ಮಲೈಕಾ ರಾತ್ರೋ ರಾತ್ರಿ ಸ್ಟಾರ್ ಆಗಲು ಕಾರಣವೇ ಶಿಲ್ಪಾ ಶೆಟ್ಟಿ, ರವೀನಾ ಟಂಡನ್
ಮಾಡೆಲ್ ಕಮ್ ನಟಿ ಮಲೈಕಾ ಅರೋರಾ ತಮ್ಮ 40ನೇ ವಯಸ್ಸಿನಲ್ಲಿಯೂ ಬಾಲಿವುಡ್‌ನ ಮೊಸ್ಟ್ ಹಾಟ್ ಹಾಗೂ ಫಿಟ್ ನಟಿಯರಲ್ಲಿ ಒಬ್ಬರು. ಮಲೈಕಾ ತಮ್ಮ ಫಿಟ್ನೆಸ್ ಮತ್ತು ಫ್ಯಾಷನ್‌ಗಾಗಿ ಸಖತ್ ಫೇಮಸ್. ಶಾರುಖ್ ಖಾನ್‌ರ ದಿಲ್ ಸೇ ಸಿನಿಮಾದ ಛಯಾ ಛಯಾ ಹಾಡಿನ ಮೂಲಕ ಮಲೈಕಾ ಬಣ್ಣದ ಲೋಕಕ್ಕೆ ಪರಿಚಿತರಾದರು. ಮಲೈಕಾ ಅರೋರಾ ರಾತ್ರೋರಾತ್ರಿ ಸ್ಟಾರ್ ಆದ ಹಿಂದೆ ಶಿಲ್ಪಾ ಶೆಟ್ಟಿ, ರವೀನಾ ಟಂಡನ್ ಇದ್ದಾರೆ. ವಿವರ ಇಲ್ಲಿದೆ.
ಭಾರತದಲ್ಲಿ ಪ್ರಸ್ತುತ ಹೆಚ್ಚು ಫ್ಯಾನ್ ಫಾಲೋಯರ್ಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು ಮಲೈಕಾ ಅರೋರಾ.
ನಟ ಅರ್ಜುನ್ ಕಪೂರ್ ಜೊತೆ ರಿಲೆಷನ್‌ಶಿಪ್ ಹಾಗೂ ಅವರ ಗರ್ಲ್ ಗ್ಯಾಂಗ್ ಜೊತೆಗಿನ ಪಾರ್ಟಿಗಳಿಂದ ಮಲೈಕಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಶಾರೂಖ್ ಖಾನ್ ಸಿನಿಮಾ ದಿಲ್ ಸೇಯ ಚೈಯ್ಯ ಚೈಯ್ಯ ಎಂಬ ಹಾಡಿನ ಮೂಲಕ ಮಲೈಕಾ ರಾತ್ರೋರಾತ್ರಿ ಸ್ಟಾರ್ ಆದರು.
ಆದರೆ ಮಲೈಕಾರ ಈ ಯಶಸ್ಸಿನ ಹಿಂದೆ ಶಿಲ್ಪಾ ಶೆಟ್ಟಿ, ರವೀನಾ ಟಂಡನ್ ಇದ್ದಾರಾ?
ಕೆಲವು ವರ್ಷಗಳ ಹಿಂದೆ, ಚಲನಚಿತ್ರ ನಿರ್ಮಾಪಕ ಮತ್ತು ನೃತ್ಯ ಸಂಯೋಜಕ ಫರಾಹ್ ಖಾನ್ ಅವರು ಮಲೈಕಾ ಅರೋರಾರನ್ನು ದಿಲ್ ಸೆ ಚಿತ್ರದ ಚೈಯ್ಯ ಚೈಯ್ಯ ಹಾಡಿಗೆ ಸೆಲೆಕ್ಟ್ ಮಾಡುವ ಮೊದಲ ಅಫರ್ ಅನ್ನು ಅನೇಕರಿಗೆ ನೀಡಲಾಗಿತ್ತು, ಎಂಬುದನ್ನು ಹೇಳಿದ್ದರು.
ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಸೇರಿ ಹಲವು ನಟಿಯರನ್ನು ಈ ಅವಕಾಶ ನೀಡಲಾಯಿತು. ಆದರೆ ಅವರು ಅದನ್ನು ನಿರಾಕರಿಸಿದರು.
ಇದು ನಿಜಕ್ಕೂ ಅವರ ಕೆರಿಯರ್‌ನ ಬೆಸ್ಟ್ ನಿರ್ಧಾರಗಳಲ್ಲಿ ಒಂದಾಗಿದೆ.
ಅಂತಿಮವಾಗಿ, ಮಲೈಕಾ ಈ ಹಾಡಿಗೆ ಹೆಜ್ಜೆ ಹಾಕಲು ನಿರ್ಧರಿಸಿದರು, ಎಂದು ಫರಾಹ್ ಖಾನ್‌ನಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಹೇಳಿದ್ದರು.
'ನಾವು ಶಿಲ್ಪಾ, ರವೀನಾರನ್ನು ಮತ್ತು ಬಹಳಷ್ಟು ನಟಿಯರನ್ನು ಸಂಪರ್ಕಿಸಿದ್ದೆವು. ಆದರೆ ಯಾರೂ ಒಪ್ಪಲಿಲ್ಲ. ಮಲೈಕಾ ಈ ಹಾಡನ್ನು ಮಾಡಿದರು ಮತ್ತು ಅದರ ನಂತರ ಸ್ಟಾರ್ ಆದರು,' ಎಂದು ಫರಾಹ್ ಈ ಸಂದರ್ಭದಲ್ಲಿ ಹೇಳಿದರು.
ಮೊದಲು ಈ ಹಾಡನ್ನು ರೈಲ್ವೆ ಸ್ಟೇಷನ್‌ನಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಇತ್ತು .ಆದರೆ ಪರ್ಮಿಷನ್ ಸಿಗದ ಕಾರಣ, ಚಲಿಸುವ ರೈಲಿನ ಮೇಲೆಯೇ ನೃತ್ಯವನ್ನು ಚಿತ್ರೀಕರಿಸಲಾಯಿತು ಎಂದು ಅವರು ಬಹಿರಂಗಪಡಿಸಿದರು.