ಕತ್ರಿನಾ ಕೈಫ್-ಜಾನ್ ಅಬ್ರಹಾಂ ರಿಲೆಷನ್‌ಶಿಪ್ ಸುದ್ದಿ ಕೇಳಿ ಸಲ್ಮಾನ್ ರಿಯಾಕ್ಟ್ ಮಾಡಿದ್ಹೀಗೆ!
ನಟ ಜಾನ್ ಅಬ್ರಹಾಂ ಬಾಲಿವುಡ್‌ನ ಹ್ಯಾಂಡ್‌ಸಮ್ ಮತ್ತು ಟ್ಯಾಲೆಂಡ್ ನಟರಲ್ಲಿ ಒಬ್ಬರು. ಜಾನ್ ಲೈಮ್‌ಲೈಟ್ ಹಾಗೂ ಸ್ಟಾರ್‌ಡಮ್‌ನಿಂದ ಯಾವಾಗಲೂ ದೂರ ಇರಲು ಬಯಸುತ್ತಾರೆ. ಆದರೂ
ಕೆಲವೊಂದು ವಿವಾದಗಳಲ್ಲಿ ಇವರ ಹೆಸರು ಕೇಳಿಬಂದಿವೆ. ಅದರಲ್ಲಿ ಇವರ ಮತ್ತು ಸಲ್ಮಾನ್ ಖಾನ್ ನಡುವಿನ ಕೋಲ್ಡ್ ವಾರ್ ಕೂಡ ಒಂದು. ಇದಕ್ಕೆ ಮುಖ್ಯ ಕಾರಣ ಕತ್ರೀನಾ ಕೈಫ್. ಇಲ್ಲಿದೆ ವಿವರ.
ನ್ಯೂಯಾರ್ಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ, ಕತ್ರಿನಾ ಕೈಫ್ ಜಾನ್ ಅಬ್ರಹಾಂಗೆ ಹತ್ತಿರವಾಗಿದ್ದಾರೆ ಎಂಬ ವದಂತಿಗಳು ಹೊರಬರಲು ಪ್ರಾರಂಭಿಸಿದವು. ಆ ಸಮಯದಲ್ಲಿ, ಸಲ್ಮಾನ್ ಖಾನ್ ಜಾನ್ ಬಗ್ಗೆ ಕೇವಲವಾಗಿ
ಮಾತಾನಾಡಿದ್ದರು.
'ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಎಲ್ಲರೂ ಮುಳುಗುವ ಹಡಗಿನಲ್ಲಿದ್ದು, ನೀವು ಅವರಲ್ಲಿ ಒಬ್ಬರನ್ನು ಮಾತ್ರ ಉಳಿಸಬೇಕಾದರೆ, ನಿಮ್ಮ ಆಯ್ಕೆ ಯಾರು? ಎಂದು ರಾಜೀವ್ ಮಸಂದ್ ಸಂದರ್ಶನದಲ್ಲಿ ಜಾನ್ ಅಬ್ರಹಾಂಗೆ ಕೇಳಲಾಗಿತ್ತು.
'ಶಾರುಖ್ ಖಾನ್ ಎಂದು ನಾನು ಊಹಿಸುತ್ತೇನೆ. ಏಕೆಂದರೆ ನಾನು ವ್ಯಕ್ತಿತ್ವವನ್ನು ಪ್ರೀತಿಸುತ್ತೇನೆ ಮತ್ತು ನಾನು ಸಿನಿಮಾ ಡೈರೆಕ್ಟ್ ಮಾಡುವುದಾದರೆ ಶಾರುಖ್ ಅವರನ್ನು ನಿರ್ದೇಶಿಸಲು ಇಷ್ಟಪಡುತ್ತೇನೆ,' ಎಂದು ಜಾನ್ ಹೇಳಿದ್ದರು.
ನ್ಯೂಯಾರ್ಕ್ ಚಿತ್ರದ ಸಮಯದಲ್ಲಿ ಕತ್ರಿನಾ ಕೈಫ್ ಹಾಗೂ ಜಾನ್ ಅಬ್ರಹಾಂ ಜೋಡಿಗೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಹೊರಬರಲು ಶುರವಾದಾಗ ಸಲ್ಮಾನ್ ಮತ್ತು ಜಾನ್ ಅವರ ಶೀತಲ ಸಮರ ಪ್ರಾರಂಭವಾಯಿತು.
ಕತ್ರಿನಾ ಬಾಲಿವುಡ್‌ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ದಿನಗಳಲ್ಲಿ, ಅವರಿಗೆ ಸರಿಯಾಗಿ ಹಿಂದಿ ಮಾತನಾಡಲೂ ಸಾಧ್ಯವಾಗದ ಕಾರಣ ಅವರೊಂದಿಗೆ ಕೆಲಸ ಮಾಡಲು ಜಾನ್ ನಿರಾಕರಿಸಿದರು. ಈ ಕಾರಣಕ್ಕಾಗಿ ಸಾಯಾ ಸಿನಿಮಾದಲ್ಲಿ ಪಾತ್ರವನ್ನು ಕತ್ರಿನಾ ಕಳೆದುಕೊಂಡಿದ್ದರು. ನೊಂದ ಕತ್ರಿನಾ ಅಳಲು ಪ್ರಾರಂಭಿಸಿದರು.
'ನೀನು ಯಾಕೆ ಅಳುತ್ತಿದ್ದೀಯಾ? ಜಾನ್ ಅಬ್ರಹಾಂ ಜೊತೆ ಕೆಲಸ ಮಾಡೋ ಸಮಯ ನಿನಗೂ ಬರುತ್ತದೆ, ಎಂದು ಸಲ್ಮಾನ್ ಕತ್ರೀನಾಳನ್ನು ಸಮಾಧಾನ ಮಾಡಿದ್ದರಂತೆ.
ಆದ್ದರಿಂದ, ಸಲ್ಮಾನ್ ಜಾನ್‌ನನ್ನು ಎಂದಿಗೂ ಇಷ್ಟಪಡುವುದಿಲ್ಲ ಮತ್ತು ಕೆಲವು ವರ್ಷಗಳ ನಂತರ, ಕಬೀರ್ ಖಾನ್‌ರ ನ್ಯೂಯಾರ್ಕ್ ಸಿನಿಮಾದಲ್ಲಿ ಕತ್ರಿನಾ ಮತ್ತು ಜಾನ್ ಅಬ್ರಹಾಂ ಕೆಲಸ ಮಾಡುವ ಅವಕಾಶ ಒದಗಿ ಬಂದು, ಸಲ್ಮಾನ್ ಮಾತುಗಳು ನಿಜವಾಯಿತು.
ಶೂಟಿಂಗ್ ಸಮಯದಲ್ಲಿ ಜಾನ್ ಹಾಗೂ ಕೈಫ್ ನಿಕಟತೆ ಸಲ್ಮಾನ್‌ಗೆ ಇಷ್ಟವಾಗಿಲ್ಲ. ಕತ್ರಿನಾ ಎಲ್ಲಾ ವದಂತಿಗಳನ್ನು ನಿರಾಕರಿಸಿದರು.
'ಜಾನ್ ಸ್ವೀಟ್‌ಹಾರ್ಟ್, ನಾವು ಪರಸ್ಪರರ ಕಂಪನಿಯನ್ನು ಎಂಜಾಯ್ ಮಾಡಿದ್ದೆವು. ಕೆಲವು ಸ್ನೇಹಗಳು ಚಿತ್ರ ಮುಗಿದ ನಂತರವೂ ಮುಂದುವರಿಯುತ್ತದೆ,' ಕತ್ರಿನಾ ಜಾನ್ ಅಬ್ರಹಾಂ ಬಗ್ಗೆ ಹೇಳಿದ್ದರು.
'ನಾನು ಕತ್ರಿನಾಗೆ ನ್ಯೂಯಾರ್ಕ್ ಸಿನಿಮಾ ಮಾಡಲು ಕೇಳಿಕೊಂಡಿದ್ದೇನೆ. ಜಾನ್‌ನನ್ನು ನಾನು ಹೆಚ್ಚು ಇಷ್ಟಪಡುವುದಿಲ್ಲ. ನನ್ನ ಈ ಯೋಚನೆಯಿಂದ ಕತ್ರಿನಾ ಇನ್‌ಫ್ಲೂಯೆನ್ಸ್ ಆಗಬಾರದು ಎಂದು ಹೇಳಿದೆ. ಜಾನ್ ಬಹಳ ಹಿಂದೆಯೇ ಕತ್ರಿನಾಳನ್ನು ಚಲನಚಿತ್ರದಿಂದ ತೆಗೆದು ಹಾಕಿದ್ದನು. ಇದೀಗ ಅವಳು ಜಾನ್‌ನನ್ನು ಹೊರಹಾಕುವ ಸ್ಥಿತಿಯಲ್ಲಿದ್ದಾಳೆ. ಆದರೆ ಅದು ನಿರ್ದೇಶಕರ ಚಿತ್ರ. ಅವಳು ಅದನ್ನು ಮಾಡಬೇಕು ಎಂದು ನಾನು ಹೇಳಿದೆ ಎಂದು ಮಿಡ್‌ಡೇಗೆ ನೀಡಿದ ಹಳೆಯ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಹೇಳಿದ್ದರು.