1.30 ಲಕ್ಷ ರೂ. ಲಂಗಾ ದಾವಣಿಯಲ್ಲಿ ಪೂಜಾ ಹೆಗ್ಡೆ; ಉಡುಪಿ ಮಂದಿ ಫುಲ್ ಶಾಕ್!
ಹುಟ್ಟೂರಿಗೆ ಕಾಲಿಡುತ್ತಿದ್ದಂತೆ ಲಂಗಾ ದಾವಣಿಯಲ್ಲಿ ಮಿಂಚಿದ ಪೂಜಾ...ಸೂಪರ್ ಲುಕ್ ಎಂದ ನೆಟ್ಟಿಗರು...

ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸುಂದರಿ ಪೂಜಾ ಹೆಗ್ಡೆ ತಮ್ಮ ಹುಟ್ಟೂರು ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಸಖತ್ ಟ್ರೆಡಿಷನಲ್ ಲುಕ್‌ನಲ್ಲಿ.
ಪಿಂಕ್ ಬಣ್ಣದ ಲಂಗಾಗೆ ಹಸಿರು ಬಣ್ಣದ ದಾವಣಿ ಧರಿಸಿ ಫೋಸ್ ಕೊಟ್ಟಿದ್ದಾರೆ. 'Tutti frutti cutie pattootie' ಎಂದು ಬರೆದುಕೊಂಡಿದ್ದಾರೆ.
ವಿ ಶೇಪ್ ಡಿಸೈನ್ ಇರುವ ಸಿಂಪಲ್ ಬ್ಲೌಸ್ ಧರಿಸಿರುವ ಪೂಜಾ ತಾವರೆ ಹೂ ಮುಡಿದಿದ್ದಾರೆ. ಒಂದು ಕೈಯಲ್ಲಿ ಬಳೆ ಮತ್ತೊಂದು ಕೈ ಕಾಲಿಯಾಗಿದೆ.
ಈ ಬಟ್ಟೆಯನ್ನು ಪ್ರತಿಷ್ಠಿತ ಬಟ್ಟೆ ಬ್ರ್ಯಾಂಡ್ ಆಗಿರುವ ರಾ ಮ್ಯಾಂಗೋದು ಎನ್ನಲಾಗಿದೆ. ಇದರ ಬೆಲೆ ಸುಮಾರು 1.39ಲಕ್ಷ ರೂಪಾಯಿ ಎಂದು ಸುದ್ದಿ ಹರಿದಾಡುತ್ತಿದೆ.
ಪೂಜಾ ಸಿಂಪಲ್ ಲುಕ್‌ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹುಟ್ಟೂರಿಗೆ ಕಾಲಿಡುತ್ತಿದ್ದಂತೆ ಸಂಪ್ರದಾಯವನ್ನು ಪಾಲಿಸುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಹರ್ಷಿ, ಅಲಾ ವೈಕುಂಟಾಪುರಮುಲೂ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ರಾಧೆ ಶ್ಯಾಮ್, ಆಚಾರ್ಯ, ಫನ್ 3 ಅಂತಹ ಸೂಪರ್ ಹಿಟ್ ತೆಲುಗು ಸಿನಿಮಾಗಳಲ್ಲಿ ಪೂಜಾ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.