ಚಿರಂಜೀವಿಗೆ ವಿಜಯಶಾಂತಿ ಪಡೆಯೋ ಆಸೆ ಇತ್ತಾ? 'ಜಮ್ಕು ಜಮಾ ಲಸ್ಕ್ ಟಪಾ' ಅಂದಿದ್ಯಾಕೆ ಮೆಗಾ ಸ್ಟಾರ್?
ಸ್ಟಾರ್ ನಿರ್ದೇಶಕರ ಜೊತೆ ಸೇರಿ ನಟಿ ವಿಜಯಶಾಂತಿಗೆ ಚಿರಂಜೀವಿ ಚಳ್ಳೆಹಣ್ಣು ತಿನ್ನಿಸಿದ್ರಂತೆ. ಯಾವ ವಿಷಯದಲ್ಲಿ ವಿಜಯಶಾಂತಿ ಮೋಸ ಹೋದ್ರು?
ಚಿರಂಜೀವಿ ವಿಜಯಶಾಂತಿ
ಚಿರುಗೆ ಮಾಸ್ ಫಾಲೋಯಿಂಗ್ ಬರೋಕೆ ಡ್ಯಾನ್ಸ್, ಫೈಟ್ಸ್ ಜೊತೆಗೆ ಮ್ಯಾನರಿಸಂಗಳೂ ಕಾರಣ. 90ರ ದಶಕದಲ್ಲಿ ಪ್ರತಿ ಸಿನಿಮಾದಲ್ಲೂ ಒಂದೊಂದು ಮ್ಯಾನರಿಸಂ ಟ್ರೈ ಮಾಡ್ತಿದ್ರು. ಅವು ಜನರಲ್ಲಿ ಫೇಮಸ್ ಆಗ್ತಿದ್ವು. 'ಚೆಯ್ಯಿ ಚೂಶಾವಾ.. ಸೇರಿ ಕೆಲವು ಹಾಡುಗಳ ಭಾರೀ ಹಿಟ್ ಆಗಿದ್ದವು.
ಚಿರು-ವಿಜಯಶಾಂತಿ ಜೋಡಿ ಹಿಟ್ ಜೋಡಿ. ಒಂದು ಸಿನಿಮಾದಲ್ಲಿ ವಿಜಯಶಾಂತಿಯನ್ನ ನೋಡಿ ಚಿರು 'ಜಮ್ಕು ಜಮಾ ಲಸ್ಕ್ ಟಪಾ' ಅಂದರಂತೆ.
ಈ ಡೈಲಾಗ್ ಅರ್ಥ ಏನು ಅಂತ ವಿಜಯಶಾಂತಿಗೆ ಗೊತ್ತಾಗಲಿಲ್ಲವಂತೆ ಅದನ್ನ ಚಿರಂಜೀವಿಗೆ ಕೇಳಿದಾಗ,. ನನಗೆ ಗೊತ್ತಿಲ್ಲ, ಹೋಗಿ ರಾಘವೇಂದ್ರರಾವ್ ರನ್ನ ಕೇಳು ಅಂದ್ರಂತೆ ಚಿರು. ಮುಂದೇನು ಆಯ್ತು ಗೊತ್ತಾ?
ವಿಜಯಶಾಂತಿ
ರಾಘವೇಂದ್ರರಾವ್ ಬಳಿ ಬಂದ ವಿಜಯಶಾಂತಿ, ಜಮ್ಕು ಜಮಾ ಲಸ್ಕ್ ಟಪಾ' ಅಂದ್ರೆ ಏನು ಅಂತ ಕೇಳಿದ್ರಂತೆ, ಅದಕ್ಕೆ ಉತ್ತರಿಸಿದ ರಾಘವೇಂದ್ರ ರಾವ್, 'ನಿನ್ನ ಅಂದಕ್ಕೆ ದಾಸನಾಗಿದ್ದೇನೆ' ಅಂತ. ವಿಜಯಶಾಂತಿ ಚಿರುಗೆ ಹೇಳಿದ್ರಂತೆ. ಆಮೇಲೆ ಚಿರು ರಾಘವೇಂದ್ರರಾವ್ ರನ್ನ ಕೇಳಿದ್ರಂತೆ, ನಿಜವಾಗ್ಲೂ ಅದೇ ಅರ್ಥನಾ ಅಂತ.
'ಜಮ್ಕು ಜಮಾ ಲಸ್ಕ್ ಟಪಾ' ಅಂದ್ರೆ 'ನಿನ್ನನ್ನ ಹೇಗೆ ಪಡೆಯುವುದು ನೋಡು' ಅಂತ ಅರ್ಥ ಅಂದ್ರಂತೆ ರಾಘವೇಂದ್ರರಾವ್. ಇಬ್ಬರೂ ನಕ್ಕರಂತೆ. ನಿಜಕ್ಕೂ ಆ ಡೈಲಾಗ್ ಗೆ ಯಾವ ಅರ್ಥನೂ ಇಲ್ಲ.
ವಿಜಯಶಾಂತಿ
ಹಳೆಯ ಸಿನಿಮಾಗಳಲ್ಲಿ ಇಂಥ ಅರ್ಥವಿಲ್ಲದ ಪದಗಳು ಸಾಮಾನ್ಯ. ವಿಜಯಶಾಂತಿಗೆ ಚಿರು-ರಾಘವೇಂದ್ರರಾವ್ ಚಳ್ಳೆಹಣ್ಣು ತಿನ್ನಿಸಿದ್ರು. ಗ್ಯಾಂಗ್ ಲೀಡರ್, ಚಾಲೆಂಜ್, ಅತ್ತಕು ಯಮುಡು ಅಮ್ಮಾಯಿಗೆ ಮೊಗುಡು ಇತ್ಯಾದಿ ಹಿಟ್ ಸಿನಿಮಾಗಳನ್ನ ಈ ಜೋಡಿ ನೀಡಿದೆ.