ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿರುವ ಟಾಪ್ ಸ್ಟಾರ್ಸ್!
ಬಾಲಿವುಡ್‌ನಲ್ಲಿ ನೆಪೋಟಿಸಂ ಚರ್ಚೆ ಬಹಳ ಹಿಂದಿನಿಂದಲ್ಲೂ ನಡೆದು ಬಂದಿದೆ ಮತ್ತು ನಟನ ನಟಿಯರ ಮಕಕ್ಳು ಸುಲಭವಾಗಿ ಸಿನಿಮಾದಲ್ಲಿ ವಾಕಾಶ ಪಡೆಯುವುದು ಸಹ ಎಲ್ಲರಿಗೂ ತಿಳಿದೇ ಇದೆ. ಆದರೆ ಯಾವುದೇ ಸಿನಿಮಾ ಹಿನ್ನಲೆ ಇಲ್ಲದೆ ಸಾಕಷ್ಷು ಪರಿಶ್ರಮದ ನಂತರ ನೆಲೆ ಕಂಡು ಕೊಂಡಿರುವ ಸ್ಟಾರ್ಸ್‌ಗಳು ಸಹ ಇದ್ದಾರೆ. ಅದೇ ರೀತಿ ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿರುವ ಟಾಪ್ ಸ್ಟಾರ್ಸ್.
4 ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿರುವ ನಟಿ ಕಂಗನಾ ರಣಾವತ್ ಬಾಲಿವುಡ್ ರಾಣಿ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ.
ಲವ್‌ರಂಜನ್ ಅವರ ಪ್ಯಾರ್ ಕಾ ಪಂಚನಾಮ ಸಿನಿಮಾದ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಹೊಸ ಪೀಳಿಗೆಯ ಸೂಪರ್‌ಸ್ಟಾರ್.
ತಾಪ್ಸಿ ಪನ್ನು ತಮ್ಮ ಪ್ರತಿಭೆ ಮತ್ತು ನಟನೆಯಿಂದ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇವರನ್ನು ಹಿಂದಿ ಸಿನಿಮಾದ ಮೊಸ್ಟ್ ಟ್ಯಾಲೆಂಟೆಡ್ ನಟಿಯರ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ.
ವಿಕ್ಕಿ ಕೌಶಲ್ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ರಾಝಿ, ಉರಿಗಳಂತಹ ಸಿನಿಮಾದಲ್ಲಿನ ಇವರ ಅಭಿನಯ ಸಖತ್ ಮೆಚ್ಚುಗೆ ಗಳಿಸುವುದರ ಜೊತೆಗೆ ಸ್ಟಾರ್ ಪಟ್ಟವನ್ನು ಪಡೆದಿದ್ದಾರೆ.
ಆಯುಷ್ಮಾನ್ ಖುರಾನಾ ಅವರು ರೇಡಿಯೋ ಜಾಕಿಯಿಂದ ಯಶಸ್ವಿ ತಾರೆಯವರೆಗಿನ ಹೋರಾಟಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇವರು ಟ್ಯಾಲೆಂಟೆಡ್ ನಟನ ಜೊತೆಗೆ ಉತ್ತಮ ಗಾಯಕ ಕೂಡ ಹೌದು.
18 ವರ್ಷಕ್ಕೆ ಮಿಸ್ ವರ್ಡ್ ಕೀರಿಟ ಗೆದ್ದ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಭದ್ರಪಡಿಸಿಕೊಂಡರು ಮತ್ತು ಪ್ರಸ್ತುತ ಹಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ.