ಪಿಕು- ದಂಗಲ್ : ಅಪ್ಪ ಮಕ್ಕಳ ಸಂಬಂಧ ಸುತ್ತುವ ಬಾಲಿವುಡ್ ಸಿನಿಮಾಗಳಿವು!
ತಂದೆ ಮತ್ತು ಮಕ್ಕಳ ಸಂಬಧವನ್ನು ಆಧರಿಸಿದ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ಸಂಬಂಧವನ್ನು ಬಾಲಿವುಡ್ ಚಲನಚಿತ್ರಗಳಲ್ಲಿ ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಅಪ್ಪಂದಿರ ದಿನದ ಸಮಯದಲ್ಲಿ ಈ ರೀತಿಯ ಸಿನಿಮಾಗಳ ಬಗ್ಗೆ ವಿವರ ಇಲ್ಲಿದೆ.
ಪಿಕು:
ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಅವರ ಪಿಕು ತಂದೆ ಮತ್ತು ಮಗಳ ನಡುವಿನ ಪ್ರೀತಿಯನ್ನು ತೋರಿಸುತ್ತದೆ. ಇದರಲ್ಲಿ ಮಗಳು ತನ್ನ ತಂದೆಯಿಂದ ಬೇರೆಯಾಗಲು ಬಯಸುವುದಿಲ್ಲ. ತನ್ನ ತಂದೆಯನ್ನು ನೋಡಿಕೊಳ್ಳಲು ಅವಳು ಮದುವೆಯಾಗುವುದಿಲ್ಲ.
ದಂಗಲ್:
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸದ್ದು ಮಾಡಿದೆ. ಇದರಲ್ಲಿ ಒಬ್ಬ ತಂದೆ ತನ್ನ ಮಗಳನ್ನು ಕುಸ್ತಿಪಟುವನ್ನಾಗಿ ಮಾಡಲು ತನ್ನ ಇಡೀ ಜೀವನವನ್ನು ಮುಡುಪಾಗಿಡುತ್ತಾನೆ.
ಕುಚ್ ಕುಚ್ ಹೋತಾ ಹೈ:
ಕರಣ್ ಜೋಹರ್ ಅವರ ಕುಚ್ ಕುಚ್ ಹೋತಾ ಹೈ ಚಿತ್ರದ ದ್ವಿತೀಯಾರ್ಧವು ತಂದೆ-ಮಗಳ ಸಂಬಂಧ ತೋರಿಸುತ್ತದೆ. ಮಗಳು ತನ್ನ ತಂದೆಯ ಸಂತೋಷಕ್ಕಾಗಿ ಹೇಗೆ ಪ್ರಯತ್ನಿಸುತ್ತಾಳೆ ಎಂದು ಸಿನಿಮಾದಲ್ಲಿ ಕಾಣಬಹುದು..
ಗುಂಜನ್ ಸಕ್ಸೇನಾ ಕಾರ್ಗಿಲ್ ಗರ್ಲ್:
ಗುಂಜನ್ ಸಕ್ಸೇನಾ ಕಾರ್ಗಿಲ್ ಗರ್ಲ್ ಸಿನಿಮಾ ಸಹ ತಂದೆ ಮತ್ತು ಮಗಳ ನಡುವಿನ ಸಂಬಂಧವನ್ನುತೋರಿಸುತ್ತದೆ. ಮಗಳ ಕನಸುಗಳನ್ನು ಈಡೇರಿಸಲು ತಂದೆ ಹೇಗೆ ಹೆಣಗಾಡುತ್ತಾರೆ. ಸಮಾಜದ ಕಟ್ಟುಪಾಡುಗಳನ್ನು ನಿರ್ಲಕ್ಷಿಸಿ, ಮಗಳ ಪ್ರತಿ ಹೆಜ್ಜೆಯಲ್ಲೂ ತಂದೆ ಗಟ್ಟಿಯಾಗಿ ನಿಂತಿರುವುದು ಕಂಡುಬರುತ್ತದೆ.
ಅಂಗ್ರೇಜಿ ಮೀಡಿಯಂ:
ಅಂಗ್ರೇಜಿ ಮೀಡಿಯಂನ ಕಥೆಯು ಸಾಮಾನ್ಯ ಭಾರತೀಯ ಕುಟುಂಬದ ಕಥೆಯಿಂದ ಪ್ರೇರಿತವಾಗಿದೆ. ಇದರಲ್ಲಿ ಒಬ್ಬ ತಂದೆ ತನ್ನ ಮಗುವನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಲು ಬಯಸುತ್ತಾನೆ. ಈ ಚಿತ್ರದಲ್ಲಿ ಇರ್ಫಾನ್ ಖಾನ್ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್:
ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್ ಚಿತ್ರವು ತಂದೆ ಮತ್ತು ಮಗನ ನೈಜ ಕಥೆಯನ್ನು ತೋರಿಸುತ್ತದೆ, ತಂದೆ-ಮಗನ ನಡುವಿನ ಸಂಘರ್ಷವನ್ನು ಬಿಂಬಿಸುವ ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಯಿತು. ಒಬ್ಬ ತಂದೆ ತನ್ನ ಮಗನನ್ನು ಸಮರ್ಥನನ್ನಾಗಿ ಮಾಡಲು ಎಷ್ಟು ಕಟ್ಟುನಿಟ್ಟಾಗಿರುತ್ತಾನೆ ಎಂಬುದನ್ನು ಇದು ತೋರಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.