2024ರಲ್ಲಿ ಬಿಡುಗಡೆಯಾಗಲಿರುವ ಟಾಪ್ ವೆಬ್ ಸರಣಿಗಳಿವು!
ಓಟಿಟಿ ಫ್ಲಾಟ್‌ಫಾರ್ಮ್‌ನ ಜನಪ್ರಿಯ ಶೋ ವೆಬ್ ಸೀರಿಸ್‌ಗಳಾಗಿದೆ. ಈ ವೆಬ್ ಸರಣಿಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ವೆಬ್ ಸರಣಿ ಪ್ರಿಯರಿಗಾಗಿ ಈ ವರ್ಷದಲ್ಲಿ ಹೊರ ಬರಲಿರುವ ಕೆಲವು ಪ್ರಮುಖ ವೆಬ್ ಸರಣಿಗಳ ಮಾಹಿತಿ ಇಲ್ಲಿದೆ.

ಮಹಾರಾಣಿ 3: ಹುಮಾ ಖುರೇಷಿ ಮತ್ತು ಇತರರು ಮುಖ್ಯ ಪಾತ್ರದಲ್ಲಿ ನಟಿಸಲಿರುವ ಮಹಾರಾಣಿ ಸೀಸನ್ 3 ಮಾರ್ಚ್ 7 ರಂದು ಬಿಡುಗಡೆಯಾಗಲಿದೆ.
web series farzi.
ಫರ್ಜಿ 2: ಶಾಹಿದ್ ಕಪೂರ್ ಮತ್ತುವಿಜಯ್ ಸೇತುಪತಿ ಅವರ ಹೆಚ್ಚು ಜನಮನ ಸೆಳೆದ ಫರ್ಜಿ ವೆಬ್‌ಸರಣಿಯ 2ನೇ ಸೀಸನ್ 2024 ರಲ್ಲಿ ಬಿಡುಗಡೆಯಾಗಲಿದೆ.
ಮಿರ್ಜಾಪುರ್ 3: ಫೇಮಸ್ ವೆಬ್ ಸರಣಿಗಳಲ್ಲಿ ಒಂದಾದ ಮಿರ್ಜಾಪುರ್‌ದ ಮೂರನೇ ಆವೃತ್ತಿಯ ಮುಖ್ಯ ಪಾತ್ರಗಳಲ್ಲಿ ಪಂಕಜ್ ಪಂಕಜ್ ತ್ರಿಪಾಠಿ, ವಿಕ್ರಾಂತ್ ಮೆಸ್ಸಿ, ದಿವ್ಯೆಂದು ಶರ್ಮಾ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ.
ಫ್ಯಾಮಿಲಿ ಮ್ಯಾನ್ 3: ಫ್ಯಾಮಿಲಿ ಮ್ಯಾನ್ ಸೀಸನ್ 3ರ ಚಿತ್ರೀಕರಣ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ ಮತ್ತು 2024 ರ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಮನೋಜ್ ಬಾಜ್‌ಪೇಯ್ ಹಂಚಿಕೊಂಡಿದ್ದಾರೆ.
Panchayat 3
ಪಂಚಾಯತ್ 3: ಪಂಚಾಯತ್ ಸೀಸನ್ 3 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊದಲಿನಂತೆಯೇ, ಪಂಚಾಯತ್ ಸೀಸನ್ 3 ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.
ಕಾಲಾ ಪಾನಿ 2: ಇತ್ತೀಚೆಗೆ ಸಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡ ನೆಟ್‌ಫ್ಲಿಕ್ಸ್ ಮೂಲ ಸರಣಿ ಕಾಲಾ ಪಾನಿ, ಸೀಸನ್ 2 2024ರಲ್ಲಿ ಬರಲಿದೆ.
ಪಾತಾಳ್ ಲೋಕ್ 2: ಜೈದೀಪ್ ಅಹ್ಲಾವತ್ ಅಭಿನಯದ ಪಾತಾಳ್ ಲೋಕ 2 2024 ರಲ್ಲಿ ಬಿಡುಗಡೆಯಾಗಲಿದೆ. ಇದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಸರಣಿಗಳಲ್ಲಿ ಒಂದಾಗಿದೆ.
ಬ್ರೀಥ್ 3: ಅಭಿಷೇಕ್ ಬಚ್ಚನ್, ನಿತ್ಯಾ ಮೆನನ್ ಮತ್ತು ಅಮಿತ್ ಸಾಧ್ ಮುಖ್ಯ ಭೂಮಿಕೆಯಲ್ಲಿರುವ ಬ್ರೀಥ್ 3 ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 9 ರಿಂದ ಸ್ಟ್ರೀಮಿಂಗ್ ಆಗಲಿದೆ.
ಆಶ್ರಮ್ 4: ಬಾಬಿ ಡಿಯೋಲ್ ಅಭಿನಯದ ಹೆಚ್ಚು ಚರ್ಚೆಗೆ ಗುರಿಯಾದ ವೆಬ್ ಸರಣಿ ಆಶ್ರಮ್ 4 ಆವೃತ್ತಿ 2024 ಮತ್ತೊಮ್ಮೆ ತೆರೆಗೆ ಬೆಂಕಿ ಹಚ್ಚಲಿದೆ
ಸನ್‌ಫ್ಲವರ್ 2: ಸನ್‌ಫ್ಲವರ್ ವೆಬ್ ಸರಣಿಯ 2ನೇ ಆವೃತಿಯಲ್ಲಿ ಕಾಮಿಡಿಯನ್ ಸುನಿಲ್ ಗ್ರೋವರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಮಾರ್ಚ್ 1 ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.