- Home
- Entertainment
- Cine World
- ರೊಮ್ಯಾಂಟಿಕ್ ಸಂಗಾತಿ ಬೇಕು.. ಪರಮಸುಂದರಿ ನಟಿ ಕೃತಿ ಸನೋನ್ ಹುಡುಗನಲ್ಲಿ ಇರಬೇಕಾದ ಕ್ವಾಲಿಟಿಗಳಿವು
ರೊಮ್ಯಾಂಟಿಕ್ ಸಂಗಾತಿ ಬೇಕು.. ಪರಮಸುಂದರಿ ನಟಿ ಕೃತಿ ಸನೋನ್ ಹುಡುಗನಲ್ಲಿ ಇರಬೇಕಾದ ಕ್ವಾಲಿಟಿಗಳಿವು
ಕೃತಿ ಸನೋನ್ ಅವರು 'ನೋ ಫಿಲ್ಟರ್ ನೇಹಾ' ನ ಇತ್ತೀಚಿನ ಸೀಸನ್‌ನಲ್ಲಿ ಕಾಣಿಸಿಕೊಂಡಾಗ ತನ್ನ ಡ್ರೀಂ ಬಾಯ್ ಬಗ್ಗೆ ಹೇಳಿದ್ದಾರೆ.

ನಟಿ ಕೃತಿ ಸನೋನ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಜನಮನದಿಂದ ದೂರವಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇತ್ತೀಚಿನ 'ನೋ ಫಿಲ್ಟರ್ ನೇಹಾ' ಕಾರ್ಯಕ್ರಮದಲ್ಲಿ ಕೊಂಚ ತಮ್ಮ ವೈಯಕ್ತಿಕ ಬದುಕಿನ ಇಣುಕುನೋಟ ನೀಡಿದ್ದಾರೆ.
'ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಕೃತಿ ಸನೋನ್, ಈ ಕಾರ್ಯಕ್ರಮದಲ್ಲಿ ತಮ್ಮ ಕನಸಿನ ಹುಡುಗನ ಬಗ್ಗೆ ಮಾತಾಡಿದ್ದಾರೆ.
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕೃತಿ ಸನೋನ್ ಇದುವರೆಗೂ ಬಾಲಿವುಡ್ ಡೇಟಿಂಗ್ ಗಾಸಿಪ್‌ಗಳಿಗೆ ಅಷ್ಟಾಗಿ ಸಿಲುಕಿಕೊಂಡಿಲ್ಲ. ತಾನು ಈ ಫಿಲ್ಟರ್ ನಿರ್ವಹಿಸಲು ನಿಜವಾಗಿಯೂ ಕಷ್ಟ ಪಟ್ಟಿರುವುದಾಗಿ ಕೃತಿ ಹೇಳಿದ್ದಾರೆ.
ನೇಹಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರೋಮೋವನ್ನು ಹಂಚಿಕೊಂಡಿದ್ದಾರೆ ಮತ್ತು ಪ್ರೋಮೋದಲ್ಲಿ, ಕೃತಿ ತನಗೆ 'ಪ್ರಾಮಾಣಿಕ, ನಿಷ್ಠಾವಂತ ಮತ್ತು ಅತ್ಯಂತ ಪ್ರೀತಿಯ' ಹುಡುಗ ಬೇಕು ಎಂದು ಹೇಳಿದ್ದಾರೆ.
ಇದಕ್ಕೆ ನೇಹಾ ನೀನು 7-8 ಜನರ ಬಗ್ಗೆ ಮಾತಾಡುತ್ತಿದ್ದೀಯೋ ಅಥವಾ ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದೀಯೋ ಎಂದು ಕಾಲೆಳೆದಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಕೂಡಾ ಕೃತಿ ಸನೋನ್ ತಮ್ಮ ಬಾಯ್‌ಫ್ರೆಂಡ್ ಹೇಗಿರಬೇಕೆಂದು ಮಾತಾಡಿದ್ದರು. ಆ ಸಮಯದಲ್ಲಿ ತಾವು ಸಿಂಗಲ್ ಎಂಬುದನ್ನು ಸಾರಿ ಸಾರಿ ಹೇಳಿದ್ದರು.
'ನಾನು ಸಿಕ್ಕಾಪಟ್ಟೆ ರೊಮ್ಯಾಂಟಿಕ್. ಹಾಗಾಗಿ, ನಾನು ರೊಮ್ಯಾಂಟಿಕ್ ಸಂಗಾತಿಯನ್ನು ಬಯಸುತ್ತೇನೆ. ಆತ ಸಿಕ್ಕಾಪಟ್ಟೆ ಪ್ರೀತಿಸಬೇಕು ಮತ್ತು ಪ್ರಾಮಾಣಿಕತೆ ಹೊಂದಿರಬೇಕು' ಎಂದಿದ್ದರು.
'ನಾನು ಜನರತ್ತ ಆಕರ್ಷಿತಳಾಗುತ್ತೇನೆ. ಮಹತ್ವಾಕಾಂಕ್ಷೆಯುಳ್ಳವಳಾಗಿರುತ್ತೇನೆ, ಪ್ರೇರೇಪಿಸುತ್ತೇನೆ. ನನಗೆ ಯಾವಾಗಲೂ ಸಂಗಾತಿಯಲ್ಲಿ ಆ ಸ್ಫೂರ್ತಿ ಬೇಕು. ಮತ್ತು ಹೌದು, ನನಗಿಂತ ಹೆಚ್ಚು ಎತ್ತರವಿರಬೇಕು' ಎಂದು ಕೃತಿ ಹೇಳಿದ್ದರು.
ಒಳ್ಳೆಯ ಹೃದಯವನ್ನು ಹೊಂದಿರುವ, ಕೇವಲ ಬಹಳಷ್ಟು ಪ್ರೀತಿಯನ್ನು ಹೊಂದಿರುವ, ಕೇವಲ ನಿಜವಾದ ಮತ್ತು ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರೂ ಬಯಸುತ್ತೇವೆ ಅಲ್ಲವೇ ಎಂಬುದು ಕೃತಿ ಆಂಬೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.