MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸಿನಿಮಾಗೆ ಬರುವ ಮೊದಲು ಹೋಟೆಲ್‌ನಲ್ಲಿ ಮಾಣಿ ಆಗಿದ್ದ ಬಾಹುಬಲಿ ಬಿಜ್ಜಳದೇವ ನಟ ನಾಸರ್‌!

ಸಿನಿಮಾಗೆ ಬರುವ ಮೊದಲು ಹೋಟೆಲ್‌ನಲ್ಲಿ ಮಾಣಿ ಆಗಿದ್ದ ಬಾಹುಬಲಿ ಬಿಜ್ಜಳದೇವ ನಟ ನಾಸರ್‌!

ಖ್ಯಾತ ನಟ ನಾಸರ್ (Nassar)ಮಾರ್ಚ್ 5 ಶುಕ್ರವಾರ ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ನಾಸರ್  ತಮ್ಮ ಅದ್ಭುತ ನಟನೆಯಿಂದ ಜನಮನ ಗೆದ್ದಿದ್ದಾರೆ. ದಶಕಗಳಿಂದ ಹಲವಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಬೆಳ್ಳಿತೆರೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇಂದು ಅವರ ಜನ್ಮದಿನದಂದು, ನಟನ ಬಗ್ಗೆ  ತಿಳಿಯದಿರುವ ಕೆಲವು ಸಂಗತಿಗಳು ಇಲ್ಲಿವೆ 

2 Min read
Contributor Asianet | Asianet News
Published : Mar 05 2022, 06:02 PM IST
Share this Photo Gallery
  • FB
  • TW
  • Linkdin
  • Whatsapp
18

ಪುರಾತನ ಕಾಲದ ದುಷ್ಟ ರಾಜನ ಪಾತ್ರವಾಗಲಿ ಅಥವಾ ಪಕ್ಕದ ಮನೆಯವನ ಪಾತ್ರವಾಗಲಿ, ತನಗೆ ಸಿಕ್ಕಿದ ಪಾತ್ರವನ್ನು ಸುಲಭವಾಗಿ ಮಾಡುವ ಕಲೆ ನಾಸರ್ ಅವರಿಗೆ ಕರಗತ. ಯಾವ  ಪಾತ್ರವಾದರೂ ಸೈ ಎಂದು ನಾಸರ್‌ ಸಾಬೀತುಪಡಿಸಿದ್ದಾರೆ. 

28

ನಾಸರ್ ಅವರು ನಟನಾಗುವ ಮೊದಲು ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಅವರು ಆರ್ಥಿಕವಾಗಿ ಗಟ್ಟಿಯಾಗಲು ಹಲವು  ಕೆಲಸಗಳನ್ನು ಮಾಡಿದರು ಮತ್ತು ನಂತರ ಅವರು ನಟನಾ ಉದ್ಯಮಕ್ಕೆ ಕಾಲಿಟ್ಟರು.


 

38

ಅವರ ತಂದೆ ಅವರು ನಟರಾಗಬೇಕೆಂದು ಬಯಸಿದ್ದರು. ನಾಸರ್‌ಗಿಂತ ಹೆಚ್ಚಾಗಿ, ನಾಸರ್ ಅವರ ತಂದೆ ಮೆಹಬೂಬ್ ಬಾಷಾ ಅವರ ಮಗ ನಟರಾಗಬೇಕೆಂದು ಬಯಸಿದ್ದರು. ನಟನಾಗುವ ತನ್ನ ಇಚ್ಛೆಯ ಬಗ್ಗೆ ನಾಸರ್ ಹೇಳಿದಾಗ, ಅದಕ್ಕೆ ಅವರ ತಂದೆ ಸಂಪೂರ್ಣವಾಗಿ ಸಪೋರ್ಟ್ ಮಾಡಿದರು ಮತ್ತು  ಅಂತಿಮವಾಗಿ ಅದು ಅವರ ತಂದೆಯ ಕನಸೂ ಆಯಿತು.


 

48

ಕೆ ಬಾಲಚಂದರ್ ಅವರ ಕಲ್ಯಾಣ ಅಗತಿಗಳು ಚಿತ್ರದ ಮೂಲಕ ನಾಸರ್ ಅವರು ದ್ವಿತೀಯ ಪೋಷಕ ಪಾತ್ರವಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ, ಅವರು ಎಸ್ಪಿ ಮುತ್ತುರಾಮನ್ ಅವರ
ವೆಲೈಕಾರನ್ ಮತ್ತು ವನ್ನಾ ಕಣವುಗಲ್ನಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವ ಅವಕಾಶವನ್ನು ಪಡೆದರು. ನಂತರದ್ದೂ ಇತಿಹಾಸ.

58

ಅವರ 'ವಿಲಕ್ಷಣ ಆಕಾರದ ಮೂಗು' ಮತ್ತು 'ದೊಡ್ಡ ಹಣೆ'ಗಾಗಿ ನಾಸರ್  ಅವರು ಟೀಕೆಗೆ ಒಳಗಾಗಿದ್ದರು. ಆದಾಗ್ಯೂ, ಅವರು ಎಂದಿಗೂ ಅದಕ್ಕೆ ಗಮನ ಕೊಡಲಿಲ್ಲ ಮತ್ತು ಅಂತಿಮವಾಗಿ ತಮ್ಮ ಸಂಪೂರ್ಣ ಪ್ರತಿಭೆ ಮತ್ತು ನಿರ್ಣಯದಿಂದ ಯಶಸ್ಸಿನ ಮೆಟ್ಟಿಲನ್ನು ಏರಿದರು

68

ಕಮಲ್ ಹಾಸನ್ ಜೊತೆ ನಾಸರ್‌ ಸ್ನೇಹ. ಇಬ್ಬರು ಸೂಪರ್‌ಸ್ಟಾರ್‌ಗಳು ಉತ್ತಮ ಸ್ನೇಹವನ್ನು ಹಂಚಿಕೊಳ್ಳುತ್ತಾರೆ. ಕಮಲ್ ಹಾಸನ್ ಮತ್ತು ನಾಸರ್ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಒಮ್ಮೆ 'ಉತ್ತಮ್‌ ವಿಲೈನ್' ಚಿತ್ರದ ಚಿತ್ರೀಕರಣದ ವೇಳೆ ನಾಸರ್ ಪುತ್ರ ಅಪಘಾತಕ್ಕೀಡಾದಾಗ ಕಮಲ್ ಹಾಸನ್ ಶೂಟಿಂಗ್ ನಿಲ್ಲಿಸಿದ್ದರು.

78

ಒಬ್ಬ ನಟ, ನಿರ್ದೇಶಕ, ನಿರ್ಮಾಪಕ, ಗೀತರಚನೆಕಾರ ಮತ್ತು ಬರಹಗಾರರಾಗಿ ನಾಸರ್ ವಿವಿಧ ಟೋಪಿಗಳನ್ನು ಧರಿಸುತ್ತಾರೆ. ಆದರೆ ಇವುಗಳ ಹೊರತಾಗಿ ಅವರು ಗಾಯಕರೂ ಹೌದು ಎಂಬುದು ಹಲವರಿಗೆ ತಿಳಿದಿಲ್ಲ. ಅವರು ಕಮಲ್ ಹಾಸನ್ ಅವರ ಅವಧಾರಂನಲ್ಲಿ ಅರಿದಆರತೈ ಪೂಸಿಕೊಳ್ಳ ಆಸೆ ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿದ್ದಾರೆ.

88

ನಾಸರ್ ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 2002 ರಲ್ಲಿ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸೇರಿದಂತೆ ಕನಿಷ್ಠ ಐದು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿಯನ್ನು ಪಡೆದರು.

About the Author

CA
Contributor Asianet
ಹುಟ್ಟುಹಬ್ಬ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved