ಪುಷ್ಪ ಸಿನಿಮಾ ನಿರ್ಮಾಪಕರ ಮೇಲೆ ಐಟಿ ದಾಳಿ: 1850 ಕೋಟಿ ರೂ. ಕಲೆಕ್ಷನ್ ನಕಲಿಯೇ?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆ ಹಾಗೂ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರತಂಡಕ್ಕೆ ಸರ್ಕಾರ ಶಾಕ್ ಕೊಟ್ಟಿದೆ. ದೇಶದಾದ್ಯಂತ ಪುಷ್ಪ ಸಿನಿಮಾ ರಿಲೀಸ್, ಕಲೆಕ್ಷನ್ ವಿವಾದಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರಕ್ಕೆ ಈಗ ಐಟಿ ದಾಳಿ ಆಗಿದೆ. ಇದೀಗ 1850 ಕೋಟಿ ರೂ. ಕಲೆಕ್ಷನ್ ಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು ಸುಳ್ಳೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ..

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆ ಹಾಗೂ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರತಂಡಕ್ಕೆ ಸರ್ಕಾರ ಶಾಕ್ ಕೊಟ್ಟಿದೆ. ದೇಶದಾದ್ಯಂತ ಪುಷ್ಪ ಸಿನಿಮಾ ರಿಲೀಸ್, ಕಲೆಕ್ಷನ್ ವಿವಾದಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರಕ್ಕೆ ಈಗ ಐಟಿ ದಾಳಿ ಆಗಿದೆ. ಇದೀಗ 1,850 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು ಸುಳ್ಳೇ? ಎಂಬ ಅನುಮಾನ ಅಭಿಮಾನಿಗಳಿಂದ ಮೂಡಿದೆ..
ಪುಷ್ಪ ಸಿನಿಮಾ ನಿರ್ಮಾಪಕರಿಗೆ ಶಾಕ್ ನೀಡಿದೆ. ಜನವರಿ 21, 2025 ರಂದು ಮಂಗಳವಾರ ಬೆಳಗ್ಗೆ ತೆಲಂಗಾಣ ಫಿಲಂ ಡೆವಲಪ್‌ಮೆಂಟ್ ಕಾರ್ಪೊರೇಷನ್ ಅಧ್ಯಕ್ಷ ನಿರ್ದೇಶಕ ದಿಲ್ ರಾಜು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪುಷ್ಪ ಸಿನಿಮಾ ನಿರ್ಮಾಪಕರ ಮೈತ್ರಿ ಮೂವಿ ಮೇಕರ್ಸ್ ಮೇಲೂ ದಾಳಿಯಾಗಿದೆ.
ದಿಲ್ ರಾಜು ಜೊತೆಗೆ ಪುಷ್ಪ-2 ನಿರ್ಮಾಪಕರಾದ ನವೀನ್ ಎರ್ನೇನಿ ಮತ್ತು ಸಿಇಒ ಚೆರ್ರಿ ಅವರ ಮನೆ ಮತ್ತು ಕಚೇರಿಯ ಮೇಲೂ ಐಟಿ ದಾಳಿ ನಡೆದಿದೆ. ಪುಷ್ಪ-2 ಸಿನಿಮಾ ವಿಶ್ವಾದ್ಯಂತ 1850 ಕೋಟಿ ರೂ. ಗಿಂತ ಹೆಚ್ಚು ಗಳಿಕೆ ಮಾಡಿದೆ ಎಂದು ನಿರ್ಮಾಪಕರು ಘೋಷಿಸಿದ್ದರು. ಚಿತ್ರದ ಹಕ್ಕುಗಳು, ಕಲೆಕ್ಷನ್‌ಗಳ ಅಧಿಕೃತ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಪುಷ್ಪ 2 ಜೊತೆಗೆ ಎನ್‌ಟಿಆರ್‌ರ 'ದೇವರ' ಚಿತ್ರಕ್ಕೆ ಹಣ ಹೂಡಿದ್ದ ರಂಗಯ್ಯ, ಅಭಿಷೇಕ್ ಅಗರ್ವಾಲ್ ಮೇಲೂ ದಾಳಿ ನಡೆದಿದೆ.
ಪುಷ್ಪ ಸಿನಿಮಾದ ಕಲೆಕ್ಷನ್ ಲೆಕ್ಕಾಚಾರಗಳಲ್ಲಿ ಎಷ್ಟು ನಿಜ, ಎಷ್ಟು ನಕಲಿ ಎಂಬ ಪ್ರಶ್ನೆ ಈಗ ಎದ್ದಿದೆ. ನಿರ್ಮಾಪಕರು ತಮ್ಮ ಚಿತ್ರಗಳ ಕಲೆಕ್ಷನ್‌ಗಳನ್ನು ಅಭಿಮಾನಿಗಳಿಗಾಗಿ ಬಹಿರಂಗವಾಗಿ ಘೋಷಿಸುತ್ತಿದ್ದಾರೆ. ನೂರಾರು ಕೋಟಿ ಗಳಿಕೆ ಎಂದು ಪೋಸ್ಟರ್‌ಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಸಿನಿಮಾ ಗಳಿಸಿದ ನೈಜ ಹಣಕ್ಕಿಂದ, ಹೆಚ್ಚಿನ ಕಲೆಕ್ಷನ್ ಹೇಳಿ ಪ್ರೇಕ್ಷಕರನ್ನು ಆಕರ್ಷಿಸಲು ಯತ್ನಿಸುತ್ತಿದ್ದಾರೆಯೇ? ಅಥವಾ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಮಾಡುವ ಸಂಚು ಮಾಡಿದ್ದಾರೆಯೇ ಎಂಬ ಅನುಮಾನ ಎದುರಾಗಿದೆ.
ತೆಲುಗು ಚಿತ್ರರಂಗದ ರಾಮ್ ಚರಣ್ ನಟನೆಯ 'ಗೇಮ್ ಚೇಂಜರ್' ಚಿತ್ರಕ್ಕೆ ಮೊದಲ ದಿನವೇ ನೆಗೆಟಿವ್ ಟಾಕ್ ಬಂದಿತ್ತು. ಆದರೆ ನಿರ್ಮಾಪಕರು ಬಿಡುಗಡೆ ಮಾಡಿದ ಪೋಸ್ಟರ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಮೊದಲ ದಿನವೇ ಗೇಂf ಚೇಂಜರ್ ಸಿನಿಮಾ ಬರೋಬ್ಬರಿ 186 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಿದ್ದರು. ಈ ಚಿತ್ರಕ್ಕೆ ಇಷ್ಟು ದೊಡ್ಡ ನೆಗೆಟಿವ್ ಟಾಕ್ ಬಂದಿದ್ದರೂ ಇಷ್ಟೊಂದು ದೊಡ್ಡಮಟ್ಟದ ಕಲೆಕ್ಷನ್ ಹೇಗೆ ಬಂದಿದೆ ಎಂಬ ಚರ್ಚೆ ನಡೆದಿತ್ತು. ದಿಲ್ ರಾಜು ಮೇಲೆ ಐಟಿ ದಾಳಿಗೆ ಈ ಪೋಸ್ಟರ್ ಕೂಡ ಒಂದು ಕಾರಣ ಎನ್ನಲಾಗಿದೆ.
ತೆಲುಗು ಚಿತ್ರರಂಗದ ಅನೇಕ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುವುದಾಗಿ ಘೋಷಣೆ ಮಾಡಿದ್ದರೂ, ಸಿನಿಮಾ ರಿಲೀಸ್‌ಗೂ ಒಂದು ವಾರ ಮುಂಚೆಯೇ 200 ಕೋಟಿ ರೂ. ಗಳಿಕೆ, 100 ಕೋಟಿ ರೂ. ಗಳಿಕೆ ಮಾಡಲಾಗಿದೆ ಎಂದು ನಿರ್ಮಾಪಕರು ಹಾಗೂ ಚಿತ್ರತಂಡಗಳು ಪೋಸ್ಟರ್‌ಗಳ ಮೂಲಕ ಪ್ರಚಾರ ಮಾಡಿದ್ದವು. ಪುಷ್ಪ-2 ದೇಶದಲ್ಲೇ ಇಂಡಸ್ಟ್ರಿ ಹಿಟ್, 1860 ಕೋಟಿ ರೂ. ಗಳಿಕೆ ಎಂದು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದರು. ಅದಕ್ಕಾಗಿಯೂ ಅವರ ಮೇಲೆ ದಾಳಿ ನಡೆದಿದೆ.