ಕಾಂತಿಯುತ ತ್ವಚೆಗಾಗಿ ಮನೆಯಲ್ಲೇ ತಯಾರಿಸಬಹುದಾದ ಸುಲಭ ಫೇಸ್ ಸ್ಕ್ರಬ್‌ಗಳಿವು..!
ಮಳೆಗಾಲದಲ್ಲಿ ತ್ವಚೆಯ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಇಲ್ಲಿವೆ ಮನೆಯಲ್ಲೇ ನೀವು ತಯಾರಿಸಬಹುದುದಾದ ಆರೋಗ್ಯಕರ ಫೇಸ್ ಸ್ಕ್ರಬ್ ಮಾಹಿತಿ
ಫೇಸ್‌ಸ್ಕ್ರಬ್ ಮಾಡುವ ಮೂಲಕ ನಿಮ್ಮ ಮುಖದ ತ್ವಚೆಯ ಆರೋಗ್ಯವನ್ನು ಮಳೆಗಾಲದಲ್ಲಿ ಕಾಪಾಡಿಕೊಳ್ಳಬಹುದು.
ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖದ ಮೇಲಿನ ತ್ವಚೆ ಶುಚಿಯಾಗಬಹುದು. ಆದರೆ ತ್ವಚೆಯ ಒಳಭಾಗದ ಡೆಡ್ ಸ್ಕಿನ್ ಸೆಲ್‌ಗಳನ್ನು ತೊಳೆದು ತೆಗೆಯಲು ಸಾಧ್ಯವಿಲ್ಲ.
ಇಂತಹ ಸಂದರ್ಭದಲ್ಲಿ ಸ್ಕ್ರಬ್‌ಗಳು ಸಹಕಾರಿ. ಸಾಮಾನ್ಯವಾಗಿ ರೆಡಿಮೇಡ್ ಸ್ಕ್ರಬ್‌ಗಳನ್ನೇ ಜನರು ಬಳಸುತ್ತಾರೆ. ಆದರೆ ಮನೆಯಲ್ಲಿ ಮಾಡುವ ಸ್ಕ್ರಬ್‌ಗಳು ಆರೋಗ್ಯಕರ
ಗ್ರೌಂಡ್ ಕಾಫಿ ಸ್ಕ್ರಬ್: ಗ್ರೌಂಡ್ ಕಾಫಿ ಸ್ಕ್ರಬ್ ನಿಮ್ಮ ಮುಖದ ಸ್ಕ್ರಬ್‌ಗೆ ಉತ್ತಮ. ಇದನ್ನು ತಕೊಬ್ಬರಿ ಎಣ್ಣೆಯೊಂದಿಗೆ ಸೇರಿಸಿಮುಖಕ್ಕೆ ಹಚ್ಚಿ ನಿಧಾನಕ್ಕೆ ಸ್ಕ್ರಬ್ ಮಾಡಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಹಿಗೆ ಮಾಡಬಹುದು.
ನಿಂಬೆ, ಜೇನು, ಸಕ್ಕರೆ: ನಿಂಬೆ ಮುಖದಲ್ಲಿರುವ ಕಪ್ಪು ಕಲೆ ನಿವಾರಣೆಗೆ ಸಹಕಾರಿ. ಒಂದು ಕಪ್ ಸಕ್ಕರೆ, ಅರ್ಧ ಕಪ್ ಒಲಿವ್ ಆಯಿಲ್, ಒಂದು ಚಮಚ ಜೇನು ಸೇರಿಸಿ. ನಂತರ ನಿಂಬೆ ರಸ ಸೇರಿಸಿ. ಇದನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ ತಣ್ಣೀರಿಂದ ತೊಳೆಯಿರಿ
ಬೇಕಿಂಗ್ ಸೋಡಾ ಸ್ಕ್ರಬ್: ತ್ವಚೆಯ ಆರೋಗ್ಯಕ್ಕೆ ಬೇಕಿಂಗ್ ಸೋಡಾ ಅಹಕಾರಿ. ಒಂದು ಸ್ಪೂನ್ ಬೇಕಿಂಗ್ ಸೋಡಾವನ್ನು ಫೇಸ್ ಕ್ಲಿನ್ಸರ್‌ಗೆ ಬೆರೆಸಿ. ಇದನ್ನು ನಿಧಾನಕ್ಕೆ ಮುಖಕ್ಕೆ ಉಜ್ಜಿ. ಇದು ಮುಖದಲ್ಲಿರುವ ಜಿಡ್ಡಿನಂಶ ಹೋಗಲಾಡಿಸುತ್ತದೆ.
ಓಟ್ಸ್ ಮೀಲ್ ಸ್ಕ್ರಬ್: ಇದು ನಿಮ್ಮ ಮುಖದಲ್ಲಿರುವ ಹೆಚ್ಚಿನ ಜಿಡ್ಡಿನಂಶವನ್ನು ಹೋಗಲಾಡಿಸುತ್ತದೆ. ಇದು ಸಾಫ್ಟ್ ಮತ್ತು ಕಾಂತಿಯುವ ತ್ವಚೆಯನ್ನು ನೀಡುತ್ತದೆ. ಎರಡು ಸ್ಪೂನ್ ಓಟ್ಸ್‌ಮೀಲ್‌ಗೆ ಹಾಲು ಹಾಗೂ ಆಲಿವ್ ಎಣ್ಣೆ ಸೇರಿಸಿ. ನಂತರ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ