90ರ ಹಿರೋಯಿನ್ ಲುಕ್‌ನಲ್ಲಿ ಜಾಹ್ನವಿ..! ವಾವ್ ಥೇಟ್ ಶ್ರೀದೇವಿ ಥರಾನೇ..!
ಬಾಲಿವುಡ್ ನಟಿ ಜಾಹ್ನವಿ ಕಪೂರ್‌ಗೆ 90ರ ದಶಕದ ನಟಿಯಂತೆ ಅಲಂಕರಿಸಿಕೊಳ್ಳೋ ಆಸೆ ಆಗಿದೆ. ಅದನ್ನು ನೆರವೇರಿಸಿಕೊಂಡಿದ್ದಾರೆ ಕೂಡಾ. ಫೋಟೋಸ್ ಇಲ್ನೋಡಿ
ಬಾಲಿವುಡ್ ಕ್ಯೂಟ್ ನಟಿ ಜಾಹ್ನವಿ ಕಪೂರ್‌ಗೆ ಒಂದು ದಿನದ ಮಟ್ಟಿಗೆ 1950ರ ಚೆಲುವೆಯಾಗಿ ಬದುಕುವ ಮನಸಾಗಿದೆ. ಅದನ್ನು ನೆನೆಸಿದಂತೆ ನನಸು ಮಾಡಿದ್ದಾರೆ ಕೂಡಾ.
1950ರ ಚೆಲುವೆಯಂತೆ ಅಲಂಕರಿಸಿಕೊಂಡ ಜಾಹ್ನವಿ ಥೇಟ್ ಅಮ್ಮನಂತೆಯೇ ಕಾಣಿಸಿದ್ದಾರೆ. ಅದೇ ಮುಖ, ಸಿಂಪಲ್ ಲುಕ್‌ನಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ.
ನೀಳ ಕಣ್ರೆಪ್ಪೆ ಸರಳವಾದ ಅಲಂಕಾರದಲ್ಲಿ ಜಾಹ್ನವಿ ಅಪ್ಪಟ 90ರ ನಟಿಯಂತೆಯೇ ಕಾಣಿಸಿದ್ದಾರೆ
ಫುಲ್‌ಸ್ಲೀವ್ಸ್ ಬ್ಲೌಸ್, ತಿಳಿ ಬಣ್ಣದ ಸೀರೆಯುಟ್ಟು ಗಲ್ಲಕ್ಕೆ ಕೈಕೊಟ್ಟು ನಯವಾದ ಪೋಸ್ ಕೊಟ್ಟಿದ್ದಾರೆ ನಟಿ.
ಇನ್ನೊಂದು ಫೋಟೋದಲ್ಲಿ ದೊಡ್ಡ ಮುತ್ತಿನ ಇಯರಿಂಗ್ಸ್ ಧರಿಸಿ, ದೊಡ್ಡ ಉಂಗುರ ಧರಿಸಿ, ಕೆಂಪು ಬಿಂದಿ ಇಟ್ಟು, ಕಾಡಿಗೆ ಇಲ್ಲದ ಕಂಗಳು, ಕೆಂಬಣ್ಣದ ಲಿಪ್‌ಸ್ಟಿಕ್ ಹಚ್ಚಿದ್ದಾರೆ.
ನಟಿಯರಿಗೂ ಎಂಥೆಂಥಾ ಆಸೆಗಳು ಬರುತ್ತಲ್ವಾ..? ಸ್ವಲ್ಪ ವಿಶೇಷ ಅನಿಸಿದ್ರೂ ಅನಿಸಿದ್ದನ್ನು ಮಾಡೋ ಜಾಹ್ನವಿ ನೇಚರ್ ಸ್ವಲ್ಪ ಡಿಫರೆಂಟ್ ಅಲ್ವಾ..?