17 ವರ್ಷ, 450 ಸಿನಿಮಾ: ಈ ನಟಿಯ ಸಂಭಾವನೆ ಯಾವ ಸೂಪರ್ ಸ್ಟಾರ್‌ಗೂ ಕಡಿಮೆ ಇರಲಿಲ್ಲ
ಸಿಲ್ಕ್ ಸ್ಮಿತಾ ಹೆಚ್ಚಾಗಿ ಮುಖ್ಯ ಪಾತ್ರಗಳಲ್ಲಿ ನಟಿಸಿರಲಿಲ್ಲ. ಆದರೆ ಆಕೆಯ ಕಾಲದ ಹಲವು ನಾಯಕಿಯರಿಗಿಂತ ಜನಪ್ರಿಯರಾಗಿದ್ದರು. ಆ ಕಾಲದಲ್ಲಿ ಹೆಸರು ಮಾಡಿದ ನಟಿ ಮಾತ್ರವಲ್ಲದೆ, ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಆಗಿದ್ದರು. ಮುಂಚೂಣಿಯ ನಾಯಕಿಯರನ್ನೂ ಮೀರಿಸಿದ್ದರು.
ದಕ್ಷಿಣ ಭಾರತ ಸಿನಿಮಾದ ಹಲವು ನಟಿಯರು ಭಾಷೆಯ ತಡೆಗಳನ್ನು ಮೀರಿ ಪ್ಯಾನ್-ಇಂಡಿಯಾ ಐಕಾನ್‌ಗಳಾಗಿದ್ದಾರೆ. ಜಯಲಲಿತಾ, ರೇಖಾ, ಶ್ರೀದೇವಿ ಮತ್ತು ಜಯಪ್ರದಾ ಬಾಲಿವುಡ್‌ನಲ್ಲೂ ಪ್ರಸಿದ್ಧರು. ಒಂದು ಗಮನಾರ್ಹವಾದ ಅಪವಾದವೆಂದರೆ ಸಿಲ್ಕ್ ಸ್ಮಿತಾ.
ಸಿಲ್ಕ್ ಸ್ಮಿತಾ ಜೀವನ ಚರಿತ್ರೆ
ಸಿಲ್ಕ್ ಸ್ಮಿತಾ ಹೆಚ್ಚಾಗಿ ಮುಖ್ಯ ಪಾತ್ರಗಳಲ್ಲಿ ನಟಿಸಿರಲಿಲ್ಲ. ಆದರೆ ಆಕೆಯ ಕಾಲದ ಹಲವು ನಾಯಕಿಯರಿಗಿಂತ ಜನಪ್ರಿಯರಾಗಿದ್ದರು. ಆ ಕಾಲದಲ್ಲಿ ಹೆಸರು ಮಾಡಿದ ನಟಿ ಮಾತ್ರವಲ್ಲದೆ, ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಆಗಿದ್ದರು. ಮುಂಚೂಣಿಯ ನಾಯಕಿಯರನ್ನೂ ಮೀರಿಸಿದ್ದರು.
ಸಿಲ್ಕ್ ಸ್ಮಿತಾ ಯಾರು?
1980 ಮತ್ತು 90 ರ ದಶಕದಲ್ಲಿ ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧ ನಟಿಯಾಗಿದ್ದ ಸಿಲ್ಕ್, ಆ ಕಾಲದಲ್ಲೇ ಜನಪ್ರಿಯ ಗ್ಲಾಮರ್ ನಟಿಯಾಗಿ ಖ್ಯಾತಿ ಪಡೆದರು. 17 ವರ್ಷಗಳ ಕಾಲ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿಲ್ಕ್ ಸ್ಮಿತಾ ಕೇವಲ ಗೆಸ್ಟ್ ಪಾತ್ರಕ್ಕಾಗಿ ಪಡೆಯುವ ಸಂಭಾವನೆ ಯಾವ ಸೂಪರ್ ಸ್ಟಾರ್‌ಗೂ ಕಡಿಮೆಯಾಗಿರಲಿಲ್ಲ.
ಸಿಲ್ಕ್ ಸ್ಮಿತಾ ನೆನಪುಗಳು
1979 ರಲ್ಲಿ ಬಿಡುಗಡೆಯಾದ 'ವಂಡಿಚಕ್ರಂ' ತಮಿಳು ಚಿತ್ರದ ಮೂಲಕ ಅವರ ಜೀವನದಲ್ಲಿ ತಿರುವು ಸಿಕ್ಕಿತು. ಅದರಲ್ಲಿ ಅವರು "ಸಿಲ್ಕ್" ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಅವರ ನೃತ್ಯಗಳನ್ನು ನೋಡಲು ಜನರು ಥಿಯೇಟರ್‌ಗಳಿಗೆ ಮುಗಿಬೀಳುತ್ತಿದ್ದರು. ಹೀಗಾಗಿ ಅವರು ನಟಿಸುವ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಾಧಿಸುತ್ತಿದ್ದವು.
1960ರಲ್ಲಿ ಆಂಧ್ರಪ್ರದೇಶದ ಎಲೂರಿನಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಕೌಟುಂಬಿಕ ಪರಿಸ್ಥಿತಿಯಿಂದಾಗಿ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಚಿಕ್ಕ ವಯಸ್ಸಿನಲ್ಲೇ ಅವರನ್ನು ಸ್ಥಳೀಯ ಯುವಕನೊಬ್ಬನಿಗೆ ಮದುವೆ ಮಾಡಿಕೊಡಲು ಪೋಷಕರು ಒತ್ತಾಯಿಸಿದರು.
ನಟಿ ಅಪರ್ಣಾ ಅವರಿಗೆ ಮೇಕಪ್ ಕಲಾವಿದೆಯಾಗಿ ಕೆಲಸ ಸಿಕ್ಕಿತು. ಅದರ ಮೂಲಕ ಸಿನಿಮಾ ರಂಗಕ್ಕೆ ಬಂದು ಸಣ್ಣ ಪಾತ್ರಗಳಲ್ಲಿ ನಟಿಸಿದರು. ವಿನು ಚಕ್ರವರ್ತಿ ಅವರು ಮಾರ್ಗದರ್ಶಕರಾಗಿದ್ದರು. ಅವರು ಸಿಲ್ಕ್‌ಗೆ ತಮಿಳು, ನೃತ್ಯ, ನಟನೆ ಕಲಿಸಿಕೊಟ್ಟರು. ಆನಂತರ ಅವರು ನಟಿಯಾಗಿ ಬೆಳೆದರು.
ಸಿಲ್ಕ್ ಸ್ಮಿತಾ ಸಾವಿನ ಕಾರಣ
ಸೆಪ್ಟೆಂಬರ್ 23, 1996 ರಂದು, ಸ್ಮಿತಾ ತಮ್ಮ ಚೆನ್ನೈನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಆರ್ಥಿಕ ಸಮಸ್ಯೆ, ಪ್ರೇಮ ವೈಫಲ್ಯ, ಖಿನ್ನತೆ ಸೇರಿದಂತೆ ಹಲವು ಸಮಸ್ಯೆಗಳಿದ್ದವು ಎನ್ನಲಾಗಿದೆ.
ಸಿಲ್ಕ್ ಸ್ಮಿತಾ ಜೀವನ
ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯನ್ನು 'ಸಿಲ್ಕ್ ಸ್ಮಿತಾ: ಕ್ವೀನ್ ಆಫ್ ದಿ ಸೌತ್' ಎಂಬ ಚಿತ್ರವಾಗಿ ತಯಾರಿಸಲಾಗುತ್ತಿದೆ. ನಟಿ ಚಂದ್ರಿಕಾ ರವಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2011 ರಲ್ಲಿ ಬಂದ ಇನ್ನೊಂದು ಜೀವನ ಚರಿತ್ರೆ 'ದಿ ಡರ್ಟಿ ಪಿಕ್ಚರ್'. ವಿಜಯ್ ಬಾಲನ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನಟಿಸಿದ್ದರು. ಅದು ಭಾರಿ ಯಶಸ್ಸುಗಳಿಸಿತು. ವಿಜಯ್ ಬಾಲನ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಯಿತು.
ಇಡೀ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ಕಲಾವಿದರಿಗಿಂತ ಸಿಲ್ಕ್ ಸ್ಮಿತಾ ಸಂಭಾವನೆ ಅಧಿಕವಾಗಿರುತ್ತಿತ್ತು. ಸಿಲ್ಕ್ ಸ್ಮಿತಾ ಸೌಂದರ್ಯ ಕಣ್ತುಂಬಿಕೊಳ್ಳೋದಕ್ಕಾಗಿ ಜನರು ಥಿಯೇಟರ್‌ಗೆ ಬರುತ್ತಿದ್ದರು.