- Home
- Entertainment
- Cine World
- ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ತಾರೆಯರು!
ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ತಾರೆಯರು!
ಸೋಮವಾರ ರಾತ್ರಿ ಮುಂಬೈನಲ್ಲಿ 2023ರ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಈ ಅವಧಿಯಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳು ಪ್ರಾಬಲ್ಯ ಸಾಧಿಸಿದವು, ಆದರೆ 2022 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ (ಸುಮಾರು ರೂ 1255 ಕೋಟಿ) 'ಕೆಜಿಎಫ್ ಚಾಪ್ಟರ್ 2' ಯಾವುದೇ ವಿಭಾಗದಲ್ಲಿ ಯಾವ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಬಾಲಿವುಡ್‌ನಿಂದ, 'ದಿ ಕಾಶ್ಮೀರ್ ಫೈಲ್ಸ್' ಮತ್ತು 'ಗಂಗೂಬಾಯಿ ಕಥಿವಾಡಿ' ತಲಾ ಎರಡು ಪ್ರಶಸ್ತಿಗಳನ್ನು ಗೆದ್ದರೆ, ಟಿವಿ ಧಾರಾವಾಹಿಗಳಾದ ಅನುಪಮಾ, ನಾಗಿನ್ ಮತ್ತು 'ಇಷ್ಕ್ ಮೇ ಮಾರ್ಜಾವಾನ್' ಆವಾರ್ಡ್ ಗೆದ್ದವು. ಈ ಸಮಾರಂಭದ ಕೆಲವು ಫೋಟೋಗಳು ಇಲ್ಲಿವೆ.

ಈ ಬಾರಿ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್-2023 ಕನ್ನಡಿಗರಿಗೆ ತುಂಬಾ ವಿಶೇಷ. ಕನ್ನಡ ನಟ ರಿಷಭ್ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.
ಈ ವರ್ಷ ರೇಖಾ ಮತ್ತು ಹರಿಹರನ್ ಅವರನ್ನು ಚಲನಚಿತ್ರೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಗೌರವಿಸಲಾಯಿತು, ಆದರ ಜೊತೆ ಆಲಿಯಾ ಭಟ್, ರಣಬೀರ್ ಕಪೂರ್, ವರುಣ್ ಧವನ್ ಮತ್ತು ರಿಷಬ್ ಶೆಟ್ಟಿ ಪ್ರಶಸ್ತಿಗಳನ್ನು ಪಡೆದರು.
ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ತನ್ನ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ಆಲಿಯಾ ಭಟ್ ಎಂಬ್ರಾಯ್ಡರಿ ವರ್ಕ್ ಇರುವ ಬಿಳಿ ಬಣ್ಣದ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ಅವಳು ತನ್ನ ಕಿವಿಯಲ್ಲಿ ಮಧ್ಯಮ ಗಾತ್ರದ ವಜ್ರದ ಸ್ಟಡ್‌ಗಳನ್ನು ಧರಿಸಿದ್ದರು. ಆಲಿಯಾ ಟೈಮ್‌ಲೆಸ್ ಐಕಾನ್ ರೇಖಾ ಅವರೊಂದಿಗೆ ಪೋಸ್ ನೀಡಿದ್ದರು. ರೇಖಾ ಚಿನ್ನದ ಕಿವಿಯೋಲೆಗಳೊಂದಿಗೆ ಗೋಲ್ಡನ್ ಮತ್ತು ಕೆನೆ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿ ತುಟಿಗಳಿಗೆ ರೆಡ್ ಶೇಡ್ ಬಳಸಿದರು.
ಕಾಂತಾರ ಸಿನಿಮಾದ ನಂತರ ಜಾಗತಿಕ ಭಾರತೀಯ ಪ್ಯಾನ್-ಇಂಡಿಯನ್ ತಾರೆಯಾದ ರಿಷಬ್ ಶೆಟ್ಟಿ, ಪ್ರಶಸ್ತಿ ಸಮಾರಂಭದ ರಾತ್ರಿಯಲ್ಲಿ ತಮ್ಮ ಬಿಳಿ ಧೋತಿಯೊಂದಿಗೆ ಕಪ್ಪು ಶರ್ಟ್ ಧರಿಸಿ ಗಮನ ಸೆಳೆದರು.
ವರುಣ್ ಧವನ್ ತನ್ನ ಸಂಪೂರ್ಣ ಬ್ಲ್ಯಾಕ್ ಲುಕ್‌ನಲ್ಲಿ ಸಖತ್ ಡ್ಯಾಶಿಂಗ್ ಆಗಿ ಕಾಣುತ್ತಿದ್ದರು. ಅವರು ಕಪ್ಪು ಬ್ಲೇಜರ್, ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ವರುಣ್ ಧವನ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.
2022 ರಲ್ಲಿ ದಿ ಕಾಶ್ಮೀರ್ ಫೈಲ್ಸ್ ಮೂಲಕ ಬಾಲಿವುಡ್‌ಗೆ ಹಿಟ್ ಚಲನಚಿತ್ರವನ್ನು ನೀಡಿದ ವಿವೇಕ್ ಅಗ್ನಿಹೋತ್ರಿ, ಈ ಇವೆಂಟ್‌ಗೆ ಸಂಪೂರ್ಣ ಕಪ್ಪು ಔಟ್‌ಫಿಟ್ ಆಯ್ಕೆ ಮಾಡಿಕೊಂಡಿದ್ದರು. ಅವರು ದಿ ಕಾಶ್ಮೀರ್ ಫೈಲ್ಸ್‌ಗಾಗಿ ಗೆದ್ದ ಟ್ರೋಫಿಯೊಂದಿಗೆ ಪೋಸ್ ನೀಡಿದರು.
ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿರುವ ಬಾಲಿವುಡ್ ತಾರೆ ಶೀಬಾ ಚಡ್ಡಾ, ರೇಷ್ಮೆ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರು ಬನ್ ಹೇರ್‌ಸ್ಟೈಲ್ ಜೊತೆ ನ್ಯೂಡ್ ಪೀಚ್ ಲಿಪ್ ಶೇಡ್ ಮತ್ತು ಚಿನ್ನದ ಜುಮ್ಕಿ ಧರಿಸಿದ್ದರು. ಕೆಂಪು ಬಿಂದಿಯೊಂದಿಗೆ ತನ್ನ ಲುಕ್ ಪೂರ್ಣಗೊಳಿಸಿದ್ದರು.
ಸೀತಾ ರಾಮಂ ಚಿತ್ರದ ಅಭಿನಯಕ್ಕಾಗಿ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಪಡೆದ ದುಲ್ಕರ್ ಸಲ್ಮಾನ್, ಕಪ್ಪು ಕಸೂತಿ ಉದ್ದನೆಯ ಬ್ಲೇಜರ್‌ನಲ್ಲಿ ಕಪ್ಪು ಪ್ಯಾಂಟ್ ಮತ್ತು ಕಪ್ಪು ಡ್ರೆಸ್ ಶರ್ಟ್‌ನಲ್ಲಿ ಡ್ಯಾಶಿಂಗ್ ಆಗಿ ಕಾಣುತ್ತಿದ್ದರು.
ಅನುಪಮ್ ಖೇರ್ ತಮ್ಮ ಸಂಪೂರ್ಣ ಬೂದು ಬಣ್ಣದ ಫಾರ್ಮಲ್ ಉಡುಪಿನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಬೂದು ಬಣ್ಣದ ಬ್ಲೇಜರ್, ಫಾರ್ಮಲ್ ಪ್ಯಾಂಟ್ ಮತ್ತು ಮೆಟಾಲಿಕ್ ಗ್ರೇ ಟೈ ಹೊಂದಿರುವ ಕಪ್ಪು ಶರ್ಟ್ ಧರಿಸಿದ್ದರು.
ಭಾರತೀಯ ಟಿವಿ ತಾರೆ ರಶ್ಮಿ ದೇಸಾಯಿ ಅವರು ಪ್ರಶಸ್ತಿಗಳಲ್ಲಿ ತಮ್ಮ ಫ್ಲೋರಲ್ ಪ್ರಿಂಟ್ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರು ಬೆಳ್ಳಿಯ ಕಿವಿಯೋಲೆಗಳು ಮತ್ತು ಕಂದು ಬಣ್ಣದ ಲಿಪ್ ಶೇಡ್‌ನೊಂದಿಗೆ ಸೊಗಸಾದ ಬನ್ ಕೂದಲಿನ ಗ್ಲಾಮ್ ಅಂಶವನ್ನು ಹೆಚ್ಚಿಸಿದರು.
ಬಿಗ್ ಬಾಸ್ 15 ರ ವಿಜೇತ ಮತ್ತು ಭಾರತೀಯ ಟಿವಿ ಐಕಾನ್ ತೇಜಸ್ವಿ ಪ್ರಕಾಶ್ ಪೀಚ್ ಮತ್ತು ಸಿಲ್ವರ್ ಸ್ಟೋನ್ಸ್ ವರ್ಕ್ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಬಲಗೈಯಲ್ಲಿ ವಜ್ರದ ಬಳೆ ಮತ್ತು ತುಟಿಗಳ ಮೇಲೆ ಗುಲಾಬಿ ಬಣ್ಣದ ಲಿಪ್ ಶೇಡ್ ಧರಿಸಿದ್ದ ತೇಜಸ್ವಿ ವಜ್ರ ಮತ್ತು ಮಾಣಿಕ್ಯದ ನೇಕ್‌ಪೀಸ್ ಪೇರ್ ಮಾಡಿಕೊಂಡು ಸಖತ್ ಗ್ಲಾಮ್ ಆಗಿ ಕಾಣಿಸಿಕೊಂಡರು.
ವರುಣ್ ಧವನ್ ರೆಡ್ ಕಾರ್ಪೆಟ್ ಮೇಲೆ ಹಿರಿಯ ನಟ ಅನುಪಮ್ ಖೇರ್ ಜೊತೆ ಪೋಸ್ ಕೊಟ್ಟಿದ್ದಾರೆ. ಇವರಲ್ಲದೆ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2023 ಸಮಾರಂಭದಲ್ಲಿ ಹಲವು ಬಾಲಿವುಡ್‌ನ ದೊಡ್ಡ ತಾರೆಯರು ಭಾಗವಹಿಸಿದ್ದರು.