ಪುಷ್ಪ-2 ಸಿನಿಮಾ ಗಲ್ಲಾ ಪೆಟ್ಟಿಗೆಗೆ ಮೊದಲ ದಿನವೇ ₹18 ಕೋಟಿ ಹಾಕಿದ ಕನ್ನಡಿಗರು!
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಬಾಕ್ಸ್ ಆಫೀಸ್‌ನಲ್ಲಿ ಕಮಾಲದ ಮಾಡಿದೆ. ಮೊದಲ ದಿನವೇ ವಿಶ್ವಾದ್ಯಂತ ಸುಮಾರು 283 ಕೋಟಿ ರೂಪಾಯಿ ಗಳಿಸಿದ್ದು, 300 ಕೋಟಿ ಕ್ಲಬ್‌ಗೆ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಇದರಲ್ಲಿ ಕೇರಳ ಹಾಗೂ ತಮಿಳುನಾಡಿನವರನ್ನು ಮೀರಿಸಿ ಕನ್ನಡಿಗರೇ 18 ಕೋಟಿ ರೂ. ಆದಾಯವನ್ನು ಕೊಟ್ಟಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಪುಷ್ಪ-2 ಸುನಾಮಿ: ಡಿಸೆಂಬರ್ 5 ರಂದು ವಿಶ್ವಾದ್ಯಂತ ಬಿಡುಗಡೆಯಾದ ಅಲ್ಲು ಅರ್ಜುನ್ ಅವರ 'ಪುಷ್ಪ 2: ದಿ ರೂಲ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯಂತೆ ಓಪನಿಂಗ್ ಪಡೆದುಕೊಂಡಿದೆ.
300 ಕೋಟಿ ಕ್ಲಬ್‌ಗೆ 'ಪುಷ್ಪ 2': ಮೊದಲ ದಿನವೇ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಕ್ಲಬ್‌ಗೆ ಹತ್ತಿರವಾಗಿದೆ. ಇನ್ನೂ 17.09 ಕೋಟಿ ರೂಪಾಯಿ ಗಳಿಸಿದ್ದರೆ 300 ಕೋಟಿ ಗಡಿ ದಾಟುತ್ತಿತ್ತು.
ಚಿತ್ರ ವಿಮರ್ಶಕ ಮತ್ತು ಚಲನಚಿತ್ರ ಉದ್ಯಮದ ಟ್ರ್ಯಾಕರ್ ಮನೋಬಾಲ ವಿಜಯಬಾಲನ್ ಅವರ ಟ್ವೀಟ್ ಪ್ರಕಾರ, 'ಪುಷ್ಪ 2: ದಿ ರೂಲ್' ವಿಶ್ವಾದ್ಯಂತ ಮೊದಲ ದಿನ 282.91 ಕೋಟಿ ರೂಪಾಯಿ ಗಳಿಸಿದೆ.
ದೇಶ-ವಿದೇಶಗಳಲ್ಲಿ 'ಪುಷ್ಪ 2' ಗಳಿಕೆ ಎಷ್ಟು?:
ವಿಜಯನ್ ಅವರ ಟ್ವೀಟ್ ಪ್ರಕಾರ, ಭಾರತದಲ್ಲಿ 'ಪುಷ್ಪ 2' ಒಟ್ಟು 214.76 ಕೋಟಿ ರೂಪಾಯಿ ಗಳಿಸಿದರೆ, ವಿದೇಶಗಳಲ್ಲಿ ಮೊದಲ ದಿನ ಒಟ್ಟು 68.15 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಕರ್ನಾಟಕದ ಪಾಲು ಎಷ್ಟು?
ಆಂಧ್ರಪ್ರದೇಶ/ತೆಲಂಗಾಣದಲ್ಲಿ92.36 ಕೋಟಿ, ತಮಿಳುನಾಡಿನಲ್ಲಿ 10.71 ಕೋಟಿ, ಕರ್ನಾಟಕದಲ್ಲಿ 17.89 ಕೋಟಿ, ಕೇರಳದಲ್ಲಿ 6.56 ಕೋಟಿ ಮತ್ತು ಉತ್ತರ ಭಾರತದಲ್ಲಿ 87.24 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಅಲ್ಲು ಅರ್ಜುನ್ 'ಪುಷ್ಪ 2' ಚಿತ್ರದ ಬಜೆಟ್: ಸುಸುಕುಮಾರ್ ನಿರ್ದೇಶನದ 'ಪುಷ್ಪ 2' 400-500 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ. ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ರಾವ್ ರಮೇಶ್, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.