MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ಆಗಿರುವ ಜೋಡಿಗಳು; ಯಾರು 2ನೇ ಮದುವೆ ಆಗಿದ್ದಾರೆ?

ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ಆಗಿರುವ ಜೋಡಿಗಳು; ಯಾರು 2ನೇ ಮದುವೆ ಆಗಿದ್ದಾರೆ?

ಬೆಂಗಳೂರು (ಜೂ.09): ದಕ್ಷಿಣ ಭಾರತ ಹಾಗೂ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಉದ್ಯಮಿಗಳು, ನಿರ್ದೇಶಕರು, ವೈದ್ಯರು ಹಾಗೂ ನಟರನ್ನು ಮದುವೆಯಾಗಿ ಡಿವೋರ್ಸ್‌ ಆಗಿರುವ ಸ್ಟಾರ್ ನಟಿಯರು ಇಲ್ಲಿದ್ದಾರೆ ನೋಡಿ.. ಕೆಲವರು 2ನೇ ಮದುವೆಯಾದರೆ, ಇನ್ನು ಕೆಲವರು ಸಿಂಗಲ್ ಆಗಿಯೇ ಜೀವನ ನಡೆಸುತ್ತಿದ್ದಾರೆ.

3 Min read
Sathish Kumar KH
Published : Jun 09 2024, 08:39 PM IST| Updated : Jun 10 2024, 04:20 PM IST
Share this Photo Gallery
  • FB
  • TW
  • Linkdin
  • Whatsapp
111

ಪ್ರೇಮಾ: ನಟಿ ಪ್ರೇಮಾ 2006ರಲ್ಲಿ ಐಟಿ ಉದ್ಯಮಿ ಜೀವನ್ ಅಪ್ಪಚ್ಚು ಎಂಬುವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಚಿತ್ರರಂಗದಿಂದ ದೂರವಿದ್ದು, ಕುಟುಂಬ ನಿರ್ವಹಣೆಯಲ್ಲಿ ತೊಡಗಿದ್ದ ಪ್ರೇಮಾ 2016ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಈವರೆಗೆ ನಟಿ ಪ್ರೇಮಾ ಸಿಂಗಲ್ ಆಗಿದ್ದಾರೆ. ಇತ್ತೀಚೆಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದು ಮಾತನಾಡಿದ್ದು, ಒಳ್ಳೆಯ ವ್ಯಕ್ತಿ ಸಿಕ್ಕರೆ ಮದುವೆ ಆಗುವುದಾಗಿ ತಿಳಿಸಿದ್ದಾರೆ.

211

ನಿಧಿ ಸುಬ್ಬಯ್ಯ: ಕನ್ನಡ ಚಿತ್ರರಂಗದಲ್ಲಿ ಪಂಚರಂಗಿ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಬಂದ ನಿಧಿ ಸುಬ್ಬಯ್ಯ ಮೊದಲನೇ ಸಿನಿಮಾದಲ್ಲಿ ಯಶಸ್ಸು ಕಂಡಿದ್ದರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್​ ಅಂಗಳಕ್ಕೂ ಹೋಗಿ ಬಂದಿದ್ದಾರೆ. ನಂತರ ಲವೇಶ್​ ಎಂಬ ಉದ್ಯಮಿಯನ್ನು 2017ರಲ್ಲಿ ವಿರಾಜಪೇಟೆಯ ಖಾಸಗಿ ರೆಸಾರ್ಟ್‌​ನಲ್ಲಿ ಮದುವೆ ಆಗಿದ್ದರು. ಆದರೆ, ಮದುವೆಯಾಗಿ ವಿದೇಶಕ್ಕೆ ಹೋಗಿ ನೆಲೆಸಿ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ.

311

ಸೋನು ಗೌಡ: ಇಂತಿ ನಿನ್ನ ಪ್ರೀತಿಯ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಬೆಳ್ಳಿ ತೆರೆಗೆ ಕಾಲಿಟ್ಟ ಬಳುಕುವ ಬಳ್ಳಿ ಸೋನು ಗೌಡ ಅವರು ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ದಿಢೀರನೇ ಮನೋಜ್‌ ಕುಮಾರ್ ಅವರನ್ನು ಮದುವೆ ಆಗಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಗಂಡನ ಟಾರ್ಚರ್ ತಡೆದುಕೊಳ್ಳಲಾಗುತ್ತಿಲ್ಲ ಎಂದು ವಿಚ್ಛೇದನ ಕೊಟ್ಟು ಸಿಂಗಲ್ ಆಗಿ ಉಳಿದಿದ್ದಾರೆ.

411

ಮೀರಾ ಜಾಸ್ಮಿನ್ : ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ನಟಿ ಮೀರಾ ಜಾಸ್ಮಿನ್ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2014ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಅನಿಲ್ ಜಾನ್ ಟೈಟಸ್ ಅವರನ್ನು ಮದುವೆಯಾಗಿದ್ದರು. ಆದರೆಮ ಅನಿಲ್‌ ಜಾನ್ ಮೊದಲ ಹೆಂಡತಿಗೆ ಡಿವೋರ್ಸ್ ಕೊಡದೇ ಮೀರಾ ಜಾಸ್ಮಿನ್ ಅವರನ್ನು ಮದುವೆಯಾಗಿದ್ದರಿಂದ ಮೀರಾಳನ್ನು ಇಲ್ಲಿಯೇ ಬಿಟ್ಟು ಪತಿ ದುಬೈಗೆ ತೆರಳಿದ್ದರು. ಮೀರಾ ಅನಿಲ್ ಜಾನ್ ಅವರಿಂದ 2018ರಲ್ಲಿ ಡಿವೋರ್ಸ್ ಪಡೆದಿದ್ದಾರೆ.

511

ನಟಿ ಶ್ರುತಿ : ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದ ಶೃತಿ ಸಿನಿಮಾ ನಿರ್ದೇಶಕ ಎಸ್. ಮಹೇಂದರ್ ಅವರನ್ನು ಮದುವೆಯಾಗಿದ್ದರು. ಆದರೆ, 11 ವರ್ಷಗಳ ಸಂಸಾರ ನಡೆಸಿ ಇಬ್ಬರೂ ವಿಚ್ಛೇದನ ಪಡೆದು ದೂರಾದರು. ನಂತರ 2013ರಲ್ಲಿ ಶ್ರುತಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರನ್ನು ವಿವಾಹವಾದರು. ಅವರೊಂದಿಗೂ ಸಂಬಂಧ ಉಳಿಸಿಕೊಳ್ಳಲಾಗದೇ ಒಂದು ವರ್ಷದಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಈಗಲೂ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಸ್ತುತ ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋನ ಜಡ್ಜ್‌ ಆಗಿದ್ದಾರೆ.

611

ಅನು ಪ್ರಭಾಕರ್ : ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಅವರು 1999 ರಲ್ಲಿ ಹೃದಯ ಹೃದಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು . ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಅವರನ್ನು ಅನು ವಿವಾಹವಾದರು. ನಂತರ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ಅವರು 2014 ರಲ್ಲಿ ವಿಚ್ಛೇದನ ಪಡೆದರು. 2016 ರಲ್ಲಿ, ಅವರು ರೂಪದರ್ಶಿಯಾಗಿ ರೂಪುಗೊಂಡ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು.

711

ಊರ್ವಶಿ: ದಕ್ಷಿಣ ಭಾರತದ ಮತ್ತೊಬ್ಬ ನಟಿ ಊರ್ವಶಿ ಅವರು ಕೂಡ ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ಮನೋಜ್ ಕೆ.ಜಯನ್ ಅವರನ್ನು ಮದುವೆಯಾಗಿದ್ದರು. ಆದರೆ,ಮನೋಜ್ ಕುಟುಂಬದಲ್ಲಿ ಎಲ್ಲರೂ ಮದ್ಯವ್ಯಸನಿಗಳು ಎಂದು ಅವರಿಂದ 2008ರಲ್ಲಿ ವಿಚ್ಛೇದನ ಪಡೆದರು. ನಂತರ 2013ರ ನವೆಂಬರ್‌ನಲ್ಲಿ ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಅವರನ್ನು ವಿವಾಹವಾದರು.

811

ಅಮಲಾ ಪೌಲ್ : ಕಿಚ್ಚ ಸುದೀಪ್ ಜೊತೆಗೆ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ಅವರು ತಮಿಳು ನಿರ್ದೇಶಕ ಎ.ಎಲ್‌. ವಿಜಯ್ ಅವರನ್ನ ಮದುವೆಯಾಗಿದ್ದರು. ವಿವಾಹವಾದ 3 ವರ್ಷಗಳಿಗೆ ವಿಚ್ಛೇದನ ಪಡೆದರು. ಇತ್ತೀಚೆಗೆ ಜಗತ್ ದೇಸಾಯಿ ಅವರನ್ನ ಅಮಲಾ ಪೌಲ್ ಮದುವೆಯಾಗಿದ್ದು, ಮಕ್ಕಳಿಗೆ ತಾಯಿ ಆಗಿದ್ದಾರೆ.

911

ಸುಧಾರಾಣಿ : ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದ ಸುಧಾರಾಣಿ ಕನ್ನಡ, ತುಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ಯುಎಸ್‌ ಮೂಲದ ಅರಿವಳಿಕೆ ತಜ್ಞರಾದ ಡಾ. ಸಂಜಯ್ ಅವರನ್ನು 1996ರಲ್ಲಿ ವಿವಾಹವಾದರು. ನಂತರ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿ 1998ರಲ್ಲಿ ವಿಚ್ಛೇದನ ಪಡೆದರು. ನಂತರ 2000ನೇ ಇಸವಿಯಲ್ಲಿ ಗೋವರ್ಧನ್ ಎನ್ನುವವರನ್ನು ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.

1011

ಬಿಗ್‌ಬಾಸ್ 5ರ ಕ್ಯೂಟ್‌ ಜೋಡಿಯೆಂದೇ ಖ್ಯಾತಿ ಪಡೆದಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿಡಾಲ್ ಖ್ಯಾತಿಯ ನಿವೇದಿತಾ ಗೌಡ ಖ್ಯಾತಿ ಗಳಿಸಿದ್ದರು. ಬಳಿಕ ಚಂದನ್ ಶೆಟ್ಟಿ ಆ ಸೀಸನ್‌ ವಿನ್ನರ್ ಆಗಿದ್ದರು. ಬಿಗ್‌ಬಾಸ್‌ ಮುಗಿದ ಬಳಿಕ ಪ್ರೀತಿಯಲ್ಲಿ ಬಿದ್ದ ಜೋಡಿ ಬಳಿಕ ಮೈಸೂರಿನಲ್ಲಿ ಅಕ್ಟೋಬರ್ 21, 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ  ಫೆ. 26, 2020 ರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿತ್ತು. ಇದೀಗ ಬರೋಬ್ಬರಿ ನಾಲ್ಕೂವರೆ ವರ್ಷಗಳ ನಂತರ ಜೋಡಿ ಪರಸ್ಪರ ಒಪ್ಪಿಗೆ  ಮೇರೆಗೆ ವಿಚ್ಛೇದನ ಪಡೆದು ಬೇರೆ ಆಗುತ್ತಿದ್ದಾರೆ.

1111
yuva rajkumar and Sridevi Byrappa Divorce

yuva rajkumar and Sridevi Byrappa Divorce

ಕನ್ನಡ ಚಿತ್ರರಂಗದ ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರೂ ಬೇರೆ ಬೇರೆಯಾಗಿದ್ದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವ ರಾಜ್‌ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್​ನಿಂದ ನೋಟಿಸ್ ಜಾರಿಯಾಗಿದೆ. ಜೂನ್ 6 ರಂದು ಯುವರಾಜ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಮುಂದಿನ ತಿಂಗಳು ಜುಲೈ 4ಕ್ಕೆ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved