ಅತಿ ಬಿಗಿಯಾದ ಡ್ರೆಸ್, ಹೈ ಹೀಲ್ದ್ ಧರಿಸಿ ನೆಡೆಯಲು ಕಷ್ಟ ಪಟ್ಟ ಕರೀನಾ!
ಈ ವರ್ಷ ಫೆಬ್ರವರಿಯಲ್ಲಿ ಕರೀನಾ ಕಪೂರ್ ಕಿರಿಯ ಮಗ ಜೆಹ್‌ಗೆ ಜನ್ಮ ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಜೆಹ್ ಹುಟ್ಟಿದ ಕೆಲವು ತಿಂಗಳ ನಂತರ, ಕರೀನಾ ಆ್ಡಡ್ ಶೂಟ್‌ಗಳನ್ನು ಆರಂಭಿಸಿದರು. ಜಾಹೀರಾತಿನ ಚಿತ್ರೀಕರಣದ ವೇಳೆ ಅವರು ಮುಂಬೈನ ವಿವಿಧ ಸ್ಟುಡಿಯೋಗಳಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಆಕೆ ಜಾಹೀರಾತು ಚಿತ್ರೀಕರಣದಲ್ಲಿ, ಬೆಬೊ ತುಂಬಾ ಬಿಗಿಯಾದ ಕೆಂಪು ಉಡುಪನ್ನು ಧರಿಸಿದ್ದರು. ಕರೀನಾ ಈ ಶಾರ್ಟ್ ಡ್ರೆಸ್‌ನೊಂದಿಗೆ ಹೈ ಹೀಲ್ಡ್ ಧರಿಸಿದ್ದರು. ಹೊರಬಂದ ಫೋಟೋಗಳಲ್ಲಿ, ಅವರು ನಡೆಯಲು ಸಹ ಕಷ್ಟ ಪಡುತ್ತಿದ್ದಾರೆ. ಅಂದ ಹಾಗೆ, ಇದರ ನಡುವೆ ಕರೀನಾ ತನ್ನ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣವನ್ನು ಆರಂಭಿಸಿದ್ದಾರೆ.
ಕರೀನಾ ಕಪೂರ್ ಕೆಂಪು ಬಿಗಿಯಾದ ಡ್ರೆಸ್‌ನಲ್ಲಿ ಕಮರ್ಷಿಯಲ್ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ಪ್ರತಿ ಉಡುಪಿನಲ್ಲಿಯೂ ಗ್ಲಾಮರಸ್ ಆಗಿ ಕಾಣಿಸುತ್ತಾರೆ ಈ ದಿನಗಳಲ್ಲಿ ಅವರು ಚಿತ್ರೀಕರಣಗಳಲ್ಲಿ ನಿರತರಾಗಿದ್ದಾರೆ ಹಾಗೂ ಸಿನಿಮಾದ ಉಳಿದ ಭಾಗವನ್ನು ಪೂರ್ಣಗೊಳಿಸುತ್ತಿದ್ದಾರೆ.
ಕಿರಿಯ ಮಗನಿಗೆ ಜನ್ಮ ನೀಡಿದ ನಂತರ, ಕರೀನಾ ಕಪೂರ್ ಅವರ ತೂಕ ಕೂಡ ಸಾಕಷ್ಟು ಹೆಚ್ಚಾಗಿದೆ. ಆದರೆ ವರ್ಕೌಟ್ ಮಾಡುವ ಮೂಲಕ ತನ್ನ ವೈಯಟ್ ಮ್ಯಾನೇಜ್ ಮಾಡುತ್ತಿರುವ ಆಕೆ ಸಾಕಷ್ಟು ಫಿಟ್ ಆಗಿದ್ದಾರೆ.
ಈ ದಿನಗಳಲ್ಲಿ ಕರೀನಾ ಕಪೂರ್ ಆಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕರೀನಾ 5 ತಿಂಗಳ ಗರ್ಭಿಣಿಯಾಗಿದ್ದಾಗ, ದೆಹಲಿಗೆ ಹೋಗಿ ಈ ಚಿತ್ರದ ಕೆಲವು ಭಾಗಗಳನ್ನು ಶೂಟ್ ಮಾಡಿದ್ದರು.
ದೆಹಲಿಯಲ್ಲಿ 11 ತಿಂಗಳ ಚಿತ್ರೀಕರಣದ ನಂತರ, ಈಗ ಕರೀನಾ ಮತ್ತೆ ಅದೇ ಸಿನಿಮಾಕ್ಕಾಗಿ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಆ ಸಮಯದಲ್ಲಿ, ಆಕೆಯ ಬೇಬಿ ಬಂಪ್ ಕಾರಣದಿಂದಾಗಿ ತಯಾರಕರು ಚಿತ್ರದ ಹೆಚ್ಚಿನ ಭಾಗಗಳನ್ನು ಚಿತ್ರೀಕರಿಸಲು ಸಾಧ್ಯವಾಗಲಿಲ್ಲ.
ಶೂಟಿಂಗ್ ಸಂಬಂಧಿಸಿದ ಕೆಲವು ಫೋಟೋಗಳನ್ನು ಸಹ ಬಹಿರಂಗಪಡಿಸಲಾಯಿತು. ಅಲ್ಲಿ ಆಮೀರ್ ಖಾನ್ ಕರೀನಾಗೆ ದೃಶ್ಯವನ್ನು ವಿವರಿಸುತ್ತಿರುವುದು ಕಂಡು ಬಂದಿತ್ತು. ಬೆಬೊ ಕೈಯಲ್ಲಿ ಕಪ್ ಹಿಡಿದು ಅಮೀರ್ ಹೇಳಿದ ಮಾತುಗಳನ್ನು ಕೇಳುತ್ತಿದ್ದರು.
ಆಮೀರ್ ಖಾನ್ ಅವರ ಲಾಲಸಿಂಗ್ ಚಡ್ಡಾ 1994 ರ ಟಾಮ್ ಹ್ಯಾಂಕ್ಸ್ ಚಲನಚಿತ್ರ ಫಾರೆಸ್ಟ್ ಗಂಪ್ ನ ರಿಮೇಕ್. ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಅಮೀರ್ ಖಾನ್, ಕಿರಣ್ ರಾವ್ ಮತ್ತು ವಯಾಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ಮಿಸಿದ್ದಾರೆ.