- Home
- Entertainment
- Cine World
- ಮೈಚಳಿ ಬಿಟ್ಟು ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಬ್ಲೌಸ್ ಬಟನ್ ಹಾಕಮ್ಮಾ ಎಂದ ಫ್ಯಾನ್ಸ್!
ಮೈಚಳಿ ಬಿಟ್ಟು ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಬ್ಲೌಸ್ ಬಟನ್ ಹಾಕಮ್ಮಾ ಎಂದ ಫ್ಯಾನ್ಸ್!
ಕೇರಳ (ಅ.16): ದಕ್ಷಿಣ ಭಾರತ ಸಿನಿಮಾ ಕ್ಷೇತ್ರದಲ್ಲಿ ಕಣ್ಸನ್ನೆಯಿಂದಲೇ ಪ್ರಸಿದ್ಧಿಯಾಗಿರುವ ಹಾಗೂ ಮೊದಲ ಸಿನಿಮಾದಲ್ಲಿಯೇ ಲಿಪ್‌ಲಾಕ್ ಮಾಡಿದ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾಳೆ. ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದು ಮೈಮಾಟ ಪ್ರದರ್ಶನ ಮಾಡಿದ್ದು, ಬ್ಲೌಸ್ ಬಟನ್‌ಗೆ ಸ್ವಲ್ಪ ರೆಸ್ಪೆಕ್ಟ್ ಕೊಡಮ್ಮಾ ಎಂದು ಸಲಹೆ ನೀಡಿದ್ದಾರೆ.

ಆಗಾಗ್ಗೆ ತಮ್ಮ ಮೈಮಾಟದ ಫೋಟೋಗಳನ್ನು ಪ್ರದರ್ಶನ ಮಾಡುತ್ತಾ ಫ್ಯಾನ್ಸ್‌ಗಳನ್ನು ರಂಚಿಸುತ್ತಾರೆ. ಅದೇ ರೀತಿ ಈಗ ನದಿಯೊಂದರಲ್ಲಿ ಕೇರಳ ಕುಟ್ಟಿ ಶೈಲಿಯಲ್ಲಿ ಸೀರೆ ಧರಿಸಿ ನೀರಲ್ಲಿ ಮಿಂದೆದ್ದು ಪೋಸ್ ಕೊಟ್ಟಿದ್ದಾಳೆ.
ಭಾರತೀಯ ಚಿತ್ರರಂಗದಲ್ಲಿ ಕಣ್ಸನ್ನೆ ಹುಡುಗಿ ಎಂದು ಹೆಸರಾಗಿರುವ ಮಾಲಿವುಡ್ ನಟಿ ಪ್ರಿಯಾ ಪಿ. ವಾರಿಯರ್ ಇತ್ತೀಚೆಗೆ ತಮ್ಮ ಫೋಟೋಗಳೊಂದಿಗೆ ಪಡ್ಡೆ ಹೈಕಳ ನಿದ್ದೆ ಕದಿಯುತ್ತಿದ್ದಾರೆ.
ತಮ್ಮ ಫೋಟೋ ಪೋಸ್‌ನಲ್ಲಿ ಬಿಂಕ, ಬಿನ್ನಾಣದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರ ಹಾಟ್ ಫೇವರಿಟ್ ಆಗಿರುವ ಪ್ರಿಯಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದು ಮೈಮಾಟ ಪ್ರದರ್ಶನ ಮಾಡಿದ್ದು, ಬ್ಲೌಸ್ ಬಟನ್‌ಗೆ ಸ್ವಲ್ಪ ರೆಸ್ಪೆಕ್ಟ್ ಕೊಡಮ್ಮಾ ಎಂದು ಸಲಹೆ ನೀಡಿದ್ದಾರೆ.
ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕಾಗಿಯೇ ಗ್ಲಾಮರ್ ದಿರಿಸುಗಳಲ್ಲಿ ಆಕರ್ಷಕವಾದ ಮೈಮಾಟ ಪ್ರದರ್ಶಿಸಿ, ಫಾಲೋವರ್ಸ್‌ಗಳಿಗೆ ಹಬ್ಬದೂಟವನ್ನೇ ನೀಡುತ್ತಿರುತ್ತಾರೆ.
ಒಮರ್ ಲುಲು ಅವರ 'ಒರು ಅಡಾರ್ ಲವ್' ಮೂಲಕ ಮಾಲಿವುಡ್ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ ವಾರಿಯರ್, ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಸರಿಯಾದ ಹಿಟ್ ಚಿತ್ರ ನೀಡಿಲ್ಲ.
ಇಂದಿನ ಫೋಟೋಗಳಲ್ಲಿ ಅವರು ಸೀರೆ ಧರಿಸಿ ನೀರಿನಲ್ಲಿ ಆಕರ್ಷಕವಾಗಿ ಪೋಸ್ ಕೊಟ್ಟಿರುವುದನ್ನು ನೋಡಬಹುದು. ಮೈಯೆಲ್ಲಾ ಒದ್ದೆಯಾಗಿದ್ದು, ಸೌಂದರ್ಯದ ಮುದ್ದೆಯಂತೆ ಕಾಣಿಸಿಕೊಂಡಿದ್ದಾಳೆ.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗದಲ್ಲಿ ನೆಲೆಯೂರುವ ಮುನ್ನವೇ ಕಣ್ಸನ್ನೆ ಟ್ರೇಲರ್ ಮೂಲಕ ರಾತ್ರೋರಾತ್ರಿ ಊಹೆಗೂ ಮೀರಿದ ಖ್ಯಾತಿಯನ್ನು ಗಳಿಸಿದರು.
ಇಂಟರ್ನೆಟ್ ಸೆನ್ಸೇಷನ್ ಆದರು. ಒರು ಅಡಾರ್ ಲವ್‌ನ ಮಾಣಿಕ್ಯ ಮಲರಾಯ ಪೂವಿ ಹಾಡಿನಲ್ಲಿ ಅವರ ಅಭಿವ್ಯಕ್ತಿ ನಟ್ಟಿಗರ ಮನಗೆದ್ದಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಅವರ ಖ್ಯಾತಿಗೆ ಕಾರಣವಾಯಿತು.
ಮತ್ತೊಂದೆಡೆ ಪ್ರಿಯಾ ಕೈಯ್ಯಲ್ಲಿ 'ಯಾರಿಯನ್ 2', 'ಲವ್' ಹ್ಯಾಕರ್ಸ್, '3 ಮಂಕೀಸ್', 'ಜುಲಿಯಾನಾ' ಮತ್ತು 'ಶ್ರೀದೇವಿ ಬಂಗಲೆ' ಸೇರಿದಂತೆ ಅನೇಕ ಚಿತ್ರಗಳಿವೆ.
ಇನ್ನು ಪ್ರಿಯಾ ವಾರಿಯರ್ ಮಲಯಾಳಂ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನ ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.