ಖುಷಿ ಕಪೂರ್ ಫೋಟೋ ವೈರಲ್; ಹೊಸ ಆವತಾರ ನೋಡಿ ದಂಗಾದ ಫ್ಯಾನ್ಸ್!
ಶ್ರೀದೇವಿಯವರ ಪುತ್ರಿ ಖುಷಿ ಕಪೂರ್ (Kushi Kapoor) ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಈ ನಡುವೆ, ಖುಷಿ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಖುಷಿಯ ಹೊಸ ಆವತಾರ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ ಮತ್ತು ಫೊಟೋ ಸಖತ್ ವೈರಲ್ ಆಗಿದೆ.

Khushi Kapoor
ಫೋಟೋದಲ್ಲಿ, ಖುಷಿ ಟು ಪೀಸ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಫೋಟೋದಲ್ಲಿ, ಖುಷಿ ತನ್ನ ಪರ್ಫೇಕ್ಟ್ ಫಿಗರ್ ತೋರಿಸುತ್ತಿದ್ದಾರೆ.
ಅವರು ಶೀರ್ಷಿಕೆಯಲ್ಲಿ ದಿಲ್ವಾಲಾ ಎಮೋಜಿಯನ್ನು ಮಾತ್ರ ಹಂಚಿಕೊಂಡಿದ್ದಾರೆ. ಖುಷಿ ಕಪೂರ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಆರು ಫೋಟೋಳನ್ನು ಪೋಸ್ಟ್ ಮಾಡಿದ್ದಾರೆ.
ಅದರಲ್ಲಿ ಅವರು ಕೆಲವು ಸೆಲ್ಫಿಗಳು, ಕೆಲವು ನಾಯಿಗಳ ಚಿತ್ರಗಳು, ಒಂದು ಫೋಟೋದಲ್ಲಿ ಅವರು ನಗುತ್ತಿರುವಂತೆ ಮತ್ತು ಒಂದು ಫೋಟೋದಲ್ಲಿ ಅವರು ಬೋಲ್ಡ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಖುಷಿ ಕಪೂರ್ ಅವರ ಈ ಫೋಟೋಗಳಿಗೆ ಮೊದಲು ಸಹೋದರಿ ಹಾಗೂ ಜಾನ್ವಿ ಕಪೂರ್ ತುಂಬಾ ಸುಂದರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
K
ಡಿಸೈನರ್ ಮನೀಶ್ ಮಲ್ಹೋತ್ರಾ ಬಹಳಷ್ಟು ಕೆಂಪು ಬಣ್ಣದ ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಸೆನ್ಸೇಷನ್ ಓರ್ಹಾನ್ ಅವತ್ರಮಣಿ ಕೆಂಪು ಹೃದಯದ ಎಮೋಜಿಯೊಂದಿಗೆ ಫ್ರೆಶ್ ಎಂದು ಕಾಮೆಂಟ್ ಮಾಡಿದ್ದಾರೆ.
ಬ್ಯೂಟಿ ಕ್ವೀನ್ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇ ಸಮಯದಲ್ಲಿ, ಅನೇಕರು ಹೃದಯ ಮತ್ತು ಫಾರ್ವರ್ಡ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
ಖುಷಿ ಕಪೂರ್ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಮೇರಿಕನ್ ಕಾಮಿಕ್ಸ್ ಆಧಾರಿತ ಸಂಗೀತದ ರೊಮ್ಯಾಂಟಿಕ್ ಡ್ರಾಮಾ ಚಲನಚಿತ್ರವಾದ ದಿ ಆರ್ಚೀಸ್‌ನೊಂದಿಗೆ ಖುಷಿ ಕಪೂರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇದರಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರವು ಈ ವರ್ಷದ ಕೊನೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
ಆರ್ಚೀಸ್ ಟೀಸರ್ ಅನ್ನು ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ವಾರ್ಷಿಕ ಫಂಕ್ಷನ್ ಟುಡೆಮ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಚಿತ್ರದ ಇಡೀ ತಂಡ ಅಮೋಘ ಪ್ರದರ್ಶನ ನೀಡಿತ್ತು. ಅದಿತಿ ಡಾಟ್, ವೇದಂಗ್ ರೈನಾ, ಮಿಹಿರ್ ಅಹುಜಾ ಮತ್ತು ಯುವರಾಜ್ ಮೆಂಡಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.