ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಜೊತೆ ತಿರುಪತಿಗೆ ಭೇಟಿ ನೀಡಿದ ಜಾನ್ವಿ ಕಪೂರ್!
ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kpaoor) ನಿನ್ನೆ ಅಂದರೆ ಮಾರ್ಚ್ 6ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಈ ಸಮಯದಲ್ಲಿ ನಟಿ ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ (Shikhar Pahariya) ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ನಿನ್ನೆ ತಮ್ಮ 27 ನೇ ಹುಟ್ಟುಹಬ್ಬದಂದು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ, ನಟಿ ತನ್ನ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಮತ್ತು ಸ್ನೇಹಿತ ಓರ್ರಿ (ಓರ್ಹಾನ್ ಅವತ್ರಮಣಿ) ಜೊತೆ ಭೇಟಿ ದೇವಸ್ಥನಾಕ್ಕೆ ಆಗಮಿಸಿದ್ದರು.
ಬುಧವಾರ ಮಧ್ಯಾಹ್ನ ದೇವಸ್ಥಾನಕ್ಕೆ ಭೇಟಿ ನೀಡಿದ ಜಾನ್ವಿ ನೇರಳೆ ಮತ್ತು ಕೆಂಪು ಬಣ್ಣದ ದಾವಣಿ ಲಂಗದಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಯಾವುದೇ ಮೇಕಪ್ ಇಲ್ಲದೆ ದಕ್ಷಿಣ ಭಾರತದ ಗೆಟ್‌ಪ್‌ನಲ್ಲಿ ಜಾನ್ವಿ ಇದ್ದರೆ ಮತ್ತೊಂದೆಡೆ, ಅವರ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಮತ್ತು ಸ್ನೇಹಿತ ಓರಿ ಕೂಡ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದರು.
ಗುರುವಾರ, ಅವರು ತನ್ನ ಜನ್ಮದಿನದಂದು ಧರಿಸಿದ ಉಡುಪಿನ ಕೆಲವು ಫೋಟೋಗಳನ್ನು ತನ್ನ Instagram ಖಾತೆಯಲ್ಲಿ ಹಂಚಿಕೊಂಡು 'ಜನ್ಮದಿನದ ಪ್ರೀತಿಗೆ ಧನ್ಯವಾದಗಳು' ಎಂದು ಬರೆದಿದ್ದಾರೆ.
ಜಾನ್ವಿ ಕಪೂರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, RRR ಸ್ಟಾರ್ ರಾಮ್ ಚರಣ್ ತೇಜಾ ಅವರ ಜೊತೆ ಹೊಸ ಚಿತ್ರವನ್ನೂ ಸಹ ಘೋಷಿಸಲಾಯಿತು. ಚಿತ್ರದ ಶೀರ್ಷಿಕೆ ಇನ್ನೂ ನಿರ್ಧಾರವಾಗಿಲ್ಲ.
ಇದಲ್ಲದೆ, ನಟಿ ದೇವರ: ಭಾಗ 1 ರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಜಾನ್ವಿಯ ತೆಲುಗು ಚೊಚ್ಚಲ ಚಿತ್ರವಾಗಿದ್ದು, ಅವರು ಮೊದಲ ಬಾರಿಗೆ RRR ನಟ ಜೂನಿಯರ್ NTR ಜೊತೆಗೆ ಪರದೆಯನ್ನು ಹಂಚಿಕೊಳ್ಳುತ್ತಾರೆ.
ಜೊತೆಗೆ, ಜಾನ್ವಿ ಅವರು ಗುಲ್ಶನ್ ದೇವಯ್ಯ ಎದುರು ಉಲಾಜ್ ಮತ್ತು ನಟ ರಾಜ್‌ಕುಮಾರ್ ರಾವ್ ಎದುರು ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಸಿನಿಮಾ ಕೂಡ ಅವರ ಖಾತೆಯಲ್ಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.