- Home
- Entertainment
- Cine World
- Drugs Case: ಮಗ ಆರ್ಯನ್ ಖಾನ್ ಬಿಡುಗಡೆಗಾಗಿ ನವರಾತ್ರಿಯಲ್ಲಿ ಗೌರಿ ಖಾನ್ ಪೂಜೆ, ಪ್ರಾರ್ಥನೆ
Drugs Case: ಮಗ ಆರ್ಯನ್ ಖಾನ್ ಬಿಡುಗಡೆಗಾಗಿ ನವರಾತ್ರಿಯಲ್ಲಿ ಗೌರಿ ಖಾನ್ ಪೂಜೆ, ಪ್ರಾರ್ಥನೆ
ಪುತ್ರ ಅರ್ಯನ್ ಖಾನ್ ಬಿಡುಗಡೆಗಾಗಿ ಗೌರಿ ಪೂಜೆ ಮಗನಿಗಾಗಿ ಪ್ರಾರ್ಥಿಸ್ತಿದ್ದಾರೆ ಗೌರಿ ಖಾನ್

ಶಾರೂಖ್ ಖಾನ್ ಮನೆ ಮನ್ನತ್‌ನಲ್ಲಿ ಸದ್ಯ ಖುಷಿ ಇಲ್ಲ. ಸ್ಟಾರ್ ದಂಪತಿ ಚಿಂತೆಯಲ್ಲಿದ್ದಾರೆ. ಮಗನಿಗೆ ಜಾಮೀನು ಸಿಗುತ್ತೆ ಅಂದ ನಿರೀಕ್ಷೆಯಲ್ಲಿದ್ದ ಜೋಡಿ ನಿರಾಸೆಯಲ್ಲಿದ್ದಾರೆ. ಶಾರೂಖ್ ಖಾನ್ ಹಾಗೂ ಗೌರಿ ಖಾನ್ ಇಬ್ಬರೂ ತಮ್ಮ ಮನೆಯಲ್ಲೇ ಇದ್ದಾರೆ.
ದಿನಪೂತ್ರಿ ಕಾನೂನು ತಜ್ಞರಲ್ಲಿ ಮಾತನಾಡುತ್ತಾ, ಅತ್ಯಂತ ಆತ್ಮೀಯರ ಜೊತೆಗಷ್ಟೇ ಸಮಯ ಕಳೆಯುತ್ತಿದ್ದಾರೆ. ಆರ್ಯನ್ ಖಾನ್ ಜಾಮೀನು ವಿಚಾರಣೆ 20ನೇ ತಾರೀಕಿಗೆ ಮುಂದೂಡಲಾಗಿದೆ
ಆರಂಭದಲ್ಲಿ ಆರ್ಯನ್‌ಗೆ ಕಡಿಮೆ ಅವಧಿ ಜೈಲಿನಲ್ಲಿರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಡ್ರಗ್ಸ್ ಪ್ರಕರಣ ಆರ್ಯನ್ ಪರ ವಕೀಲರು ಮತ್ತು ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB)ನಡುವೆ ಸುದೀರ್ಘ ಕಾನೂನು ಹೋರಾಟವಾಗಿ ಮಾರ್ಪಟ್ಟಿದೆ.
ಗುರುವಾರ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯ ವಾದಗಳನ್ನು ಆಲಿಸಿದ ನಂತರ, ವಿಶೇಷ ಮುಂಬೈ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ. ಪರಿಣಾಮವಾಗಿ ಆರ್ಯನ್ ಕನಿಷ್ಠ ಅಕ್ಟೋಬರ್ 20 ರವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ.
ಗೌರಿಯು ಆರ್ಯನಿಗಾಗಿ ಒಂದು ಪ್ರಾರ್ಥನೆ ಇಟ್ಟುಕೊಂಡಿದ್ದಾರೆ. ನವರಾತ್ರಿಯ ಸಮಯದಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಿರುವುದಾಗಿ ಕುಟುಂಬದ ಸ್ನೇಹಿತರು ತಿಳಿಸಿದ್ದಾರೆ. ಹಬ್ಬ ಶುರುವಾದಾಗಿನಿಂದ ಅವರು ಸಕ್ಕರೆ ಮತ್ತು ಯಾವುದೇ ಸಿಹಿತಿಂಡಿಗಳನ್ನು ತಿನ್ನುತ್ತಿಲ್ಲ ಎನ್ನಲಾಗಿದೆ.
ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ದೇವಿಯ ಫೋಟೋವನ್ನು ಹಿಂದಿನ ವಿಚಾರಣೆಯ ಮೊದಲು ಹಂಚಿಕೊಂಡಿದ್ದಾರೆ. ಅವರು 'ಮಾತಾ ರಾಣಿ' ಎಂದು ಬರೆದಿದ್ದಾರೆ. ಆ ಸಮಯದಲ್ಲಿ, ಶಾರುಖ್ ಖಾನ್ ಮತ್ತು ಗೌರಿ ಇಬ್ಬರೂ ಆರ್ಯನ್ ಮರುದಿನ ಜಾಮೀನಿನ ಮೇಲೆ ಹೊರಬರುತ್ತಾರೆ ಎಂದು ಭಾವಿಸಿದ್ದರು. ಆದರೆ ಅದು ಆಗಲಿಲ್ಲ.