ಶಾರೂಖ್ ಆಯ್ತು, ಗಣಪತಿ ಕೂರಿಸಿದ್ದಕ್ಕೆ ಈಗ ಸಾರಾ ಅಲಿ ಖಾನ್ ಟ್ರೋಲ್..!
ಗಣೇಶ ಚತುರ್ಥಿಗೆ ವಿಗ್ರಹ ಕೂರಿಸಿದ್ದಕ್ಕೆ ಬಾಲಿವುಡ್ ನಟ ಟ್ರೋಲ್ ಆದ ಬೆನ್ನಲ್ಲೇ ಈಗ ನಟಿ ಸಾರಾ ಅಲಿ ಖಾನ್ ಕೂಡಾ ಟ್ರೋಲ್ ಆಗಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ಸೆಲೆಬ್ರಿಟಿಗಳು ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಿದ್ದಾರೆ. ಶಾರೂಖ್ ಖಾನ್ ಹಬ್ಬ ಆಚರಿಸಿದ್ದಕ್ಕೆ ಟ್ರೋಲ್ ಆಗಿದ್ದರು.
ಈಗ ಸೈಫ್ ಆಲಿಖಾನ್ ಪುತ್ರಿ ಸಾರಾ ಅಲಿಖಾನ್ ಕೂಡಾ ಟ್ರೊಲ್ ಆಗಿದ್ದಾರೆ.
ಪಿಂಕ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿದ್ದಾರೆ ಸಾರಾ. ಎಂದಿನಂತೆ ನಮಸ್ತೆಯನ್ನು ಮಾತ್ರ ಮಿಸ್ ಮಾಡಿಲ್ಲ
ನಟ ಸೈಫ್ ಹಾಗೂ ನಟಿ ಅಮೃತಾ ಸಿಂಗ್ ಪುತ್ರಿ ಸಾರಾಳನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಗಣೇಶ ವಿಗ್ರಹದ ಮುಂದೆ ಕುಳಿತು ಕೈ ಮುಗಿದ ಫೋಟೋ ಸಾರಾ ಶೇರ್ ಮಾಡಿದ್ದರು. ಇದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಸಾರಾಳ ನಂಬಿಕೆ, ಆಕೆ ಹಿಂದು ಅಥವಾ ಮುಸ್ಲಿಂ ಎಂಬುದನ್ನು ಪ್ರಶ್ನಿಸಿ ಕಮೆಂಟ್ ಮಾಡಲಾಗಿದೆ. ಗಣಪತಿ ಬಪ್ಪಾ ಮೋರೆಯಾ ಎಂದು ಸಾರಾ ಕ್ಯಾಪ್ಶನ್ ಕೊಟ್ಟಿದ್ದಾರೆ.
ಸಾರಾಳ ಇಂಡಿಪೆಂಡೆನ್ಸ್ ಡೇ ಥ್ರೋ ಬ್ಯಾಕ್ ಫೋಟೊ
ಸಾರಾ ಎಲ್ಲ ಹಬ್ಬವನ್ನೂ ಆಚರಿಸುತ್ತಾರೆ ಎಂಬುದು ವಿಶೇಷ. ನಟಿ ಹೋಲಿ, ದೀಪಾವಳಿ, ಈದ್ ಬಹುತೇಕ ಎಲ್ಲ ಹಬ್ಬದ ಪೋಸ್ಟ್‌ಗಳನ್ನು ಸಾರಾ ತಪ್ಪದೇ ಶೇರ್ ಮಾಡುತ್ತಾರೆ.
ಈದ್ ಹಬ್ಬದ ಪೋಸ್ಟ್‌ನಲ್ಲಿ ಪುಟ್ಟ ಸಾರಾ ಮತ್ತು ಈಗಿನ ಸಾರಾ ಫೋಟೋ ಕೊಲೇಜ್ ಮಾಡಲಾಗಿತ್ತು.
ಸಾರಾ ಕ್ರಿಸ್ಮಸ್ ಆಚರಣೆ
2018ರಲ್ಲಿ ಕೇದಾರ್‌ನಾಥ್ ಸಿನಿಮಾ ಮೂಲಕ ಸಾರಾ ಬಾಲಿವುಡ್ ಎಂಟ್ರಿ ಕೊಟ್ಟರು.
ಸಿಂಬಾ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿತು. ಲವ್ ಆಜ್ ಕಲ್ ಕೂಡಾ ಹಿಟ್ ಆಯ್ತು. ವರುಣ್ ಧವನ್ ಜೊತೆಗಿನ ಕೂಲಿ ನಂಬರ್ 1 ರಿಲೀಸ್ ಆಗಲಿದೆ.