ಗೆಳತಿ ಮದುವೆಲಿ ಮಿಂಚಿದ 'ಮಹಾನಟಿ'; ಪಡ್ಡೆಗಳ ನಿದ್ದೆ ಕದ್ದ ಕೀರ್ತಿಯ ಸೀರೆ ಫೋಟೋ
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಆಗಾಗ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಕೊನೆಯದಾಗಿ ಮಹೇಶ್ ಬಾಬು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಆಗಾಗ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಕೊನೆಯದಾಗಿ ಮಹೇಶ್ ಬಾಬು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕೀರ್ತಿ ಸುರೇಶ್ ಮಹಾನಟಿ ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದರು. ಈ ಸಿನಿಮಾ ಬಳಿಕ ಕೀರ್ತಿ ಬೇಡಿಕೆ ಕೂಡ ಹೆಚ್ಚಾಯಿತು. ಈ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ.
ಕೀರ್ತಿ ಆಗಾಗ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುತ್ತಾರೆ. ಇದೀಗ ಕೀರ್ತಿ ಸೀರೆ ಫೋಟೋ ಹಂಚಿಕೊಂಡಿದ್ದಾರೆ. ಕೀರ್ತಿಯ ಸೀರೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೀರ್ತಿ ಇತ್ತೀಚಿಗಷ್ಟೆ ಸ್ನೇಹಿತೆಯ ಮದುವೆಗಾಗಿ ಕೇರಳಾಗೆ ತೆರಳಿದ್ದರು. ಗೆಳತಿಯ ಮದುವೆಯಲ್ಲಿ ಮಿಂಚಿದ ಸುಂದರ ಫೋಟೋಗಳನ್ನು ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕೀರ್ತಿ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.
ಕೀರ್ತಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಸರ್ಕಾರು ವಾರಿ ಪಾಟ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಮಟ್ಟದಲ್ಲಿ ಗೆಲವು ದಾಖಲಿಸಿಲ್ಲ. ಕೀರ್ತಿ ನಟನೆಯ ಸಾಲು ಸಾಲು ಸಿನಿಮಾಗಳು ನೆಲಕಚ್ಚಿವೆ. ರಂಗ್ ದೇ, ಅಣ್ಣಾತೆ, ಗುಡ್ ಲಕ್ ಸಖಿ, ಮಿಸ್ ಇಂಡಿಯಾ ಸೇರಿದಂತೆ ಅನೇಕ ಸಿನಿಮಾಗಳು ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ.
ಕೀರ್ತಿ ಬಳಿ ಸದ್ಯ ಅನೇಕ ಸಿನಿಮಾಗಳಿವೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ವಾಶಿ, ದಸರ ಮತ್ತು ಬೋಲ ಶಂಕರ ಸಿನಿಮಾಗಳಲ್ಲಿ ಕೀರ್ತಿ ನಟಿಸುತ್ತಿದ್ದಾರೆ.