Happy Birthday: ಪ್ರಧಾನಿ ಮೋದಿ ಜೊತೆಗೆ ಸಿನಿಮಾ ತಾರೆಗಳ ವೈರಲ್ ಸೆಲ್ಫೀಗಳಿವು
- Happy Birthday ಪ್ರಧಾನಿ ನರೇಂದ್ರ ಮೋದಿ
- ಪ್ರಧಾನಿ ಜೊತೆಗೆ ಹಲವು ಸಂದರ್ಭಗಳಲ್ಲಿ ಸೆಲ್ಫೀ ಕ್ಲಿಕ್ಕಿಸಿದ ಸ್ಟಾರ್ಸ್
- ಚಿತ್ರರಂಗದ ಗಣ್ಯರೊಂದಿಗೆ ಮೋದಿ ಸ್ಮೈಲ್
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬಾಲಿವುಡ್ ಸ್ಟಾರ್ ನಟ ನಟಿಯರು ಖುಷಿಯಿಂದ ಸೆಲ್ಫೀಗಳನ್ನು ಶೇರ್ ಮಾಡುತ್ತಾರೆ. ತಮಗೆ ಫ್ಯಾನ್ಸ್ ಹೇಗೆ ಮುಗಿಬೀಳುತ್ತಾರೋ ಹಾಗೆಯೇ ಅವರೂ ಪ್ರಧಾನಿ ಜೊತೆಗೊಂದು ಸೆಲ್ಫೀ ಕ್ಲಿಕ್ಕಿಸಲು ಖುಷಿ ಪಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟಿದ ಹಬ್ಬದ ದಿನ ಅವರ ಜೊತೆ ಸಿನಿಮಾ ಸ್ಟಾರ್‌ಗಳು ಕ್ಲಿಕ್ಕಿಸಿಕೊಂಡ ಫೋಟೋಗಳೂ, ಸೆಲ್ಫೀಗಳು ಹೇಗಿವೆ ಎಂಬುದನ್ನು ಒಂದು ರೌಂಡ್ ನೋಡಿಕೊಂಡು ಬರೋಣ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ತಮ್ಮ 71 ನೇ ಹುಟ್ಟುಹಬ್ಬವನ್ನು 2021 ರ ಸೆಪ್ಟೆಂಬರ್ 17 ರಂದು ಆಚರಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಪಾರ್ಟಿಗಳಲ್ಲಿ ಭಾರತೀಯ ತಾರೆಯರು ಪ್ರಧಾನಿಯೊಂದಿಗೆ ಚಂದದ ಸಮಯವನ್ನು ಕಳೆದಿದ್ದಾರೆ. ಅಷ್ಟೇ ಅಲ್ಲ, ಅವರು ಪ್ರಧಾನಿ ಜೊತೆಗೆ ಸೆಲ್ಫಿಗಳನ್ನು ಕ್ಲಿಕ್ ಮಾಡಿದ್ದಾರೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಫೋಟೋಗಳೆಲ್ಲವೂ ವೈರಲ್ ಆಗುತ್ತವೆ. ಅಂತಹ ಫೋಟೋಗಳು ಇಲ್ಲಿವೆ. ಪ್ರಧಾನಿ ಮೋದಿಯೊಂದಿಗೆ ಶ್ರದ್ಧಾ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್. ಅವರು ಮುಂಬೈನ ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಉದ್ಘಾಟನೆಗೆ ಬಂದಾಗ ಪ್ರಧಾನಿ ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ
ಫೋಟೋವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಕ್ಲಿಕ್ಕಿಸಿದ್ದಾರೆ. ಈ ಸೆಲ್ಫಿಯಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ವರುಣ್ ಧವನ್, ರಾಜಕುಮಾರ ರಾವ್, ಆಯುಷ್ಮಾನ್ ಖುರಾನಾ, ಭೂಮಿ ಪೆಡ್ನೇಕರ್, ಸಿದ್ಧಾರ್ಥ್ ಮಲ್ಹೋತ್ರ, ವಿಕ್ಕಿ ಕೌಶಲ್, ಕರಣ್ ಜೋಹರ್, ಏಕ್ತಾ ಕಪೂರ್, ರೋಹಿತ್ ಶೆಟ್ಟಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಇದ್ದಾರೆ.
ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅವರು ದೆಹಲಿಯಲ್ಲಿ ನಡೆದ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಹೀಗೆ
ಸಿನಿಮಾ ಪ್ರಚಾರದ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ ಬರ್ಲಿನ್ ನಲ್ಲಿದ್ದರು. ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರನ್ನು ಭೇಟಿಯಾಗಲು ಅದೇ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೂ ಅದೇ ನಗರದಲ್ಲಿ ಇದ್ದರು. ಈ ಫೋಟೋ ವೈರಲ್ ಆಗಿತ್ತು. ನಟಿಯ ಕಾಲುಗಳನ್ನು ತೋರಿಸುವ ಡ್ರೆಸ್‌ನಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕಾಗಿ ಸೇದಿ ಗರ್ಲ್‌ನ್ನು ಟೀಕಿಸಲಾಯಿತು.
2019 ರಲ್ಲಿ ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರು ಭಾಗವಹಿಸಿದ್ದರು. ಪಿಎಂ ಮೋದಿಯವರೊಂದಿಗೆ ಪೋಸ್ ಕೊಡುತ್ತಿರುವ ಬಾಲಿವುಡ್ ಜೋಡಿ
ರಣವೀರ್ ಸಿಂಗ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದರು. ನಮ್ಮ ಮಹಾನ್ ರಾಷ್ಟ್ರದ ಗೌರವಾನ್ವಿತ ಪ್ರಧಾನ ಮಂತ್ರಿಯನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಕ್ಯಾಪ್ಶನ್ ಕೊಟ್ಟಿದ್ದರು ನಟ
2019 ರಲ್ಲಿ ದೆಹಲಿಯಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಪಿಲ್ ಶರ್ಮಾ ಮತ್ತು ಇತರರೊಂದಿಗೆ ಪೋಸ್ ನೀಡಿದ್ದರು.
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ನಂತರ ಅನುಪಮ್ ಖೇರ್ ಅವರು ತಮ್ಮ ಭೇಟಿಯ ಫೋಟೋ ಹಂಚಿಕೊಂಡರು. ಆತ್ಮೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ, ನಿಮ್ಮನ್ನು ಭೇಟಿ ಮಾಡುವುದು ಗೌರವ ಎಂದು ನಟ ಪೋಸ್ಟ್ ಮಾಡಿದ್ದಾರೆ. ಭಾರತದ ಬಗೆಗಿನ ನಿಮ್ಮ ದೃಷ್ಟಿಕೋನವು ಬಹಳ ಸಮಾಧಾನಕರ ಮತ್ತು ಹೃದಯಸ್ಪರ್ಶಿಯಾಗಿದೆ. ನಿಮ್ಮ ಸ್ಫೂರ್ತಿದಾಯಕ ಮಾತುಗಳು ಯಾವಾಗಲೂ ನನಗೆ ಒಂದು ಶಕ್ತಿಯ ಶಕ್ತಿಯ ಮೂಲವಾಗಿದೆ. ನೀವು ನಮ್ಮ ದೇಶವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಯಲಿ ಎಂದು ಅವರು ಹೇಳಿದ್ದರು.
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅವರ ವಿವಾಹ ಆರತಕ್ಷತೆಗೆ ಪಿಎಂ ಮೋದಿ ಆಗಮಿಸಿ ದಂಪತಿಯನ್ನು ಆಶೀರ್ವದಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ಹೇಳಲು ಪ್ರಿಯಾಂಕ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದರು
2019 ರಲ್ಲಿ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಾಜಕೀಯೇತರ ಸಂಭಾಷಣೆ ಮಾಡಿದ್ದರು. ಟಾಕ್ ಶೋ ನಂತಹ ಈ ಕಾರ್ಯಕ್ರಮ ವೈರಲ್ ಆಗಿತ್ತು. ಇದರಲ್ಲಿ ಜವಾಬ್ದಾರಿಗಳು, ಮಾವಿನ ಮೇಲಿನ ಪ್ರೀತಿ ಮತ್ತು ನಿದ್ರಿಸುವ ಸಮಯದ ಹೊರತಾಗಿ ಪ್ರತಿದಿನ ಏನು ಮಾಡುತ್ತಾರೆ ಎಂದು ಪ್ರಧಾನಿಯವರನ್ನು ಕೇಳುವ ಮೂಲಕ ಸಂಭಾಷಣೆ ಆರಂಭಿಸಿದ್ದರು