ಮಾಧವನ್ ನೆಟ್ ವರ್ತ್ ಎಷ್ಟು ಗೊತ್ತಾ? ನಟನ ಆಸ್ತಿಯ ವಿವರ ಇಲ್ಲಿದೆ!
ತ್ರೀ ಈಡಿಯಟ್ಸ್, ರೆಹನಾ ಹೈ ತೇರೆ ದಿಲ್ ಮೇ ಮತ್ತು ತನು ವೆಡ್ಸ್ ಮನು ಮುಂತಾದ ಬಾಲಿವುಡ್ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟ ಆರ್ ಮಾಧವನ್‌ಗೆ 51 ವರ್ಷಗಳ ಸಂಭ್ರಮ. ಜೂನ್ 1, 1970 ರಂದು ಜಮ್ಶೆಡ್ಪುರದಲ್ಲಿ ಜನಿಸಿದ ಮಾಧವನ್ 2001 ರ ಚಲನಚಿತ್ರ ರಹ್ನಾ ಹೈ ತೇರೆ ದಿಲ್ ಮೇ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮಾಧವನ್ ಪೂರ್ಣ ಹೆಸರು ರಂಗನಾಥನ್ ಮಾಧವನ್ ಆದರೆ ಮ್ಯಾಡಿ, ಮ್ಯಾಡಿ ಭೈಜಾನ್, ಮ್ಯಾಡಿ ಚೆಟ್ಟಾ, ಮ್ಯಾಡಿ ಅನ್ನಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಮಾಧವನ್ ಮುಂಬೈನ ಕೆಸಿ ಕಾಲೇಜಿನಿಂದ ಪಬ್ಲಿಕ್ ಸ್ಪೀಕಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಇದರ ನಂತರ ಅವರು ಕೊಲ್ಹಾಪುರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಮಾಧವನ್ ಪ್ರಸ್ತುತ 103 ಕೋಟಿ ಮೌಲ್ಯದ ಆಸ್ತಿಯ ಓನರ್. ಮುಂಬೈನಲ್ಲಿ ಅವರ ಐಷಾರಾಮಿ ಅಪಾರ್ಟ್ಮೆಂಟ್ ಜೊತೆಗೆ ಉತ್ತಮ ಬೈಕ್ ಕಲೆಕ್ಷನ್ ಹೊಂದಿದ್ದಾರೆ. ಇಲ್ಲಿದೆ ವಿವರ.
ಪೌಡರ್ ಆಡ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಶುರುಮಾಡಿದ ಮಾಧವನ್ , ಸಿನಿಮಾಕ್ಕೆ ಸೇರುವ ಮೊದಲು ಬನೆಗಿ ಅಪ್ನಿ ಬಾತ್, ಟೋಲ್ ಮೋಲ್ ಕೆ ಬೋಲ್ ಮತ್ತು ಘರ್ ಜಮೈ ಮುಂತಾದ ಟಿವಿ ಶೋಗಳಲ್ಲಿ ಕೆಲಸ ಮಾಡಿದರು.
ಮಣಿರತ್ನಂ ಅವರ ಚಿತ್ರ ಎರುವರ್ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ ಮಾಧವನ್‌ಗೆ ಅಲೈಪುಥೆಯಿಂದ ಮೊದಲ ದೊಡ್ಡ ಬ್ರೇಕ್ ದೊರೆಯಿತು.
ಒಂದು ಕಾಲದಲ್ಲಿ ಚಿತ್ರಗಳಲ್ಲಿ ಅವಕಾಶ ಪಡೆಯಲು ಹೆಣಗಾಡುತ್ತಿದ್ದ ಮಾಧವನ್ ಇಂದು ಕೋಟಿ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 103 ಕೋಟಿ ರೂ.
ಮುಂಬೈನ ಐಷಾರಾಮಿ ಅಪಾರ್ಟ್ಮೆಂಟ್‌ನ ಮಾಲೀಕರಾಗಿದ್ದು, ಮಾಧವನ್ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಧುನಿಕ ಪೀಠೋಪಕರಣಗಳು, ಅಲಂಕಾರಿಕ ದೀಪಗಳು, ಬಾಲ್ಕನಿಯಲ್ಲಿರುವ ಸುಂದರವಾದ ಅಪಾರ್ಟ್‌ಮೆಂಟ್‌ನಲ್ಲಿ ಕಾಣಬಹುದು.
ಸಿಕ್ಕಾಪಟ್ಟೆ ಬೈಕ್‌ಗಳ ಕ್ರೇಜ್ ಹೊಂದಿರುವ ಮ್ಯಾಡಿಯ ಸಂಗ್ರಹದಲ್ಲಿ BMW K1600 GLA, ಡುಕಾಟಿ ಡಯಾವಲ್ ಮತ್ತು ರೋಡ್ ಮಾಸ್ಟರ್, ಯಮಹಾ ವಿ-ಮ್ಯಾಕ್ಸ್ ಇವೆ. ಇಂಡಿಯನ್ ರೋಡ್ ಮಾಸ್ಟರ್ ಮಾಧವನ್ ಗ್ಯಾರೇಜ್‌ನಲ್ಲಿರುವ ಬೆಸ್ಟ್ ಬೈಕುಗಳಲ್ಲಿ ಒಂದಾಗಿದೆ.
ಬಾಲಿವುಡ್‌ಗೆ ಸೇರುವ ಮೊದಲೇ . ಜೂನ್ 6, 1999 ರಂದು ಏರ್ ಹೊಸ್ಟೆಸ್ ಆಗಿದ್ದ ಸರಿತಾ ಬಿರ್ಜೆ ಅವರನ್ನು ಮಾಧವನ್ ವಿವಾಹವಾದರು.
ಮಾಧವನ್ ಮೊದಲ ಬಾರಿಗೆ ಸರಿತಾ ಅವರನ್ನು 1991 ರಲ್ಲಿ ಭೇಟಿಯಾದರು.
ಮದುವೆಯಾದ 6 ವರ್ಷಗಳ ನಂತರ 2005 ರಲ್ಲಿ ಸರಿತಾ ಮಗ ವೇದಾಂತ್‌ಗೆ ಜನ್ಮ ನೀಡಿದರು.
ಮೊದಲು ಚೆನ್ನೈನ ಬೋಟ್ ಕ್ಲಬ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾಧವನ್ 2009 ರಲ್ಲಿ, ಹೆಂಡತಿ ಮತ್ತು ಮಗನೊಂದಿಗೆ ಮುಂಬೈನ ಕಂಡಿವಲಿಯಲ್ಲಿ ವಾಸಿಸಲು ಪ್ರಾರಂಭಿಸಿದರು.
ಬಿ-ಟೌನ್‌ನ ಹೆಚ್ಚು ವಿದ್ಯಾವಂತ ಸೆಲೆಬ್ರೆಟಿಗಳಲ್ಲಿ ಮಾಧವನ್ ಒಬ್ಬರು. ಸಾಕಷ್ಟು ಕಠಿಣ ಪರಿಶ್ರಮದ ನಂತರ ಕೊಲ್ಹಾಪುರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದ ಮ್ಯಾಡಿ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಗ್ರಿ ಪಡೆದಿದ್ದಾರೆ.
ಅವರು ಕೆನಡಾದಲ್ಲಿ ಭಾರತವನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಪ್ರತಿನಿಧಿಸಿದ್ದಾರೆ. ಅವರು ಮಹಾರಾಷ್ಟ್ರ ಸರ್ಕಾರದಿಂದ ಅತ್ಯುತ್ತಮ ಕೆಡೆಟ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.