'ಚಂದ್ರಮುಖಿ' ಚಿತ್ರದ ಸೆಟ್‌ನಲ್ಲಿ ಕಂಗನಾ ರಣಾವತ್ ಹೋಳಿ ಆಡಿದ್ದು ಹೇಗೆ ನೋಡಿ
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಹೋಳಿ ಆಡಿದ್ದಾರೆ. ಚಂದ್ರಮುಖಿ ಚಿತ್ರದ ಸೆಟ್‌ಗಳಲ್ಲಿ ಜನರಿಗೆ ಬಣ್ಣ ಬಳಿಯುತ್ತಿರುವ ಕಂಗನಾ ವೀಡಿಯೋ ಸಖತ್ ವೈರಲ್ ಆಗಿದೆ. ಈ ಸಮಯದಲ್ಲಿ, ಕಂಗನಾ ಕೈಯಲ್ಲಿ ಬಣ್ಣಗಳ ತಟ್ಟೆಯೊಂದಿಗೆ ಜನರ ಹಿಂದೆ ಓಡುತ್ತಿರುವುದನ್ನು ಕಾಣಬಹುದು.
ಬಾಲಿವುಡ್‌ನಲ್ಲೂ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹೋಳಿ ಹಬ್ಬದಂದು ಕಂಗನಾ ರಣಾವತ್ ಕೂಡ ಬಣ್ಣಗಳ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ.
ಕಂಗನಾ ಅವರ ಹೋಳಿ ವಿಡಿಯೋವೊಂದು ಹೊರಬಿದ್ದಿದ್ದು, ಕೈಯಲ್ಲಿ ಬಣ್ಣದ ತಟ್ಟೆ ಹಿಡಿದುಕೊಂಡು ಜನರ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ಕಂಗನಾರ ಮುಂದಿನ ಸಿನಿಮಾ ಚಂದ್ರಮುಖಿ ಸೆಟ್‌ನಿಂದ ಬಂದಿದೆ.
ಸ್ವತಃ ಈ ವೀಡಿಯೊವನ್ನು ಕಂಗನಾ ಹಂಚಿಕೊಂಡಿದ್ದು , 'ಚಂದ್ರಮುಖಿ ಸೆಟ್‌ನಲ್ಲಿ ಇಂದು ಬೆಳಗ್ಗೆ ಹೋಳಿ' ಎಂದು ಬರೆದಿದ್ದಾರೆ. ಈ ವೇಳೆ ಕಂಗನಾ ಬಿಳಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದಾರೆ.
ಕಂಗನಾ ಕೈಯಲ್ಲಿ ವಿವಿಧ ಬಣ್ಣಗಳನ್ನು ತುಂಬಿರುವ ಪ್ಲೇಟ್ ಇದೆ ಮತ್ತು ಜನರ ಹಿಂದೆ ಓಡಿ ಕಂಗನಾ ಬಣ್ಣವನ್ನು ಎಲ್ಲರಿಗೂ ಹಚ್ಚಿದ್ದಾರೆ: ಚಿತ್ರದ ತಂಡದ ಪ್ರತಿಯೊಬ್ಬ ಸದಸ್ಯರ ಹಿಂದೆ ಓಡುತ್ತಿರುವ ಕಂಗನಾರಿಂದ ತಪ್ಪಿಸಿಕೊಳ್ಳಲು ಜನರು ಪ್ರಯತ್ನಿಸುತ್ತಾರೆ.
ಈ ದಿನಗಳಲ್ಲಿ ಕಂಗನಾ 'ಚಂದ್ರಮುಖಿ 2' ಚಿತ್ರದ ಚಿತ್ರೀಕರಣದಲ್ಲಿದ್ದಾರೆ . ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ನೃತ್ಯ ಮಾಡುವ ನರ್ತಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಂದ್ರಮುಖಿ 2 ಚಿತ್ರದಲ್ಲಿ ಕಂಗನಾ ರಾಘವ್ ಲಾರೆನ್ಸ್ ಎದುರು ಕಾಣಿಸಿಕೊಳ್ಳಲಿದ್ದಾರೆ.ಚಂದ್ರಮುಖಿ 2' 2005 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅವರ ಹಾರರ್-ಕಾಮಿಡಿ 'ಚಂದ್ರಮುಖಿ' ಯ ಮುಂದುವರಿದ ಭಾಗ.
ಇದಲ್ಲದೆ ಕಂಗನಾ ರಣಾವತ್ ಅವರು 'ಎಮರ್ಜೆನ್ಸಿ' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಶ್ರೇಯಸ್ ತಲ್ಪಾಡೆ, ಅನುಪಮ್ ಖೇರ್ ಮತ್ತು ಮಿಲಿಂದ್ ಸೋಮನ್ ಸಹ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಮರ್ಜೆನ್ಸಿ ಕಂಗನಾ ಅವರು ಕೆಲಸ ಮಾಡುತ್ತಿರುವ 3ನೇ ಬಯೋಪಿಕ್ ಚಿತ್ರ. ಮೊದಲು ರಾಣಿ ಲಕ್ಷ್ಮೀಬಾಯಿ ಆಧಾರಿತ ಮಣಿಕರ್ಣಿಕಾ ಚಿತ್ರ ಮತ್ತು ನಂತರ ಅವರು ಜೆ ಜಯಲಲಿತಾ ಅವರ ಜೀವನಚರಿತ್ರೆ ತಲೈವಿಯಲ್ಲಿ ಕಾಣಿಸಿಕೊಂಡಿದ್ದಾರೆ.