ಶೋಲೆ ಸಿನಿಮಾಗೆ 45 ವರ್ಷ..! ನೀವು ಗಮನಿಸದ 10 ಫನ್ನಿ ಮಿಸ್ಟೇಕ್ಸ್
ಬಾಲಿವುಡ್‌ನ ಖ್ಯಾತ ಸಿನಿಮಾ ಶೋಲೆಗೆ 45 ವರ್ಷಗಳಾಯಿತು. ಇಂದಿಗೂ ಜನಮಾನಸದಲ್ಲಿ ಹಸಿರಾಗಿರುವ ಸಿನಿಮಾದಲ್ಲಿ ಕೆಲವು ಫನ್ನಿ ಮಿಸ್ಟೇಕ್‌ಗಳಾಗಿತ್ತು..? ಏನೇನು ಗೊತ್ತಾ.? ಇಲ್ನೋಡಿ
ಸಿನಿಮಾ ಬಿಡುಗಡೆಯಾಗಿದ್ದು, ಆಗಸ್ಟ್ 14 ,1975ರಲ್ಲಿ. ಮುಂಬೈನ ಮಿನರ್ವಾ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಯಿತು. 15ರಂದು ದೇಶದ ಉಳಿದ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಯಿತು. ಇಂದಿಗೂ ಈ ಸಿನಿಮಾ ಕೆಲವು ಚಾನಲ್‌ಗಳಲ್ಲಿ 3-4 ದಿನಕ್ಕೊಮ್ಮೆ ಪ್ರಸಾರವಾಗುತ್ತೆ. ಕಾರಣ ಈ ಸಿನಿಮಾದ ಖ್ಯಾತಿ ಅಷ್ಟಿದೆ. ಆದರೆ ಸಿನಿಮಾದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳಾಗಿವೆ. ಹಲವು ಸಲ ಸಿನಿಮಾ ನೋಡಿದರಷ್ಟೇ ಇದು ಅರ್ಥವಾಗಬಲ್ಲದು. ಅಂದಾಜ್ ಹಾಗೂ ಸೀತಾ ಔರ್ ಗೀತಾ ಸಿನಿಮಾ ಮಾಡಿದ ನಂತರ ನಿರ್ದೇಶಕ ರಮೇಶ್ ಸಿಪ್ಪಿ ಅವರಿಗೆ ಆಕ್ಷನ್ ಸಿನಿಮಾ ಮಾಡುವ ಹಂಬಲವಿತ್ತು. ಹಾಲಿವುಡ್ ರೇಂಜ್‌ಗೆ ಸಿನಿಮಾ ಮಾಡಬೇಕೆಂದು ಕನಸು ಕಂಡಿದ್ದರು ಸಿಪ್ಪಿ. ಆಗ ವರ್ಕೌಟ್ ಆಗಿದ್ದೇ ಶೋಲೆ
ಶೋಲೆ ಸಿನಿಮಾದ ಭಾರೀ ಪ್ರಸಿದ್ಧ ದೃಶ್ಯದಲ್ಲಿ ಧರ್ಮೇಂದ್ರ ಟ್ಯಾಂಕ್ ಹತ್ತಿದ ಬಸಂತಿಯ ಚಿಕ್ಕಮ್ಮನನ್ನು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ತನ್ನ ಮದುವೆ ಸಮಸ್ಯೆ ಸರಿಪಡಿಸುತ್ತಾನೆ. ಆದರೆ ಹಳ್ಳಿಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದಿದ್ದಾಗ ಟ್ಯಾಂಕ್ ಮೇಲೆ ನೀರು ಹೇಗೆ ಬಂತು ಎಂಬುದಕ್ಕೆ ಉತ್ತರವಿಲ್ಲ
ಡಕಾಯಿತರು ಬಸಂತಿಯನ್ನು ಬೆನ್ನಟ್ಟಿದಾಗ, ಬಸಂತಿ ತನ್ನ ಕಾಲುಗಳಿಂದ ಸ್ಟಂಟ್ ಮಾಡಿ ಮರದ ಸೇತುವೆಯನ್ನು ಮುರಿಯುವುದನ್ನು ತೋರಿಸುತ್ತಾರೆ. ಈ ಕಾರಣದಿಂದ ಹಿಂದಿನಿಂದ ಬರುವ ಡಕಾಯಿತರು ಬೇರೆ ದಾರಿಯಲ್ಲಿ ಬರುವಂತಾಗುತ್ತದೆ. ವೀರು ಕೂಡ ಸೇತುವೆ ಮುರಿದು ಬಿದ್ದಿರುವುದನ್ನು ನೋಡಿರುತ್ತಾನೆ. ಆದರೆ ಜೈ ಮತ್ತು ವೀರು ಬಸಂತಿಯನ್ನು ರಕ್ಷಿಸಿ ಹಿಂದಿರುಗಿ ಬರುವಾಗ, ಅದೇ ಮರದ ಸೇತುವೆ ಆ ದೃಶ್ಯದಲ್ಲಿ ಸರಿಯಾಗಿರುತ್ತದೆ.
ಅಸ್ರಾನಿ ಜೈಲರ್ ಪಾತ್ರವನ್ನು ಮಾಡಿದ್ದಾರೆ. ದೃಶ್ಯದಲ್ಲಿ, ಕ್ಷೌರಿಕನಾದ ಕೆಷ್ಟೋ ಮುಖರ್ಜಿ ಜೈ ಮತ್ತು ವೀರು ಜೈಲಿನಿಂದ ತಪ್ಪಿಸಿಕೊಳ್ಳುವ ಯೋಜನೆಯ ಬಗ್ಗೆ ಹೇಳಲು ಹೋಗುತ್ತಾನೆ. ಆ ಸಮಯದಲ್ಲಿ ಗಡಿಯಾರದಲ್ಲಿ ಮೂರು ತೋರಿಸುತ್ತದೆ. ಇದರ ನಂತರ, ಜೈ ಮತ್ತು ವೀರು ಜೈಲರನ್ನು ಭೇಟಿಯಾಗಲು ಹೋದಾಗಲೂ, ಗಡಿಯಾರ ಇನ್ನೂ ಮೂರರಲ್ಲಿಯೇ ಇರುತ್ತದೆ.
ಗಬ್ಬರ್ ಡಕಾಯಿತರಿಗೆ ಗುಂಡು ಹಾರಿಸಿದಾಗ, ಮೂವರೂ ಗಬ್ಬರ್‌ಗೆ ಮುಖಾಮುಖಿಯಾಗಿ ನಿಂತಿರುವುದನ್ನು ತೋರಿಸಲಾಗಿದೆ. ಗಬ್ಬರ್ ಈ ಮೂವರಿಗೂ ಮುಂಭಾಗದಿಂದ ಗುಂಡು ಹಾರಿಸುತ್ತಾನೆ. ಆದರೆ ಡಕಾಯಿತರ ಹಿಂಭಾಗ ಗುಂಡು ಹಾರಿಸಿರುವುದನ್ನು ತೋರಿಸಲಾಗಿದೆ.
ಬಸಂತಿ ಬರಿಗಾಲಲ್ಲಿ ದೇವರ ದರ್ಶನಕ್ಕೆ ಹೋಗುತ್ತಾಳೆ. ಆದರೆ ಅಲ್ಲಿಂದ ಮರಳುವಾಗ ಟಾಂಗಾ ಅವಳಿಗಾಗಿ ಕಾಯುತ್ತಿರುತ್ತದೆ. ಬಸಂತಿ ಅದನ್ನು ಮನೆಯಲ್ಲೇ ಬಿಟ್ಟು ಬಂದಿದ್ದಳು. ಅದು ದೇವಸ್ಥಾನಕ್ಕೆ ಹೇಗೆ ಬಂತು
ಕೊನೆಯ ದೃಶ್ಯದಲ್ಲಿ, ಜೈ ಸೇತುವೆಯ ಬಳಿ ಬಂದಾಗ, ಅವನ ಎರಡೂ ಅಂಗೈಗಳು ತೆರೆದಿವೆ. ಆದರೆ ವೀರೂನ ಕೈಯಲ್ಲಿ ಅವನು ಕೊನೆಯುಸಿರೆಳೆಯುವಾಗ, ವೀರು ಅವನ ಕೈಯಿಂದ ಒಂದು ನಾಣ್ಯವನ್ನು ಪಡೆಯುತ್ತಾನೆ. ಸಾಯುವಾಗ ಜೈ ತನ್ನ ಜೇಬಿನಿಂದ ನಾಣ್ಯವನ್ನು ತೆಗೆದುಕೊಂಡಿದ್ದನೇ..?
ಡಕಾಯಿತರೊಂದಿಗೆ ಹೋರಾಡುವಾಗ, ಜೈ ಗುಂಡು ಹಾರಿಸುತ್ತಾನೆ, ನೆಲಕ್ಕೆ ಬೀಳುತ್ತಾನೆ. ಅವನ ಇಬ್ಬರು ಡಕಾಯಿತರು ಕುದುರೆಯಿಂದ ಬೀಳುತ್ತಾರೆ. ಅವನ ಒಂದು ಗುಂಡಿನಿಂದ ಸಾಯುತ್ತಾರೆ. 1 ಗುಂಡಿನಿಂದ ಇಬ್ಬರು ಹೇಗೆ ಸತ್ತರು?
ಠಾಕೂರ್ ಊರಿಗೆ ಬಂದಾಗ ಶವಕ್ಕೆ ಬಟ್ಟೆ ಸುತ್ತಿರುತ್ತದೆ. ಮಗುವಿನ ದೇಹದಿಂದ ಠಾಕೂರ್ ಕವರ್ ತೆಗೆದಾಗ ಅದು ಗಾಳಿಯಲ್ಲಿ ಹಾರಿ ಹೋಗುತ್ತದೆ. ಆದರೆ ನಂತರದ ದೃಶ್ಯದಲ್ಲಿ ಗಬ್ಬರ್‌ನನ್ನು ಕೊಲ್ಲಲು ಹೋಗುವಾಗ ಮಗುವಿನ ಶವ ಸಂಪೂರ್ಣ ಮುಚ್ಚಿರುತ್ತದೆ.
ಠಾಕೂರ್ ಹಳ್ಳಿಗೆ ಬಂದಾಗ, ಅವನು ಕಪ್ಪು ಕುದುರೆಯ ಮೇಲೆ ಗಬ್ಬರ್‌ನನ್ನು ಕೊಲ್ಲಲು ಹೋಗುತ್ತಾನೆ. ಆದರೆ ದಾರಿಯಲ್ಲಿ ಕುದುರೆಯ ಬಣ್ಣ ಕಂದು ಬಣ್ಣಕ್ಕೆ ಬದಲಾಗಿದೆ. ಈಗ ಕುದುರೆಯ ಬಣ್ಣ ಬದಲಾದ ಬಗ್ಗೆ ಏನೂ ಹೇಳಿಲ್ಲ.
ಚಿತ್ರವನ್ನು ಎಚ್ಚರಿಕೆಯಿಂದ ನೋಡುವಾಗ, ಠಾಕೂರ್ ಬಲದೇವ್ ಸಿಂಗ್ ಗಬ್ಬರ್‌ನನ್ನು ಸಿಟ್ಟಿನಲ್ಲಿ ಕೊಂದಾಗ, ಅವನ ಕೈಗಳು ಕುರ್ತಾದ ತೋಳಿನಿಂದ ಕಾಣುತ್ತವೆ.