ಬಾಲಿವುಡ್ ಸುಂದರಿಯರ ಮಸ್ತ್ ಪೋಸ್; ಜಾನ್ವಿ, ಸಾರಾ ಕ್ಯಾಮರಾಗೆ ಸೆರೆಯಾಗಿದ್ದು ಹೀಗೆ
ಬಾಲಿವುಡ್ ನಟಿ ಜಾನ್ವಿ ಕಪೂರ್ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಜಾನ್ವಿ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಾನ್ವಿ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಜಾನ್ವಿ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಾನ್ವಿ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಧಡಕ್ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. 2018ರಲ್ಲಿ ಜಾನ್ವಿ ಸಿನಿಮಾರಂಗ ಪ್ರವೇಶ ಪಡೆದರು. ತಾಯಿಯ ನಿಧನದ ಬಳಿಕ ಬಣ್ಣ ಹಚ್ಚಿದ ಜಾನ್ವಿಯನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು.
ಜಾನ್ವಿ ಹೊಸ ಫೋಟೋಗಳು ವೈರಲ್ ಆಗಿವೆ. ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿರುವ ಜಾನ್ವಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಅಂದಹಾಗೆ ಈ ಬಟ್ಟೆಯ ಬೆಲೆ ಬರೋಬ್ಬರಿ 35 ಸಾವಿರ ರೂಪಾಯಿ. ಕ್ಯಾಮರಾ ಮುಂದೆ ಕ್ಯೂಟ್ ಪೋಸ್ ನೀಡಿರುವ ಜಾನ್ವಿಯ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜಾನ್ವಿ ಸದ್ಯ ಗುಡ್ ಲಕ್ ಜೆರ್ರಿ, ಮಿಲಿ, ಮಿಸ್ಟರ್ ಅಂಡ ಮಿಸ್ಸಸ್ ಮಹಿ, ಬವಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆ ಜಾನ್ವಿ ವೆಬ್ ಸೀರಿಸ್‌ನಲ್ಲೂ ಮಿಂಚಿದ್ದಾರೆ.
ಬಾಲಿವುಡ್‌ನ ಮತ್ತೋರ್ವ ಸ್ಟಾರ್ ಕಿಡ್ ಸಾರಾ ಅಲಿ ಖಾನ್ ಕೂಡ ಆಗಾಗ ಹೊಸ ಫೋಟೋ ಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸಾರಾ ಕೂಡ ಜಾನ್ವಿ ಹಾಗೆ 2018ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಸುಶಾಂತ್ ಸಿಂಗ್ ಜೊತೆ ಕೇದಾರನಾಥ್ ಸಿನಿಮಾ ಮೂಲಕ ಸಾರಾ ಸಿನಿಮಾ ಜರ್ನಿ ಪ್ರಾರಂಭ ಮಾಡಿದರು.
ಸಾರಾ ಕೊನೆಯದಾಗಿ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಸಾರಾ ಬಳಿ ಅನೇಕ ಸಿನಿಮಾಗಳಿವೆ.
ನಟಿಮಣಿಯರಿಗೆ ಫಿಟ್ನೆಸ್ ಕ್ರೇಜ್ ಜಾಸ್ತಿ. ಪರದೆ ಮೇಲೆ ಸುಂದರವಾಗಿ ಕಾಣಿಸಿಕೊಳ್ಳಲು ಜಿಮ್, ವರ್ಕೌಟ್, ಡಯಟ್ ಅಂತ ಮಾಡುತ್ತಾರೆ. ಸಾರಾ ಕೂಡ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಸಾರಾ ಜಿಮ್‌ಗೆ ಹೋಗುತ್ತಿರುವ ಫೋಟೋಗಳು ವೈರಲ್ ಆಗಿವೆ.