ಗಾನ ಕೋಗಿಲೆ ಲತಾ ಮಂಗೇಶ್ಕರ್‌‌ರನ್ನು ಒಮ್ಮೆ ವಿಷ ಕೊಟ್ಟು ಕೊಲ್ಲಲು ಯತ್ನಿಸಲಾಗಿತ್ತು!

First Published 29, Apr 2020, 7:07 PM

ನಮ್ಮ ದೇಶದ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್‌ ಯಾರಿಗೆ ಗೊತ್ತಿಲ್ಲ? ಈ ಗಾನ ಕೋಗಿಲೆಯ ಹಾಡಿನ ಮೋಡಿಗೆ ಇಡೀ ಜಗತ್ತೇ ಮನ ಸೋತಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ರೆಕಾರ್ಡ್‌ ಹೊಂದಿದ್ದಾರೆ ಈ ಹಿರಿಯ ಗಾಯಕಿ. ಹಲವು ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್‌ ನಮ್ಮ ಕನ್ನಡ ಸಿನಿಮಾದಲ್ಲೂ ಹಾಡಿದ್ದಾರೆ. ಫೇಮಸ್‌ ಸಿಂಗರ್‌ ಲತಾ ಮಂಗೇಶ್ಕರ್‌ಗೆ ಒಂದು ಸಾರಿ ಸ್ಲೋ ಪಾಯಿಸನ್‌ ನೀಡಲಾಗಿತ್ತಂತೆ. ತುಂಬಾ ಆಶ್ಚರ್ಯಕರ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದರಂತೆ ಈ ಗಾಯಕಿ. ಏನಿದು ಸುದ್ದಿ?

ಹಲವು ಭಾಷೆಯ ಸಿನಿಮಾಗಳಿಗೆ ಹಿನ್ನಲೆ ಗಾಯಕಿಯಾಗಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಕನ್ನಡ ಸಿನಿಮಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣದಲ್ಲಿನ 'ಬೆಳ್ಳನೆ ಬೆಳಗಾಯಿತು'  ಎಂಬ ಹಾಡು  ಹಾಡಿದ್ದಾರೆ.

ಭಾರತದ ಗಾನ ಕೋಗಿಲೆಗೆ ಬಹಳ ಹಿಂದೆ  ಸ್ಲೋ ಪಾಯಿಸನ್‌ ನೀಡಲಾಗಿತ್ತಂತೆ.

ಲತಾ ಮಂಗೇಶ್ಕರ್‌  ಬಹಳ ಆಪ್ತರಾಗಿದ್ದ ಹಿರಿಯ ಬರಹಗಾರ್ತಿ ಪದ್ಮಾ ಸಚ್‌ದೇವ್ ತಮ್ಮ ಪುಸ್ತಕದಲ್ಲಿ ಗಾಯಕಿಗೆ ವಿಷ ನೀಡಿಲಾಗಿದ್ದ ವಿಷಯವನ್ನು  ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಭಾರತದ ನೈಟಿಂಗೇಲ್ ಖ್ಯಾತಿಯ ಲತಾರನ್ನು ಕೊಲ್ಲಲು ಪ್ರಯತ್ನಿಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ.

ಐಸಾ ಕಹಾ ಸೆ ಲಾವೂ ಎಂಬ ಪುಸ್ತಕದಲ್ಲಿ, 1963 ರಲ್ಲಿ ಲತಾರಿಗೆ ವಿಷವನ್ನು ನೀಡಲಾಗಿತ್ತು ಹಾಗೂ ಗಾಯಕಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು ಎಂದು ಬಹಿರಂಗಪಡಿಸಿದ್ದಾರೆ.

'ಲತಾಜಿ  1963 ರಲ್ಲಿ 33 ವರ್ಷ ವಯಸ್ಸಿನಲ್ಲಿದ್ದಾಗ ಈ ವಿ‍ಯಷಯವನ್ನು ಬಹಿರಂಗ ಪಡಿಸಿದರು. ಒಂದು ಮುಂಜಾನೆ, ಗಾಯಕಿಗೆ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತ್ತು ಮತ್ತು  ಎರಡು ಅಥವಾ ಮೂರು ಬಾರಿ ಹಸಿರು ಮಿಶ್ರಿತ ದ್ರವ  ವಾಂತಿ ಮಾಡಿಕೊಂಡರು. ನೋವಿನಿಂದಾಗಿ ಲತಾರ ಕೈಕಾಲುಗಳನ್ನು ಅಡಿಸಲು ಸಾಧ್ಯವಾಗಲಿಲ್ಲ ಮತ್ತು ಇಡೀ ದೇಹವು ನೋವಿನಿಂದ ಕೂಡಿತ್ತು. ಮೂರು ದಿನಗಳವರೆಗೆ, ಅವರು ಸಾವಿನ ಅತೀ ಸಮೀಪದಲ್ಲಿದ್ದರು. ಹತ್ತು ದಿನಗಳ ನಂತರ, ಆರೋಗ್ಯವು ಸುಧಾರಿಸಲು ಪ್ರಾರಂಭಿಸಿತು. ಯಾರೋ ಅವರಿಗೆ ಸ್ಲೋ ಪಾಯಿಸನ್‌ ನೀಡಿದ್ದರು ಎಂದು ವೈದ್ಯರು ಹೇಳಿದರು'. ಎಂಬುದನ್ನು ರೇಕಾರ್ಡಿಂಗ್‌ನಲ್ಲಿ ಸದಾ ಕಾರ್ಯನಿರ್ವಹಿಸುತ್ತಿದ್ದ ಪದ್ಮಾ ತಮ್ಮ  ಪುಸ್ತಕದಲ್ಲಿ  ಬರೆದಿದ್ದಾರೆ.

ಲತಾ ಮಂಗೇಶ್ಕರ್ ಅವರ ಅಡುಗೆಯವರು ಯಾವುದೇ ಸುಳಿವು ನೀಡದೇ, ಸಂಬಳವನ್ನು ಸಹ ಸಂಗ್ರಹಿಸದೆ ನಾಪತ್ತೆಯಾದರು ಎಂದು ಪುಸ್ತಕದಲ್ಲಿ  ಪದ್ಮಾ ಹೇಳಿಕೊಂಡಿದ್ದಾರೆ.

ಘಟನೆಯ ನಂತರ, ಬಾಲಿವುಡ್‌ನ ಪ್ರಸಿದ್ಧ ಗೀತರಚನೆಕಾರ ಮಜ್ರೂಹ್ ಸುಲ್ತಾನಪುರಿ ಪ್ರತಿದಿನ ಲತಾಜಿ ಭೇಟಿ ಮಾಡುತ್ತಿದ್ದರು. ಮಜ್ರೂಹ್ ಮೊದಲು ಆಹಾರವನ್ನು ಸೇವಿಸಿದ ನಂತರ ಲತಾಜಿಗೆ ತಿನ್ನಲು ನೀಡುತ್ತಿದ್ದರು. ಲತಾರ ಮನಸ್ಸು ಖುಷಿಯಾಗಿಡಲು ಕವನಗಳು ಮತ್ತು ಕಥೆಗಳನ್ನು ಓದುತ್ತಿದ್ದರು,' ಎಂದು  ಉಲ್ಲೇಖಿಸಿದ್ದಾರೆ ಲೇಖಕಿ ಪದ್ಮಾ ಸಚ್‌ದೇವ್.

ಲಂಡನ್ ಮೂಲದ ಚಲನಚಿತ್ರ ಬರಹಗಾರ ನಸ್ರೀನ್ ಮುನ್ನಿ ಕಬೀರ್ ಅವರ ಸಂದರ್ಶನದಲ್ಲಿ ಈ ಮಾರಣಾಂತಿಕ ಘಟನೆಯನ್ನು ಸ್ವತಃ ಲತಾ ಮಂಗೇಶ್ಕರ್‌ ಅವರೇ ಬಹಿರಂಗಪಡಿಸಿದ್ದರು, ನಂತರ ಲತಾ ಅವರ ತಂಗಿ ಉಷಾ ಮಂಗೇಶ್ಕರ್ ಅವರೊಂದಿಗೆ ಇದನ್ನು ಮತ್ತಷ್ಟು ದೃಡಪಡಿಸಿಕೊಂಡರು ಕಬೀರ್‌.

ಲತಾ ಅವರಿಗೆ ಈಗ  90 ವರ್ಷ.36 ಭಾರತೀಯ ಭಾಷೆಗಳಲ್ಲಿ ಹಾಡಿದ ಈ ಹಿರಿಯ ಗಾಯಕಿಗೆ 2001ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ್ ರತ್ನವನ್ನು ನೀಡಲಾಯಿತು ಜೊತೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ, ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್ ಮತ್ತು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ ಇವರು,

loader