ಶ್ರೀದೇವಿ ಹಾಗೂ ಜೂಹಿ ಚಾವ್ಲಾ ಮೇಲೆ ನಮ್ರತಾ ಶಿರೋಡ್ಕರ್‌ಗೆ ಇಷ್ಟು ಹೊಟ್ಟೆ ಉರೀನಾ?
ತೆಲಗು ಚಿತ್ರರಂಗದ ಸೂಪರ್ ಹೀರೋ ಮಹೇಶ್ ಬಾಬು ಮದುವೆಯಾಗಿದ್ದು ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ ಅವರನ್ನು. ಒಂದು ಕಾಲದಲ್ಲಿ ಫೇಮಸ್ ನಟಿ. ಇದೀಗ ಕೋಟಿಗಟ್ಟಲೆ ಆಸ್ತಿ ಇರೋ ನಟನ ಪತ್ನಿ. ಮದುವೆ, ಮಕ್ಕಳಾದ್ಮೇಲೆ ಚಿತ್ರರಂಗದಿಂದ ದೂರವೇ ಉಳಿದ ನಟಿ ಪ್ರೇಮಲೋಕದ ಬೆಡಗಿ ಜೂಹಿ ಚಾವ್ಲಾ ಹಾಗೂ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಶ್ರೀದೇವಿಯನ್ನು ಲೋ ಸೊಸೈಟಿ ಎಂದಿದ್ದು ಯಾಕೆ? ಆಮೇಲೆ ಏನಾಗಿತ್ತು?
ಡಿಜಿಟಲ್ ಜಮಾನದಲ್ಲಿ ಹಳೇ ಹೇಳೆ ವಿಷ್ಯಗಳನ್ನು ಕೆದಕುತ್ತಲೇ ಇರಲಾಗುತ್ತದೆ. 20-30 ವರ್ಷಗಳ ಹಿಂದಿನ ನಟ, ನಟಿಯರ ತುಣುಕನ್ನು ತಮಗೆ ಬೇಕಾದರೆ ಕತ್ತರಿಸಿ, ಪೋಸ್ಟ್ ಮಾಡುತ್ತಿದ್ದು, ವೈರಲ್ ಆಗುತ್ತಲೇ ಇರುತ್ತವೆ. ಆಗ ಹತ್ತು ಹಲವು ವಿಷಯಗಳು ಬೆಳಕಿಗೆ ಬರುತ್ತಿದ್ದು, ಒಬ್ಬರ ಮೇಲೆ ಮತ್ತೊಬ್ಬರ ಮೇಲೆ ಮಣ್ಣೆರೆರಚಿದ್ದು ಹಾಗೂ ಕಾಲೆಳೆದಿದ್ದು ವೈರಲ್ ಆಗುತ್ತದೆ. ಇದೀಗ ತೆಲಗು ನಟ ಮಹೇಶ್ ಬಾಬು ಪತ್ನಿ, ಬಾಲಿವುಡ್ ತಾರೆ ನಮ್ರತಾ ಶಿರೋಡ್ಕರ್ ಅವರು ಹಳೆಯ ರೆಡಿಫ್ ಸಂಸಂದರ್ಶನದ ತುಣಕೊಂದು ವೈರಲ್ ಆಗುತ್ತಿದ್ದು, ಲಿಂಬೆ ಹಣ್ಣಿನ ಬೆಡಗಿ, ಬಾಲಿವುಡ್ ತಾರೆ ಜೂಹಿ ಚಾವ್ಲಾ ಮತ್ತು ಶ್ರೀದೇವಿ ಅವರನ್ನು 'ಲೋ ಕ್ಲಾಸ್' ವ್ಯಕ್ತಿಗಳು ಎಂದು ಕರೆದಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಪ್ರಸಿದ್ಧ ನಟಿಯರೊಂದಿಗೆ ಸಿನಿ ಕ್ಷೇತ್ರದಲ್ಲಿ ನೀವೇಕೆ ವಿಶೇಷ ಸ್ಥಾನ ಪಡೆಯಬಾರದು ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ನಮ್ರತಾ, 'ನಾನು ನನಗಾಗಿಯೇ ಒಂದು ಸ್ಥಾನವನ್ನು ಸ್ಥಾಪಿಸಿಕೊಳ್ಳಲು ಯೋಜಿಸುತ್ತಿದ್ದೇನೆ. ಜೂಹಿ ಮತ್ತು ಶ್ರೀ ವಿಷಯಕ್ಕೆ ಬಂದರೆ, ಅವರು ಸಂಪೂರ್ಣವಾಗಿ SL, ಅದರ ಅರ್ಥವೇನೆಂದು ಹೇಳುವುದಾದರೆ ಲೋ ಸೊಸೈಟಿ.' ಎಂದು ನೇರವಾಗಿ ಹೇಳಿರುವುದು ಸೋಷಿಯಲ್ ಮೀಡಿಯಾ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.
1996ರಲ್ಲಿ ನಮ್ರತಾ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬರು 'ಶ್ರೀದೇವಿ ಕಾಲ ಧೂಳಿಗೂ ನೀವು ಸಮಾನವಾಗಲಾರಿರಿ. ಅವರು ಅತ್ಯುತ್ತಮ ನಟಿ. ಎಂದರೆ, ಮತ್ತೊಬ್ಬರು ನೀವು ಎಂದಿಗೂ ನೀಡಲಾಗದ ಹಿಟ್ ಚಿತ್ರಗಳನ್ನು ಅವರಿಬ್ಬರು ನೀಡಿದ್ದಾರೆ. ಎಂದರೆ, ಮಗದೊಬ್ಬರು, 'ನಮ್ರತಾ, ನೀವು ಒಬ್ಬ ಚಾಣಾಕ್ಷ ಮಹಿಳೆ ಎಂದು ಭಾವಿಸುತ್ತೇನೆ. ಶ್ರೀದೇವಿ ಬಗ್ಗೆ ಟೀಕಿಸಲು ನೀವ್ಯಾರು? ಇಂತಹ ವಿಷಯಗಳನ್ನು ಹೇಳುವ ಹಕ್ಕು ನಿಮಗೆ ಯಾರು ನೀಡಿದ್ದು?' ಎಂದು ತರಾಟೆ ತೆಗದೆುಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಯಶಸ್ಸು ಕಾಣದ ನೀವು ತೆಲಗು ಚಿತ್ರರಂಗದಲ್ಲಿ ಲಕ್ ಪರೀಕ್ಷಿಸಿಕೊಂಡವರು ನೀವು. ಅಲ್ಲಿಯೂ ಹೇಳುವಂಥ ಯಶಸ್ಸು ಸಿಗದಿದ್ದರೂ, ಏನೋ ಅದೃಷ್ಟ ಚೆನ್ನಾಗಿತ್ತು ಮಹೇಶ್ ಬಾಬುರಂಥ ಒಳ್ಳೇ ನಟನ ಕೈ ಹಿಡಿದಿದ್ದೀರಿ. ಅಂಧ ಮಾತ್ರಕ್ಕೆ ಜೂಹಿ ಹಾಗೂ ಶ್ರೀದೇವಿ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿದೆ ಎನ್ನುವ ಭ್ರಾಂತಿಯಲ್ಲಿ ಇರುವುದು ಬೇಡವೆನ್ನುವುದು ಬಹುತೇಕ ಕಮೆಂಟಿಗರ ಅರ್ಥವಾಗಿದೆ.
ನಮ್ರತಾ AMA ಸಮಯದಲ್ಲಿ ಮಾಧುರಿ ದೀಕ್ಷಿತ್ ಬಗ್ಗೆಯೂ ಮಾತನಾಡಿದ್ದರು. 'ನನಗೆ ತಿಳಿದಿರುವ ಮಾಧುರಿ ತುಂಬಾ ಸ್ನೇಹಪರಳು. ಆದರೆ ಅಮ್ಮನ ಮಗಳು. ನಾನು ನಿಮಗೆ ನೀಡಬಹುದಾದ ಸ್ಕೂಪ್ ಅಷ್ಟೆ.' 2000 ರಲ್ಲಿ ಬಿಡುಗಡೆಯಾದ ಪುಕಾರ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಅಕ್ಷಯ್ ಕುಮಾರ್ ಎಂದಾದರೂ ನಿಮ್ಮ ಜೊತೆ ನಟಿಸಿದ್ದಾರೆಯೇ ಎಂದು ಕೇಳಲಾಗಿತ್ತು. ಅದಕ್ಕೆ 'ಅಕ್ಷಯ್ ಎದುರು ನಟಿಸುವುದು ತುಂಬಾ ಸಂತೋಷ. ' ಎಂದು ಹೇಳಿದ್ದರು.
ನಮ್ರತಾ 1977 ರಲ್ಲಿ ಬಾಲನಟಿಯಾಗಿ ಶತ್ರುಘ್ನ ಸಿನ್ಹಾ ಅವರ ಶಿರಡಿ ಕೆ ಸಾಯಿ ಬಾಬಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಕ್ಷಯ್ ಕುಮಾರ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಪೂರಬ್ ಕಿ ಲೈಲಾ ಔರ್ ಬಸ್ಸಿಮ್ ಕಿ ಚೈಲಾ ಚಿತ್ರದ ಮೂಲಕ ಅವರು ನಾಯಕಿಯಾಗಿ ಪಾದಾರ್ಪಣೆ ಮಾಡಬೇಕಿತ್ತು, ಆದರೆ ಈ ಚಿತ್ರ ಬಿಡುಗಡೆಯಾಗಲಿಲ್ಲ.
ಅವರು 1998ರಲ್ಲಿ ಜಬ್ ಪ್ಯಾರ್ ಕಿಸಿ ಸೆ ಹೋಟಾ ಹೈ ಚಿತ್ರದ ಮೂಲಕ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು. ಅವರು ಮೇರೆ ದೋ ಅನ್ಮೋಲ್ ರತನ್ ಮತ್ತು ಹೀರೋ ಹಿಂದೂಸ್ತಾನಿ ನಂತಹ ಚಿತ್ರಗಳೊಂದಿಗೆ ನಟಿಸಿದ್ದರು.