- Home
- Entertainment
- Cine World
- ಪ್ರತಿ ಹೆಜ್ಜೆಯಲ್ಲೂ ನಿನ್ನ ಹೆಸರು ನನ್ನ ಹೃದಯದಲ್ಲಿ… ಶ್ರೀದೇವಿ ಹುಟ್ಟುಹಬ್ಬದಂದು ಭಾವುಕರಾದ ಜಾನ್ವಿ
ಪ್ರತಿ ಹೆಜ್ಜೆಯಲ್ಲೂ ನಿನ್ನ ಹೆಸರು ನನ್ನ ಹೃದಯದಲ್ಲಿ… ಶ್ರೀದೇವಿ ಹುಟ್ಟುಹಬ್ಬದಂದು ಭಾವುಕರಾದ ಜಾನ್ವಿ
ಜಾನ್ವಿ ಕಪೂರ್ ತನ್ನ ತಾಯಿ ಶ್ರೀದೇವಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ಅವರು ತಮ್ಮ ತಾಯಿಯೊಂದಿಗೆ ಕೆಲವು ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾವನಾತ್ಮಕ ನೋಟ್ ಬರೆದಿದ್ದಾರೆ.

ಶ್ರೀದೇವಿಯವರ ಹಠಾತ್ ನಿಧನ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಶ್ರೀದೇವಿ (Shridevi) ಇಬ್ಬರು ಹೆಣ್ಣುಮಕ್ಕಳಾದ ಜಾನ್ವಿ ಮತ್ತು ಖುಷಿ ಕಪೂರ್ ಇನ್ನೂ ಈ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ನಟಿಯ ಹಿರಿಯ ಮಗಳು ತನ್ನ ತಾಯಿಯೊಂದಿಗೆ ವಿಭಿನ್ನವಾದ ಬಾಂಧವ್ಯವನ್ನು ಹೊಂದಿದ್ದಳು.
ತಾಯಿ-ಮಗಳ ಸಂಬಂಧ ವಿಶ್ವದ ಅತ್ಯಂತ ಸುಂದರ ಸಂಬಂಧಗಳಲ್ಲಿ ಒಂದಾಗಿದೆ. ಅದಕ್ಕೇ ಜಾನ್ವಿ ಕಪೂರ್ ಮತ್ತು ಶ್ರೀದೇವಿ ಸಂಬಂಧ ಕೂಡ ಹೊರತಲ್ಲ. ಜಾನ್ವಿ (Janhvi Kapoor) ತಮ್ಮ ಬಾಲ್ಯದ ಕೆಲವು ಭಾವನಾತ್ಮಕ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ತಾಯಿಯೊಂದಿಗೆ ಸಮಯ ಕಳೆಯುತ್ತಿರುವುದು ಕಂಡುಬರುತ್ತದೆ.
ಮೊದಲ ಚಿತ್ರದಲ್ಲಿ, ಶ್ರೀದೇವಿ ತಮ್ಮ ಪುಟ್ಟ ಮಗಳು ಜಾನ್ವಿಯನ್ನು ಕೈಯಲ್ಲಿ ಹಿಡಿದಿದ್ದಾರೆ ಮತ್ತು ತಂದೆ ಬೋನಿ ಕಪೂರ್ ಅವರೊಂದಿಗೆ ನಿಂತಿದ್ದಾರೆ. ಬೋನಿಯ ಒಂದು ಕೈ ಶ್ರೀದೇವಿಯ ಭುಜದ ಮೇಲೆ ಇದ್ದರೆ, ಇನ್ನೊಂದು ಕೈ ಜಾನ್ವಿಯ ಪುಟ್ಟ ಕೈಯನ್ನು ಹಿಡಿದಿದೆ.
ಮತ್ತೊಂದು ಫೋಟೋದಲ್ಲಿ ಜಾನ್ವಿಗೆ ಮೂರು -ನಾಲ್ಕು ವರ್ಷ ಇರುವಂತೆ ಕಾಣಿಸುತ್ತಿದೆ, ಅದರಲ್ಲಿ ಶ್ರೀದೇವಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರೆ, ಜಾನ್ವಿ ಆಕಾಶ ನೀಲಿ ಬಣ್ಣದ ಫ್ರಾಕ್ ಧರಿಸಿದ್ದಾರೆ. ಇಬ್ಬರೂ ಕ್ಯಾಮೆರಾದ ಮುಂದೆ ಮುದ್ದಾಗಿ ಪೋಸ್ ನೀಡುತ್ತಿದ್ದಾರೆ.
ಇದಲ್ಲದೆ, ಮತ್ತೊಂದು ಫೋಟೋ ಫ್ಯಾಮಿಲಿ ಭಾವಚಿತ್ರವಾಗಿದ್ದು, ಇದರಲ್ಲಿ ಜಾನ್ವಿ ತನ್ನ ಟೀನೇಜ್ ನಲ್ಲಿ ಇರೋದನ್ನು ಕಾಣಬಹುದು. ಆಕೆಯ ಜೊತೆಗೆ ಶ್ರೀದೇವಿ, ಬೋನಿ ಕಪೂರ್ ಮತ್ತು ತಂಗಿ ಖುಷಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳ ಜೊತೆಗೆ, ಜಾನ್ವಿ "ನಾನು ಪ್ರತಿ ಹೆಜ್ಜೆಯಲ್ಲೂ ನನ್ನ ತಾಯಿಯ ಹೆಸರನ್ನು ಹೃದಯದಲ್ಲಿಟ್ಟುಕೊಂಡು ನಡೆಯುತ್ತೇನೆ" ಎಂಬ ಭಾವನಾತ್ಮಕ ಶೀರ್ಷಿಕೆಯನ್ನು ಬರೆದಿದ್ದಾರೆ.
ಈ ಪೋಸ್ಟ್‌ಗೆ ಅನೇಕ ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ಮಾಡಿದ್ದಾರೆ. ಶನಯಾ ಕಪೂರ್ ಹಾರ್ಟ್ ಎಮೋಜಿಯನ್ನು ಕಳುಹಿಸಿದ್ದಾರೆ. ಅಭಿಮಾನಿಯೊಬ್ಬರು "ಚಿತ್ರಗಳಲ್ಲಿನ ವಾತ್ಸಲ್ಯವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ" ಎಂದರೆ, ಮತ್ತೊಬ್ಬ ಫ್ಯಾನ್ ಜಾನ್ವಿ ನೀನು ಶ್ರೀದೇವಿಯಂತೆ ಕಾಣುತ್ತೀಯ ಎಂದು ಬರೆದಿದ್ದಾರೆ.
ಇನ್ನು ಜಾನ್ವಿ ಕಪೂರ್ ತಮ್ಮ ಕೆಲವು ಫೋಟೊಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ನೇರಳೆ ಮತ್ತು ಹಸಿರು ಬಣ್ಣದ ಲಂಗ ದಾವಣಿ ತೊಟ್ಟಿರುವ ಫೋಟೊ ಇದಾಗಿದೆ. ಹಿನ್ನೆಲೆಯಲ್ಲಿ ಹಸಿರು ಬೆಟ್ಟ ಗುಡ್ಡಗಳನ್ನು ಕಾಣಬಹುದು. ಅಂದ ಹಾಗೆ ಪ್ರತಿವರ್ಷ ಅಮ್ಮನ ಹುಟ್ಟುಹಬ್ಬಕ್ಕೆ ಶ್ರೀದೇವಿ ಜಾನ್ವಿ ತಿರುಪತಿಗೆ ಭೇಟಿ ನೀಡುತ್ತಾರೆ. ಇದು ಕೂಡ ಅಲ್ಲಿಯೇ ತೆಗೆಸಿರುವಂತಹ ಫೋಟೊ ಎನ್ನಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

