- Home
- Entertainment
- Cine World
- Diwali 2021: 48 ಅಂದ್ರೆ ನಂಬ್ತೀರಾ ? ಪಿಂಕ್ ಸೀರೆಯಲ್ಲಿ ಬಾಯ್‌ಫ್ರೆಂಡ್ ಜೊತೆ ಮಲೈಕಾ ಹಬ್ಬ
Diwali 2021: 48 ಅಂದ್ರೆ ನಂಬ್ತೀರಾ ? ಪಿಂಕ್ ಸೀರೆಯಲ್ಲಿ ಬಾಯ್‌ಫ್ರೆಂಡ್ ಜೊತೆ ಮಲೈಕಾ ಹಬ್ಬ
Diwali 2021: ಬಾಲಿವುಡ್‌ನಲ್ಲಿ ದೀಪಾವಳಿ ಸಂಭ್ರಮ ಪಿಂಕ್ ಕಲರ್ ಸೀರೆಯಲ್ಲಿ ಹಬ್ಬ ಆಚರಿಸಿದ ಮಲೈಕಾ(Malaika Arora) 48 ವರ್ಷ ಅಂದ್ರೆ ನಂಬೋದೇ ಕಷ್ಟ, ಬಾಯ್‌ಫ್ರೆಂಡ್ ಜೊತೆ ಫೆಸ್ಟಿವ್ ಮೂಡ್(Festive Mood

ಬಾಲಿವುಡ್‌ನ ಚೈಂಯಾ ಚೈಂಯಾ ಬೆಡಗಿಗೆ ವಯಸ್ಸಾಗೋದೇ ಇಲ್ಲ. ಹೌದು. 48 ವರ್ಷದ ಮಲೈಕಾ ಅರೋರ ಅವರು ಹಬ್ಬಕ್ಕೆ ಬ್ಯೂಟಿಫುಲ್ ಅಗಿ ರೆಡಿಯಾಗಿದ್ದಾರೆ.
ದೀಪಾವಳಿ ರಾತ್ರಿ ಅನಿಲ್ ಕಪೂರ್ ಅವರ ಅದ್ಧೂರಿ ದೀಪಾವಳಿ ಪಾರ್ಟಿಯಲ್ಲಿ ಮಲೈಕಾ ಅರೋರಾ ಹಾಗೂ ಅರ್ಜುನ್ ಭಾಗವಹಿಸಿದ್ದಾರೆ. ಸ್ಟೈಲಿಷ್ ಫೆಸ್ಟಿವ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಜೋಡಿ.
ಸ್ಟಾರ್ ಜೋಡಿಯ ಸ್ಟೈಲಿಶ್ ಲುಕ್ ಪಾಪರಾಜಿಗಳನ್ನು ಸೆಳೆದಿದೆ. ಅರ್ಜುನ್ ಕಪೂರ್ ಅವರ ಪ್ರೀತಿಯ ಮಲೈಕಾಗೆ ಪ್ರೊಟೆಕ್ಟಿವ್ ಆಗಿದ್ದಂತಹ ರೀತಿ ಎಲ್ಲರ ಮೆಚ್ಚುಗೆ ಪಡೆಯಿತು.
ಅರ್ಜುನ್ ಮಲೈಕಾಗೆ ಪ್ರೊಟೆಕ್ಟಿವ್ ಆಗಿರೋದು ಇದೇ ಮೊದಲೇನಲ್ಲ. ಈ ಜೋಡಿ ಜೊತೆಯಾಗಿ ಹೊರಗೆ ಕಾಣಿಸಿಕೊಂಡಾಗ ಇವರಿಬ್ಬರೂ ಹೀಗೆಯೇ ಇರುತ್ತಾರೆ.
ಪಾರ್ಟಿಯಿಂದ ಹೊರಬಂದ ಫೋಟೋಗಳಲ್ಲಿ ದೀಪಾವಳಿ ಆಚರಣೆಗಾಗಿ ಹಳದಿ ಬ್ಲೌಸ್‌ಗೆ ರಿಚ್ ರೆಡ್ ರೇಷ್ಮೆ ಸೀರೆಯಲ್ಲಿ ಮಲೈಕಾ ಮಿಂಚಿರೋದನ್ನು ಕಾಣಬಹುದು.
ಹೇರ್ ನೀಟಾಗಿ ಬನ್ ಮಾಡಿ ಹೂ ಮುಡಿದಿದ್ದ ನಟಿ ಡೈಮಂಡ್ ಚೋಕರ್ ನೆಕ್ಲೇಸ್ ಅನ್ನು ಸಹ ಧರಿಸಿದ್ದರು. ಸಾಂಪ್ರದಾಯಿಕ ಕಪ್ಪು ಕುರ್ತಾದಲ್ಲಿ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದಾರೆ.
ಪಾರ್ಟಿಪ್ರವೇಶಿಸುವ ಮೊದಲು ಇಬ್ಬರು ಸಂತೋಷದಿಂದ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡುತ್ತಿದ್ದರು.
ಮಲೈಕಾ ತನ್ನ ಕುಟುಂಬದ ಜೊತೆಗಿನ ದೀಪಾವಳಿ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಅರ್ಜುನ್ ತಮ್ಮ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ.