ಭಾರತದಲ್ಲಿ ಶ್ರೀಮಂತ ಅಂದ್ರೆ ಮುಖೇಶ್ ಅಂಬಾನಿ.. ಆದ್ರೆ ರಿಚೆಸ್ಟ್ ಸಿಂಗರ್ ಬಗ್ಗೆ ನಿಮಗೆಷ್ಟು ಗೊತ್ತು? ಆಸ್ತಿ ಎಷ್ಟು ಅಂತೀರಾ?
ಭಾರತದಲ್ಲಿ ಅತಿ ದೊಡ್ಡ ಶ್ರೀಮಂತ ಅಂದ್ರೆ ಪಟ್ ಅಂತ ಮುಖೇಶ್ ಅಂಬಾನಿ ಅಂತಾರೆ. ಹಾಗೇನೇ ರಿಚೆಸ್ಟ್ ಹೀರೋ, ಹೀರೋಯಿನ್ ಅಂದ್ರೂ ಒಬ್ಬಿಬ್ಬರ ಹೆಸರು ಹೇಳ್ತೀವಿ. ಆದ್ರೆ ರಿಚೆಸ್ಟ್ ಸಿಂಗರ್ ಅಂದ್ರೆ..? ಊಹಿಸೋಕೂ ಆಗಲ್ಲ. ಅಂಥದ್ರಲ್ಲಿ ಒಬ್ಬ ಇಂಡಿಯನ್ ಸಿಂಗರ್ ಆಸ್ತಿ ಬೆಲೆ ರೂ. 1728 ಕೋಟಿ ಅಂದ್ರೆ ನಂಬ್ತೀರಾ?
ಭಾರತೀಯ ಸಿನಿಮಾಗಳಲ್ಲಿ ಸಂಗೀತ, ಹಾಡುಗಳು ಬಹಳ ಮುಖ್ಯ. ಕೆಲವೊಮ್ಮೆ ಇವೇ ಸಿನಿಮಾ ಹಿಟ್ ಆಗೋಕೆ ಕಾರಣ. ಆದ್ರೆ ಸಿನಿಮಾಗಳಲ್ಲಿ ಇಷ್ಟು ಮುಖ್ಯ ಪಾತ್ರ ವಹಿಸೋ ಮ್ಯೂಸಿಕ್ ಡೈರೆಕ್ಟರ್, ಸಿಂಗರ್ಸ್‌ಗೆ ಅಷ್ಟಾಗಿ ಮಹತ್ವ ಇರಲ್ಲ. ಅದ್ರಲ್ಲೂ ಗಾಯಕರ ಪರಿಸ್ಥಿತಿ ತುಂಬಾ ಕಷ್ಟ. ಕೆಲವು ಸಿಂಗರ್ಸ್ ಸಾವಿರ-ಎರಡು ಸಾವಿರಕ್ಕೆ ಹಾಡಿದ್ದಿದೆ ಅಂತ ನಾವು ಕೇಳಿದ್ದೇವೆ. ಎಲ್ಲಾ ಸಿಂಗರ್ಸ್ ಅರ್ಜಿತ್, ದಿಲ್ಜಿತ್ ದೋಸಾಂಜ್ ತರ ಒಂದು ಹಾಡಿಗೆ ಕೋಟಿ ಕೋಟಿ ತಗೋತಾರೆ ಅಂತ ತಿಳ್ಕೊಂಡ್ರೆ ಅದು ತಪ್ಪು. ಹೀಗೆ ಕೋಟಿ ಕೋಟಿ ಸಂಪಾದಿಸೋ ಪ್ರೊಫೆಷನಲ್ ಸಿಂಗರ್ಸ್‌ಗಿಂತ ಹೆಚ್ಚು ಆಸ್ತಿ ಅಪ್ಪಿ ತಪ್ಪಿ ಹಾಡೋ ಒಬ್ಬ ಸಿಂಗರ್ ಹತ್ರ ಇದೆ ಅನ್ನೋದು ನಿಜ. ಹಾಗಾದ್ರೆ ಯಾರು ಆ ಹೆಚ್ಚು ಸಂಪಾದಿಸಿ, ದೊಡ್ಡ ಆಸ್ತಿ ಮಾಡಿದ ಭಾರತೀಯ ಗಾಯಕರು ಅಂತ ತಿಳ್ಕೊಳ್ಳೋಣ.
ದಿಲ್ಜಿತ್ ದೋಸಾಂಜ್
ದಿಲ್ಜಿತ್ ದೋಸಾಂಜ್... ಈ ಹೆಸರು ಭಾರತೀಯ ಸಂಗೀತ ಪ್ರಪಂಚದಲ್ಲಿ ಚಿರಪರಿಚಿತ. 'ದಿಲ್-ಲುಮಿನಾಟಿ' ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ ದಿಲ್ಜಿತ್. 2023ರಲ್ಲಿ ಕೋಚೆಲ್ಲಾದಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಕಲಾವಿದ ಎಂಬ ಹೆಗ್ಗಳಿಕೆ ಕೂಡ ಇವರದ್ದು. ದಿಲ್ಜಿತ್ ಒಂದು ಸಿನಿಮಾಗೆ ರೂ. 3-4 ಕೋಟಿ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ದಿಲ್ಜಿತ್ ಪ್ರದರ್ಶನ ನೀಡಿದ್ದರು. ಇದಕ್ಕಾಗಿ ಅವರು ರೂ.4 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಹೀಗೆ ಹಾಡಿನ ಮೂಲಕ ಭಾರಿ ಸಂಪಾದನೆ ಮಾಡುತ್ತಿರುವ ದಿಲ್ಜಿತ್ ಅವರ ಒಟ್ಟು ಆಸ್ತಿ ರೂ. 172 ಕೋಟಿ.
ಅರ್ಜಿತ್ ಸಿಂಗ್
'ವೇ ಕಮಲಾಯ', 'ಕೇಸರಿಯಾ', 'ದೇಶ್ ಮೇರೇ' ಹಾಡುಗಳ ಮೂಲಕ ಅರ್ಜಿತ್ ಸಿಂಗ್ ಭಾರತೀಯರನ್ನು ಮೋಡಿ ಮಾಡಿದ್ದಾರೆ. ಹೀಗೆ ತಮ್ಮ ಹಾಡುಗಳ ಮೂಲಕ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಾ ಅತ್ಯಂತ ಜನಪ್ರಿಯ ಗಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಅರ್ಜಿತ್ ಒಂದು ಹಾಡಿಗೆ ರೂ. 20 ಲಕ್ಷದಿಂದ ರೂ. 22 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಅರ್ಜಿತ್ ಅವರ ಒಟ್ಟು ಆಸ್ತಿ ರೂ. 414 ಕೋಟಿ.
ಎ.ಆರ್. ರೆಹಮಾನ್
ಎ.ಆರ್. ರೆಹಮಾನ್... ಈ ಹೆಸರಿಗೆ ಪರಿಚಯವೇ ಬೇಕಿಲ್ಲ. ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲ, ಗಾಯಕರಾಗಿಯೂ ಜನಮನ ಗೆದ್ದಿದ್ದಾರೆ ರೆಹಮಾನ್. ಆಸ್ಕರ್ ಪ್ರಶಸ್ತಿಯೊಂದಿಗೆ ಅವರ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ತಮ್ಮ ಸಂಗೀತ, ಹಾಡುಗಳ ಮೂಲಕ ಅಪಾರ ಅಭಿಮಾನಿಗಳನ್ನು ಮಾತ್ರವಲ್ಲದೆ ಹಣವನ್ನು ಸಹ ಗಳಿಸಿದ್ದಾರೆ ರೆಹಮಾನ್. ಅವರು ಒಂದು ಹಾಡಿಗೆ ರೂ.3 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಂಗೀತ ನಿರ್ದೇಶನಕ್ಕೆ ಇನ್ನೂ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಹೀಗೆ ಎರಡೂ ಕೈಗಳಿಂದಲೂ ಹಣ ಗಳಿಸುತ್ತಿರುವ ರೆಹಮಾನ್ ಅವರ ಆಸ್ತಿ ರೂ. 1,728 ಕೋಟಿ ಇರಬಹುದು. ಭಾರತದ ಅತ್ಯಂತ ಶ್ರೀಮಂತ ಸಂಗೀತ ನಿರ್ದೇಶಕ ಮತ್ತು ಗಾಯಕ ಇವರೇ.
57 ವರ್ಷದ ರೆಹಮಾನ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಇದೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಅದ್ಭುತ ಸಾಧನೆಗಾಗಿ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಆಸ್ಕರ್ ಜೊತೆಗೆ ಗ್ರ್ಯಾಮಿ, ಬಾಫ್ಟಾ, ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ರೆಹಮಾನ್ ಗೆದ್ದಿದ್ದಾರೆ.