Disha Patani: ಸಮುದ್ರದಲ್ಲಿ ದಿಶಾ ಸೂರ್ಯ ಸ್ನಾನ, ಅಭಿಮಾನಿಗಳ ಎದೆ ಬಿಸಿ!
ಮಾಲ್ಡೀವ್ಸ್(ಜ. 03) ತಮ್ಮ ಸೋಶಿಯಲ್ ಮೀಡಿಯಾ (Social Media) ಪೋಟೋಗಳಿಂದಲೇ ಕಿಚ್ಚು ಹೊತ್ತಿಸುವ ದಿಶಾ ಪಟಾನಿ (Disha Patani) ಈ ಬಾರಿ ಮತ್ತೊಂದು ಲುಕ್ ನಿಂದ ಅಭಿಮಾನಿಗಳನ್ನು ದಂಗು ಬಡಿಸಿದ್ದಾರೆ.
ಸಮುದ್ರಲ್ಲಿ ಅಂಗಾತವಾಗಿ ಮಲಗಿ ದಿಶಾ ಕೊಟ್ಟಿರುವ ಪೋಸ್ ಅಭಿಮಾನಿಗಳ ಹೃದಯ ಕದ್ದಿದೆ. ಹೊಸ ವರ್ಷ ಸಂಭ್ರಮಕ್ಕೆ ಮಾಲ್ಡೀವ್ಸ್ ಗೆ ದಿಶಾ ತೆರಳಿದ್ದಳು.
ದಿಶಾ ಮತ್ತು ಮತ್ತು ಟೈಗರ್ ಶ್ರಾಫ್ (Tiger Shroff) ಇಬ್ಬರು ಒಟ್ಟಿಗೆ ಕಾಲ ಕಳೆಯುತ್ತಿದ್ದರೂ ಎಲ್ಲಿಯೂ ಸದ್ದು ಬಿಟ್ಟುಕೊಟ್ಟಿಲ್ಲ ಇವರ ಹಾಲಿಡೇ ಫೋಟೊಗಳು ಸಖತ್ ವೈರಲ್ ಆಗಿದ್ದವು.
ನ್ಯೂ ಇಯರ್ ಸೆಲೆಬ್ರೆಷನ್‌ಗಾಗಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರೂ ಕಪಲ್ ಪರಸ್ಪರ ಜೊತೆಯಾಗಿರುವ ಫೋಟೋವನ್ನು ಮಾತ್ರ ಹಂಚಿಕೊಂಡಿಲ್ಲ.
ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಮ್ ಫೇಜ್‌ನಲ್ಲಿ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದರು. ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ನೀರಿನಲ್ಲಿ ಮುಳುಗಿ ಮೇಲೆ ಎದ್ದಿದ್ದರು.
ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ದಿಶಾ ಬಾಲಿವುಡ್ ನಲ್ಲಿಯೂ ಬ್ಯುಸಿ ಇದ್ದಾರೆ. 'ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ದಿಶಾ, 'ಬಾಘಿ 2', 'ಮಲಂಗ್', 'ಭಾರತ್' ಮತ್ತು ಇತ್ತೀಚೆಗೆ ಬಿಡುಗಡೆಯಾದ 'ರಾಧೆ' ಸಿನಿಮಾಗಳಲ್ಲಿ ಕಾಣಿಸಿಕೊಂಡು ರೋಮಾನ್ಸ್ ದೃಶ್ಯಗಳ ಮೂಲಕವೇ ಹೆಸರು ಮಾಡಿದರು.