ ಜೋಡಿಯಾದ ಕನ್ನಡದ ವರಲಕ್ಷ್ಮಿ ನಟಿ ಮಾಳವಿಕಾ ಮೋಹನನ್!
2016ರಲ್ಲಿ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ನಾನು ಮತ್ತು ವರಲಕ್ಷ್ಮಿ ಸಿನಿಮಾದಲ್ಲಿ ನಟಿಸಿದ್ದ ಹಾಗೂ ಹಾಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಮಾಳವಿಕಾ ಮೋಹನನ್ ತಮ್ಮ ಮುಂದಿನ ಚಿತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ಮೋಹನ್ ಲಾಲ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.

ರಜನೀಕಾಂತ್ ಪೆಟ್ಟಾ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದ ಮಾಳವಿಕಾ, ಶಶಿಕುಮಾರ್ ಜೊತೆ ನಟಿಸಿದರು. ಸಿನಿಮಾದ ಆರಂಭಿಕ ಆವಧಿಯಲ್ಲಿ ಕನ್ನಡದ ಪ್ರೀತಂ ಗುಬ್ಬಿ ಅವರ ನಿರ್ದೇಶನದ ನಾನು ಮತ್ತು ವರಲಕ್ಷ್ಮಿ ಸಿನಿಮಾದಲ್ಲಿ ನಟಿಸಿದ್ದ ಮಾಳವಿಕಾ ಮೋಹನನ್ ಇದೀಗ ದಕ್ಷಿಣ ಭಾರತದ ಬಹುಬೇಡಿಕೆ ನಟಿ ಆಗಿದ್ದಾರೆ. ಮಾಸ್ಟರ್ ಚಿತ್ರದಲ್ಲಿ ವಿಜಯ್ ಜೊತೆ ನಟಿಸಿ ಯಶಸ್ಸಿನ ಉತ್ತುಂಗವನ್ನು ತಲುಪಿದ್ದಾರೆ.
ಪ್ಯಾನ್-ಇಂಡಿಯನ್ ನಟಿ
ಮಾಸ್ಟರ್ ನಂತರ, ಪಾ. ರಂಜಿತ್ ನಿರ್ದೇಶನದ ಥಂಗಲಾನ್‌ನಲ್ಲಿ ಗಿರಿಜನ ಮಹಿಳೆಯಾಗಿ ನಟಿಸಿದ್ದಕ್ಕಾಗಿ ಮಾಳವಿಕಾ ಮೆಚ್ಚುಗೆ ಗಳಿಸಿದರು. ಪಿ.ಎಸ್. ಮಿತ್ರನ್ ನಿರ್ದೇಶನದ ಸರ್ದಾರ್ 2 ಚಿತ್ರೀಕರಣದಲ್ಲಿದ್ದಾರೆ. ಇದೀಗ ನಟಿ ಮಾಳವಿಕಾ ತೆಲುಗು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ.
ತೆಲುಗಿನಲ್ಲಿ, ರಾಜಾ ಸಾಬ್‌ನಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಈಗ, ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ ಮಲಯಾಳಂ ಚಿತ್ರದಲ್ಲಿ ನಟಿಸಲಿದ್ದಾರೆ. ಇದು ಅವರ ಮೊದಲ ಜೋಡಿ ಸಿನಿಮಾವಾಗಿದೆ. ಈ ಇಬ್ಬರ ಜೋಡಿಯನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಹೃದಯಪೂರ್ವಂ ಚಿತ್ರಕ್ಕೆ ಸತ್ಯನ್ ಅಂತಿಕಾಡ್ ನಿರ್ದೇಶನ. ಚಿತ್ರೀಕರಣ ಫೆಬ್ರವರಿ 10 ರಂದು ಆರಂಭವಾಗಲಿದೆ. ಈ ಸಿನಿಮಾ ಪ್ರಾಜೆಕ್ಟ್‌ನಿಂದಾಗಿ ನಟಿ ಮಾಳವಿಕಾ ಅವರ ಸ್ಟಾರ್ ಮೌಲ್ಯ ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.