- Home
- Entertainment
- Cine World
- ತಮಿಳು ಸ್ಟಾರ್ ಹೀರೋ ಜೊತೆ ಮದುವೆ ಆಫರ್ ಕೊಟ್ಟ ನಿರ್ದೇಶಕ: ನಟಿ ಕೀರ್ತಿ ಸುರೇಶ್ ಕೊಟ್ಟ ಉತ್ತರ ಸಖತ್ ವೈರಲ್!
ತಮಿಳು ಸ್ಟಾರ್ ಹೀರೋ ಜೊತೆ ಮದುವೆ ಆಫರ್ ಕೊಟ್ಟ ನಿರ್ದೇಶಕ: ನಟಿ ಕೀರ್ತಿ ಸುರೇಶ್ ಕೊಟ್ಟ ಉತ್ತರ ಸಖತ್ ವೈರಲ್!
ಪ್ರಸಿದ್ಧ ನಿರ್ದೇಶಕರೊಬ್ಬರು ಕೀರ್ತಿ ಸುರೇಶ್ ಮನೆಗೆ ಹೋಗಿ ಸ್ಟಾರ್ ಹೀರೋ ಜೊತೆ ಮದುವೆ ಆಗುವಂತೆ ಕೇಳಿದರಂತೆ. ಆ ನಿರ್ದೇಶಕನಿಗೆ ಕೀರ್ತಿ ಸುರೇಶ್ ನೀಡಿದ ಉತ್ತರ ಈಗ ವೈರಲ್ ಆಗಿದೆ.

ಕೀರ್ತಿ ಸುರೇಶ್ ತನ್ನ ಬಾಲ್ಯದ ಗೆಳೆಯ ಆಂಟೋನಿ ತಟ್ಟಿಲ್‌ನನ್ನು ಮದುವೆಯಾಗಿದ್ದಾರೆ. ಇದೀಗ ಪ್ರಸಿದ್ಧ ನಿರ್ದೇಶಕರೊಬ್ಬರು ಕೀರ್ತಿ ಸುರೇಶ್ ಮನೆಗೆ ಹೋಗಿ ಸ್ಟಾರ್ ಹೀರೋ ಜೊತೆ ಮದುವೆ ಆಗುವಂತೆ ಕೇಳಿದರಂತೆ. ಆ ನಿರ್ದೇಶಕನಿಗೆ ಕೀರ್ತಿ ಸುರೇಶ್ ನೀಡಿದ ಉತ್ತರ ಈಗ ವೈರಲ್ ಆಗಿದೆ.
ನಟರು, ನಟಿಯರ ಮಕ್ಕಳು ಸಿನಿಮಾಗೆ ಬಂದ ತಕ್ಷಣ ಇಂಡಸ್ಟ್ರಿ ಬಿಟ್ಟು ಹೋಗ್ತಾರೆ. ಕೀರ್ತಿ ಸುರೇಶ್ ಮಾತ್ರ ಹೋರಾಡಿ ಸ್ಟಾರ್ ಹೀರೋಯಿನ್ ಆದ್ರು. ಅವರ ತಾಯಿ ಮೇನಕಾ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಫೇಮಸ್. ತಂದೆ ಸುರೇಶ್ ನಿರ್ಮಾಪಕರಾಗಿದ್ದರಿಂದ ಕೀರ್ತಿಗೆ ಹೀರೋಯಿನ್ ಆಗೋಕೆ ಈಜಿಯಾಯ್ತು, ಆದ್ರೆ ಸಕ್ಸಸ್ಗಾಗಿ ತುಂಬಾ ಕಷ್ಟಪಟ್ಟರು.
ಮುಖ್ಯವಾಗಿ ತಮಿಳಿನಲ್ಲಿ ಬಾಡಿ ಶೇಮಿಂಗ್, ಅವರ ನಗು, ನಟನೆ, ಮೊದಲ ಸಿನಿಮಾ ಫೇಲ್ಯೂರ್ನಿಂದ ಬ್ಯಾಡ್ ಲಕ್ ಹೀರೋಯಿನ್ ಅಂತಾ ಅವರು ಎದುರಿಸಿದ ಟೀಕೆಗಳು ಕಡಿಮೆಯೇನಲ್ಲ. ಆದ್ರೆ ಇಂತಹ ಟೀಕೆಗಳಿಗೆ 'ಮಹಾನಟಿ' ಅನ್ನೋ ಒಂದೇ ಸಿನಿಮಾದಿಂದ ಉತ್ತರ ಕೊಟ್ಟರು.
ಕೀರ್ತಿ ಸುರೇಶ್ ಸೌತ್ ಇಂಡಿಯನ್ ಸಿನಿಮಾ ದಾಟಿ ಬಾಲಿವುಡ್ ಸಿನಿಮಾಗಳಲ್ಲೂ ಕಾಲಿಟ್ಟರು. ಆದ್ರೆ ಬೇಬಿ ಜಾನ್ ಸಿನಿಮಾ ಫೇಲ್ ಆಯ್ತು. ಮದುವೆ ನಂತರ ಕೀರ್ತಿ ಯಾವ ಸಿನಿಮಾಗಳಿಗೂ ಕಮಿಟ್ ಆಗ್ದೆ ಇರೋದ್ರಿಂದ ಸಿನಿಮಾ ಇಂಡಸ್ಟ್ರಿ ಬಿಡ್ತಾರಾ ಅನ್ನೋ ಅನುಮಾನ ಬರ್ತಿದೆ.
ಇದಿರಲಿ, ಕೀರ್ತಿ ಸುರೇಶ್ರನ್ನು ವಿಶಾಲ್ಗಾಗಿ ಕೇಳಿದ ವಿಷಯದ ಬಗ್ಗೆ ಡೈರೆಕ್ಟರ್ ಲಿಂಗುಸ್ವಾಮಿ ಹೇಳಿದ್ದಾರೆ. 2018ರಲ್ಲಿ ವಿಶಾಲ್ ಜೊತೆ ಲಿಂಗುಸ್ವಾಮಿ 'ಸಂಡೆಕೋಳಿ 2' ತೆಗೆದರು. ಇದು ವಿಶಾಲ್ 25ನೇ ಸಿನಿಮಾ. ಇದರಲ್ಲಿ ಕೀರ್ತಿ ಸುರೇಶ್ ಹೀರೋಯಿನ್ ಆಗಿ ಮಾಡಿದ್ರು.
ಕೀರ್ತಿ ಸುರೇಶ್ ಎಲ್ಲರ ಜೊತೆ ಪ್ರೀತಿಯಿಂದ, ಗೌರವದಿಂದ ಇರೋದನ್ನ ನೋಡಿ ವಿಶಾಲ್ ತಂದೆ ಕೀರ್ತಿನ ವಿಶಾಲ್ಗಾಗಿ ಕೇಳು ಅಂತ ಹೇಳಿದ್ರಂತೆ. ಅವರು ಹೇಳಿದಕ್ಕೆ ಲಿಂಗುಸ್ವಾಮಿ ಕೀರ್ತಿ ಮನೆಗೆ ಹೋದ್ರಂತೆ. ಕೀರ್ತಿ ಲಿಂಗುಸ್ವಾಮಿನ ನೋಡಿ ಯಾಕೆ ಬಂದಿದ್ದೀರಾ ಅಂತ ಕೇಳಿದ್ರೆ, ವಿಶಾಲ್ ತಂದೆ ನಿಮ್ಮನ್ನ ಕೇಳೋಕೆ ಹೇಳಿದ್ರು, ನಿಮ್ಮ ಇಷ್ಟ ಏನು ಅಂತ ಕೇಳಿದ್ರಂತೆ.
ಕೂಡಲೇ ಕೀರ್ತಿ ನಾನು ಸ್ಕೂಲ್ನಿಂದಲೇ ಒಬ್ಬರನ್ನ ಪ್ರೀತಿಸ್ತಿದ್ದೀನಿ ಅಂತ ಹೇಳಿದ್ರಂತೆ. ಸದ್ಯ ಅವರನ್ನೇ ಮದುವೆ ಮಾಡಿಕೊಂಡಿದ್ದಾರೆ. ಕೀರ್ತಿ ಬೆಳವಣಿಗೆಗೆ ಆ ಹುಡುಗ ತುಂಬಾ ಸಪೋರ್ಟ್ ಮಾಡಿದ್ದಾನೆ. ಕೀರ್ತಿ ಮದುವೆ 3 ದಿನ ಗೋವಾದಲ್ಲಿ ನಡೀತು. ನಾನು ಕೂಡ ಹೋದೆ. ತುಂಬಾ ಹತ್ತಿರದವರನ್ನೇ ಕರೆದಿದ್ರು ಅಂತ ಲಿಂಗುಸ್ವಾಮಿ ಹೇಳಿದ್ದಾರೆ. ಈ ವಿಷಯ ಈಗ ವೈರಲ್ ಆಗ್ತಿದೆ.