- Home
- Entertainment
- Cine World
- ಸೀರೆಯಲ್ಲಿ ಧಡ್ಕನ್ ಹೆಚ್ಚಿಸಿದ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್: ನಿಮ್ಮ ಸೌಂದರ್ಯದ ರಹಸ್ಯವೇನು ಎಂದ ಫ್ಯಾನ್ಸ್!
ಸೀರೆಯಲ್ಲಿ ಧಡ್ಕನ್ ಹೆಚ್ಚಿಸಿದ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್: ನಿಮ್ಮ ಸೌಂದರ್ಯದ ರಹಸ್ಯವೇನು ಎಂದ ಫ್ಯಾನ್ಸ್!
ಬಾಲಿವುಡ್ ನಟಿ ಮಾಧುರಿ ಸುಂದರವಾದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಅವರ ಲೇಟೆಸ್ಟ್ ಸೀರೆಯುಟ್ಟ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಾಧುರಿ ದೀಕ್ಷಿತ್ ಅವರು ಬಾಲಿವುಡ್ನ ಖ್ಯಾತ ನಟಿಯರಲ್ಲಿ ಒಬ್ಬರು. ಧಕ್ ಧಕ್ ಚೆಲುವೆ ಎಂದೇ ಕರೆಯಲ್ಪಡುವ ಈ ನಟಿಗೆ ಈಗ ವಯಸ್ಸು ಎಷ್ಟಾಯ್ತು ಗೊತ್ತಾ? ಆದರೆ ಅವರನ್ನು ನೊಡಿ ಏಜ್ ಗೆಸ್ ಮಾಡೋದು ಕಷ್ಟಾನೆ ಬಿಡಿ.
ಇತ್ತೀಚೆಗೆ ಮಾಧುರಿ ದೀಕ್ಷಿತ್ ಅವರು ಸುಂದರವಾದ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆಕರ್ಷಕವಾದ ನೇರಳೆ ಹಾಗೂ ಪಿಂಕ್ ಬಣ್ಣದ ಕಾಂಬಿನೇಷನ್ ಸೀರೆಯಲ್ಲಿ ಬಾಲಿವುಡ್ ಬ್ಯೂಟಿ ಮಿಂಚಿದ್ದಾರೆ.
ಮಾಧುರಿ ಅವರು ಸುಂದರವಾದ ಆಭರಣಗಳನ್ನು ಧರಿಸಿಕೊಂಡಿದ್ದಾರೆ. ಗ್ರ್ಯಾಂಡ್ ಜ್ಯುವೆಲ್ಲರಿ ಧರಿಸಿ ಪೋಸ್ ಕೊಟ್ಟ ಮಾಧುರಿ ದೀಕ್ಷಿತ್ ಅವರ ಕ್ಲೋಸಪ್ ಲುಕ್ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಾಧುರಿ ಲುಕ್ ನೋಡಿದ ನೆಟ್ಟಿಗರು ವಾವ್ ಬ್ಯೂಟಿಫುಲ್, ಸೀರೆಯಲ್ಲಿ ತುಂಬಾ ಅಂದವಾಗಿ ಕಾಣ್ತೀರಾ, ಸೂಪರ್ ಸ್ಮೈಲ್, ನಿಮ್ಮ ಏಜ್ ಎಷ್ಟು, ಸೀರೆಯಲ್ಲಿ ಧಡ್ಕನ್ ಹೆಚ್ಚಿತು, ನಿಮ್ಮ ಸೌಂದರ್ಯದ ರಹಸ್ಯವೇನು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಮಾಧುರಿ ದೀಕ್ಷಿತ್ ಅವರ ವಯಸ್ಸು 56. ಅಂದರೆ 60ರ ಸಮೀಪದಲ್ಲಿದ್ದಾರೆ ಬಾಲಿವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿ. ಅವರ ಮುಖ ನೋಡಿದರೆ ಇದನ್ನು ಖಂಡಿತಾ ನಂಬಲಾಗದು.
ಮಾಧುರಿ ಅವರು ವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀರಾಮ್ ಮಾಧವ್ ನೆನೆ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಾಧುರಿ ಅವರು ಸದ್ಯ ರಿಯಾಲಿಟಿ ಶೋ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.