ಅಭಿಷೇಕ್‌ನೊಂದಿಗೆ ಬ್ರೇಕಪ್‌ ಆದ್ಮೇಲೆ ಜಯಾ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಕರೀಷ್ಮಾ!

First Published Mar 20, 2021, 4:06 PM IST

ಅಳಿಯ ನಿಖಿಲ್ ನಂದಾರ ಬರ್ತ್‌ಡೇ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಭಾಗಿಯಾಗಿತ್ತು. ನಿಖಿಲ್ ಅವರ ಕಸಿನ್ಸ್‌ ಕರಿಷ್ಮಾ ಕಪೂರ್ ಮತ್ತು ರಿದ್ಧಿಮಾ ಕಪೂರ್ ಕೂಡ ಈ ಸೆಲೆಬ್ರೇಷನ್‌ನಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯ ಕೆಲವು ಫೋಟೋಗಳನ್ನು ಕರಿಷ್ಮಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಇನ್ಸ್ಟಾ ಸ್ಟೋರಿಯ ಒಂದು  ಫೋಟೋದಲ್ಲಿ ಜಯಾ ಬಚ್ಚನ್ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವರ್ಷಗಳ ನಂತರ ಕರಿಷ್ಮಾ ಹಾಗೂ ಜಯಾ ಬಚ್ಚನ್‌ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಪೋಟೋ ಸಖತ್‌ ವೈರಲ್‌ ಆಗಿದೆ.