ಕರೀನಾ ಮತ್ತೆ ಗರ್ಭಿಣಿ, ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ?
39 ವರ್ಷದ ಕರೀನಾ ಕಪೂರ್ ಮತ್ತೆ ಗರ್ಭಿಣಿಯಾಗಿದ್ದಾರೆ, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಹೇಳಬಹುದೆಂದು ಮನರಂಜನಾ ವೆಬ್‌ಸೈಟ್ ಪೀಪಿಂಗ್‌ಮೂನ್ ವರದಿ ಮಾಡಿದೆ. ಸೈಫ್ ಮತ್ತು ಕರೀನಾಗೆ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ. ಬಾಲಿವುಡ್‌ನ ಸೂಪರ್‌ಸ್ಟಾರ್ ಕರೀನಾ ಎರಡನೆಯ ಬಾರಿ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಮೊದಲ ಮಗ ತೈಮೂರು ಹುಟ್ಟಿದ ನಂತರ ಫಿಟ್ ಆಗಿರೋ ಕರೀನಾ ಬಾಡಿಗೆ ತಾಯಿ ಮೂಲಕ ಮಗು ಪಡೀತಾರಾ? ಏನು ಹೇಳ್ತಾರೆ ಸೈಫ್...
'ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಸೇರಲಿದ್ದಾರೆ ಎಂದು ಹೇಳಲು ನಮಗೆ ಸಂತೋಷವಾಗಿದೆ. ನಮ್ಮ ಎಲ್ಲ ಹಿತೈಷಿಗಳಿಗೆ ಧನ್ಯವಾದಗಳು, ಪ್ರೀತಿ ಮತ್ತು ಸಹಕಾರ ಇರಲಿ,' ಎಂದು ಕರೀನಾ ಮತ್ತು ಸೈಫ್ ಜಂಟಿ ಹೇಳಿಕೆ ನೀಡಿದ್ದಾರೆ ಸೈಫೀನಾ.
ಈ ಮೊದಲು ಚಾಟ್ ಶೋವೊಂದರಲ್ಲಿ ಕರೀನಾ ಮತ್ತು ಸೈಫ್ ತಮ್ಮ ಕುಟುಂಬವನ್ನು ಬೆಳೆಸಲು ಬಯಸುತ್ತಾರೆ ಎನ್ನುವ ಮೂಲಕ ಮತ್ತೊಂದು ಮುಗವಿನ ಸುಳಿವು ನೀಡಿದ್ದರು.
ತಮ್ಮ ಗುಡ್ ನ್ಯೂಸ್ ಚಿತ್ರದ ಪ್ರಚಾರದ ಸಮಯದಲ್ಲಿ, ಎರಡನೇ ಮಗುವಿನ ಬಗ್ಗೆ ಚರ್ಚಿಸುವಾಗ,ಈಗ ಅವರು ಮತ್ತು ಸೈಫ್ ತಮ್ಮ ಕೆಲಸದ ಬಗ್ಗೆ ಮಾತ್ರ ಗಮನಹರಿಸಲು ಬಯಸುತ್ತಾರೆ. ಮತ್ತು ಅವನಿಗೆ ಎರಡನೇ ಮಗುವಿಗೆ ಯಾವುದೇ ಪ್ಲಾನ್ ಇಲ್ಲ ಎಂದು ಹೇಳಿದ್ದರು ಬೇಬೊ.
ಮಗಳ ಪ್ರೆಗ್ನೆಸಿ ಸುದ್ದಿ ಬಗ್ಗೆ ಪಪ್ಪಾ ರಣಧೀರ್ ಕಪೂರ್ ಯಾವುದೇ ದೃಢೀಕರಣ ನೀಡಿಲ್ಲ, ಆದರೆ ಇಬ್ಬರು ಮಕ್ಕಳು ಇರಬೇಕು ಎಂದು ಹೇಳಿದರು.
ಕರೀನಾ ಮತ್ತು ಸೈಫ್ ಅವರ ಲವ್ ಸ್ಟೋರಿ ಕಾಣುವಷ್ಟು ಸರಳವಾಗಿಲ್ಲ. ತಶಾನ್ ಸಮಯದಲ್ಲಿ ಭೇಟಿಯಾದಾಗ, ಕರೀನಾ ಅವರ ವೃತ್ತಿಜೀವನದ ಗ್ರಾಫ್ ಕುಸಿದ್ದಿತ್ತು ಜೊತೆಗೆ ಶಾಹಿದ್ ಜೊತೆಯ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.
ವಿಚ್ಛೇದನದ ನಂತರ, ಸೈಫ್ ಒಬ್ಬಂಟಿಯಾಗಿದ್ದರು ಮತ್ತು ಕರೀನಾರ ಬಗ್ಗೆ ಹುಚ್ಚರಾಗಿದ್ದರು. ಇಬ್ಬರು ಒಟ್ಟಿಗೆ ಚಿತ್ರೀಕರಣ ಪ್ರಾರಂಭಿಸಿದಾಗ, ಸೈಫ್ ಪ್ರಪೋಸ್ ಮಾಡಿದಾಗ. ಕರೀನಾ ಸಂಪೂರ್ಣವಾಗಿ ನಿರಾಕರಿಸಿದರು, ನನಗೆ ನೀವು ತಿಳಿದಿಲ್ಲ ಎಂದು ಹೇಳಿದರು. ಕರೀನಾಳನ್ನು ಮೆಚ್ಚಿಸಲು, ಅವಳ ಹೆಸರಿನ ಟ್ಯಾಟೂ ಕೂಡ ಹಾಕಿಸಿಕೊಂಡರು ಸೈಫ್.
ಕರೀನಾ ಮತ್ತು ಸೈಫ್ 2012 ರ ಅಕ್ಟೋಬರ್‌ನಲ್ಲಿ ವಿವಾಹವಾದರು. ತೈಮೂರ್ ಜನಿಸಿದ್ದು 2016 ರ ಡಿಸೆಂಬರ್‌ನಲ್ಲಿ. ಅವನಿಗೆ ಈಗ ಮೂರೂವರೆ ವರ್ಷ. ಶಿಲ್ಪಾ ಶೆಟ್ಟಿಯಂತೆ ಬಾಡಿಗೆ ತಾಯಿಯಾಗುತ್ತಿದ್ದಾರಾ ಕರೀನಾ ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ.
ಕರೀನಾ ಶೀಘ್ರದಲ್ಲೇ ಅಮೀರ್ ಖಾನ್ ಎದುರು ಮುಂದಿನ ಚಿತ್ರ ಲಾಲ್ ಸಿಂಗ್ ಚಾಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಕರಣ್ ಜೋಹರ್ ಮಲ್ಟಿ ಸ್ಟಾರ್ ಸಿನಿಮಾ 'ತಖ್ತ್' ಗೆ ಸಹಿ ಹಾಕಿದ್ದಾರೆ, ಇದರಲ್ಲಿ ಅವರು ಅನಿಲ್ ಕಪೂರ್, ವಿಕ್ಕಿ ಕೌಶಲ್, ರಣವೀರ್ ಸಿಂಗ್, ಆಲಿಯಾ ಭಟ್, ಭೂಮಿ ಪೆಡ್ನೇಕರ್ ಮತ್ತು ಜಾಹ್ನವಿ ಕಪೂರ್ ಜೊತೆಯಲ್ಲಿದ್ದಾರೆ.