ನೀಲಿ ಡ್ರೆಸ್ನಲ್ಲಿ ಹಾಟ್ ಪೋಸ್ ಕೊಟ್ಟ ಮಲೈಕಾ: ವಯಸ್ಸು ಹೆಚ್ಚಿದಂತೆ ಸೌಂದರ್ಯವೂ ಹೆಚ್ಚುತ್ತಿದೆ ಎಂದ ಫ್ಯಾನ್ಸ್!
ನೀಲಿ ಬಣ್ಣದ ಬಟ್ಟೆಯಲ್ಲಿ ಮಿಂಚಿರುವ ನಟಿ ಮಲೈಕಾ ಅರೋರಾ ಚಿತ್ರಗಳು ನೆಟ್ಟಿಗರಿಗೆ ಇಷ್ಟವಾಗಿದ್ದು, ವಯಸ್ಸು ಹೆಚ್ಚಿದಂತೆ ಸೌಂದರ್ಯವೂ ಹೆಚ್ಚುತ್ತಿದೆ ಅಂತ ಕಾಮೆಂಟ್ ಮೂಲಕ ನೆಟ್ಟಿಗರು ಹೇಳಿದ್ದಾರೆ.
ಅದ್ಭುತ ಫ್ಯಾಶನ್ ಸೆನ್ಸ್ಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಫೋಟೋಸ್ ಹೈಪ್ ಕ್ರಿಯೇಟ್ ಮಾಡುತ್ತಿರುತ್ತವೆ.
ಇದೀಗ ನೀಲಿ ಬಣ್ಣದ ಬಟ್ಟೆಯಲ್ಲಿ ಮಿಂಚಿರುವ ನಟಿ ಮಲೈಕಾ ಅರೋರಾ ಚಿತ್ರಗಳು ನೆಟ್ಟಿಗರಿಗೆ ಇಷ್ಟವಾಗಿದ್ದು, ವಯಸ್ಸು ಹೆಚ್ಚಿದಂತೆ ಸೌಂದರ್ಯವೂ ಹೆಚ್ಚುತ್ತಿದೆ ಅಂತ ಕಾಮೆಂಟ್ ಮೂಲಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮಲೈಕಾ ಫೋಟೋಸ್ ನೋಡಿದ ನೆಟ್ಟಿಗರು ಹಾರ್ಟ್, ಫೈರ್ ಇಮೋಜಿ ಮೂಲಕ ಲವ್ ತೋರುತ್ತಿದ್ದಾರೆ. ಅಧಿಕೃತ ವೆಬ್ಸೈಟ್ ಪ್ರಕಾರ ಮಲೈಕಾ ಅರೋರಾ ಅವರ ಉಡುಪಿನ ಮೌಲ್ಯ 18,500 ಆಗಿದೆ.
50ರ ಆಸುಪಾಸಿನಲ್ಲಿರುವ ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅವರು ನಟಿಗಿಂತ ಮೊದಲು ರೂಪದರ್ಶಿ. ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ.
ನೀಲಿ ಬಟ್ಟೆ ತೊಟ್ಟು ಮಾದಕ ನೋಟದಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಸುಂದರಿಯ ಸೌಂದರ್ಯ ಅದ್ಭುತವಾಗಿದೆ. ಯೋಗ ಟೀಚರ್ ಆಗಿರುವ ಮಲೈಕಾ ಅರೋರಾ ಅವರ ಫಿಟ್ನೆಸ್ ಬಗ್ಗೆ ಎರಡನೇ ಮಾತೇ ಇಲ್ಲ. ನಟಿ 49ನೇ ವಯಸ್ಸಿನಲ್ಲಿಯೂ ಸುಂದರವಾಗಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ.
ಮಲೈಕಾ ಅರೋರಾ ಅವರು ಮಾಡೆಲಿಂಗ್ ಹಾಗೂ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ. ಅವರು ಡ್ಯಾನ್ಸ್ ಶೋಗಳಿಗೆ ತೀರ್ಪುಗಾರರಾಗಿ ಭಾಗವಹಿಸಿ ಉತ್ತಮ ಸಂಭಾವನೆ ಗಳಿಸುತ್ತಾರೆ.
ಇತ್ತೀಚಿಗೆ ಮಲೈಕಾ ಅರ್ಜುನ್ ಕಪೂರ್ ಜೊತೆ ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವುದಾಗಿ ಸುದ್ದಿ ಹರಿದಾಡಿತ್ತು. ಆದ್ರೆ ಈ ಕುರಿತು ಮಲೈಕಾ ಅಥವಾ ಅರ್ಜುನ್ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.