2025ರಲ್ಲಿ ಸಿನಿಮಾಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆದ ಟಾಫ್ 10 ನಟರು ಇವರು
ಫೋರ್ಬ್ಸ್ ಇಂಡಿಯಾ 2025 ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ನಟರು ಎಷ್ತು ಸಂಭಾವನೆ ಪಡೆಯುತ್ತಾರೆ ನೋಡಿ.

ಭಾರತೀಯ ಸಿನಿಮಾ ರಂಗ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸಿನಿಮಾ ನಟರು ಕೋಟಿಯಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ (Indian Films) ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರು ಯಾರು ಅನ್ನೋದನ್ನು ನೋಡೋಣ.
ಅಲ್ಲು ಅರ್ಜುನ್ (Allu Arjun)
ಪುಷ್ಪಾ ಚಿತ್ರಕ್ಕಾಗಿ ಅಲ್ಲು ಅರ್ಜುನ್ 300 ಕೋಟಿ ರೂಪಾಯಿ ಸಂಭಾವನೆ ಪಡೆದು ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದಳಪತಿ ವಿಜಯ್ (Vijay)
ಸಿನಿಮಾ ರಂಗದ ಪ್ರಮುಖ ತಾರೆ ಮತ್ತು ರಾಜಕೀಯದ ಸೂಪರ್‌ಸ್ಟಾರ್ ದಳಪತಿ ವಿಜಯ್ 130 ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ.
ಶಾರುಖ್ ಖಾನ್ (Shahrukh Khan)
ಬಾಲಿವುಡ್‌ನ ಕಿಂಗ್ ಖಾನ್ ಮೂರನೇ ಸ್ಥಾನದಲ್ಲಿದ್ದು, ಒಂದು ಚಿತ್ರಕ್ಕೆ 150 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ.
ರಜನಿಕಾಂತ್ (Rajnikanth)
ರಜನಿಕಾಂತ್ ಈ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಒಂದು ಚಿತ್ರಕ್ಕೆ ಸುಮಾರು 125 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಅಮಿರ್ ಖಾನ್ (Aamir Khan)
ಬಾಲಿವುಡ್‌ನ ಮತ್ತೊಬ್ಬ ನಟ ಆಮಿರ್ ಖಾನ್ ಒಂದು ಚಿತ್ರಕ್ಕೆ 100 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ.
ಪ್ರಭಾಸ್ (Prabhas)
ಬಾಹುಬಲಿ ನಟ ಪ್ರಭಾಸ್ ಕೂಡ ಈ ಪಟ್ಟಿಯಲ್ಲಿದ್ದಾರೆ ಮತ್ತು ಅವರು 100 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ.
ಅಜಿತ್ ಕುಮಾರ್ (Ajith Kumar)
ತಮಿಳು ನಟ ಅಜಿತ್ ಕುಮಾರ್ ಕೂಡ ಈ ಪಟ್ಟಿಯಲ್ಲಿದ್ದಾರೆ ಮತ್ತು ಅವರು ಸುಮಾರು 105ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಸಲ್ಮಾನ್ ಖಾನ್ (Salman Khan)
ಬಾಲಿವುಡ್‌ನ ದಬಾಂಗ್ ಖಾನ್ ಸಲ್ಮಾನ್ ಖಾನ್ ಒಂದು ಚಿತ್ರಕ್ಕೆ 100 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ.
ಕಮಲ್ ಹಾಸನ್ (Kamal Hasan)
ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಕೆಲಸ ಮಾಡುವ ಕಮಲ್ ಹಾಸನ್ ಕೂಡ 100 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ.
ರಿಷಭ್ ಶೆಟ್ಟಿ (Rishab Shetty)
ರಿಷಭ್ ಶೆಟ್ಟಿ ಅವರು ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಸುಮಾರು 100 ಕೋಟಿ ಪಡೆದಿದ್ದಾರೆ. ಕಾಂತಾರ ಮೊದಲಿನ ಸಿನಿಮಾಗೆ ರಿಷಭ್ ಶೆಟ್ಟಿ ಸಂಭಾವನೆ ಕೇವಲ 4 ಕೋಟಿ ಆಗಿತ್ತು.