ಡಿವೋರ್ಸ್‌ ನಂತರ ನಟಿ ಮಲೈಕಾ ಆರೋರಾ ಪಡೆದ ಜೀವನಾಂಶ ಎಷ್ಟು?

First Published Jun 9, 2020, 6:32 PM IST

ಬಾಲಿವುಡ್‌ನ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 18 ವರ್ಷದ ದಾಂಪತ್ಯ ಜೀವನದ ನಂತರ 2017ರಲ್ಲಿ ಡಿವೋರ್ಸ್‌ ಪಡೆದಿದ್ದಾರೆ. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಹಾಗೂ ಹಾಟ್‌ ಮಲೈಕಾರ ವೈವಾಹಿಕ ಜೀವನಕ್ಕಿಂತ, ಇಬ್ಬರೂ ಬೇರೆಯಾದ ಮೇಲೆ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ಈ ವಿಚ್ಛೇದಿತ ದಂಪತಿಗೆ ಬೆಳೆದು ನಿಂತಿರುವ ಒಬ್ಬ ಮಗನಿದ್ದು, ಈಗ ತಾಯಿ ಮಲೈಕಾರ ಜೊತೆ ಇದ್ದಾನೆ. ಒಂದೆಡೆ ಮಲೈಕಾ ತನಗಿಂತ ಚಿಕ್ಕ ವಯಸ್ಸಿನ ನಟ ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದು, ಸುದ್ದಿಯಲ್ಲಿದ್ದಾರೆ ಇನ್ನೊಂದೆಡೆ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಸ್ಟ್ರಾಂಗ್‌ ರಿಲೇಷನ್‌ಶಿಪ್‌ನ್ಲಲಿದ್ದಾರೆ ಅರ್ಬಾಜ್ ಎಂದು ವರದಿಗಳು ಹೇಳುತ್ತಿವೆ. ಇವೆಲ್ಲಾದರ ನಡುವೆ ಈಗ ಮಲೈಕಾ ಡಿವೋರ್ಸ್‌ ನಂತರ ಪಡೆದಿರುವ ಜೀವನಾಂಶದ ವಿಷಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.