ಈ ಬಾಲಿವುಡ್ ನಟ ಕೊಟ್ಟಿದ್ದು ಒಂದೇ ಹಿಟ್ ಫಿಲಂ… ಆದ್ರೆ ಈತ ಅಲ್ಲು ಅರ್ಜುನ್ ಗಿಂತಲೂ ಶ್ರೀಮಂತ!
ಜಾಯೆದ್ ಖಾನ್ ಅವರ ಚಲನಚಿತ್ರ ಕರಿಯರ್ ಬಗ್ಗೆ ಮಾತನಾಡುವುದಾದರೆ, ಕೇವಲ ಒಂದು ಹಿಟ್ ಚಿತ್ರ ಕೊಟ್ಟು, ಬೇರೆಲ್ಲಾ ಫ್ಲಾಪ್ ಚಿತ್ರಗಳನ್ನು ಕೊಟ್ಟವರು. ಆದರೆ ಈಗ ನಟನೆ ಬಿಟ್ಟು ಉದ್ಯಮಿಯಾಗಿರುವ ಇವರು ಕೋಟ್ಯಾಧಿಪತಿ.
ಜಾಯೆದ್ ಖಾನ್ (Zayed Khan) ಅವರ ಫಿಲಂ ಕರಿಯರ್ ಬಹಳ ದೀರ್ಘವಾಗಿದೆ, ಆದರೆ 17 ರಿಂದ 18 ಚಲನಚಿತ್ರಗಳನ್ನು ಮಾಡಿದ ನಂತರವೂ, ಅವರು ಫ್ಲಾಪ್ ನಟರಾಗಿಯೇ ಉಳಿದರು. ಜಾಯೆದ್ ಖಾನ್ ಅವರ ಪೂರ್ತಿ ಫಿಲಂ ಕರಿಯರ್ ನೋಡಿದ್ರೆ ಅವರ ಒಂದು ಫಿಲಂ ಮಾತ್ರ ಹಿಟ್ ಆಗಿತ್ತು. ಅದು 'ಮೈ ಹೂ ನಾ'. ಈ ಚಿತ್ರದಲ್ಲೂ ಅವರು ಪೋಷಕ ನಟನ ಪಾತ್ರದಲ್ಲಿ ನಟಿಸಿದ್ದರು. 2015 ರಲ್ಲಿ 'ಶರಾಫತ್ ಗಯಿ ತೆಲ್ ಲೆನೆ' ಫ್ಲಾಪ್ ಆದ ನಂತರ, ಜಾಯೆದ್ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡು ವ್ಯವಹಾರದತ್ತ ಗಮನ ಹರಿಸಲು ಪ್ರಾರಂಭಿಸಿದರು.
ಜಾಯೆದ್ ಖಾನ್ ಅವರ ನಿವ್ವಳ ಮೌಲ್ಯ 1500 ಕೋಟಿ ರೂ ಎಂದು ಇಟಿ ನೌ 2024 (ET Now 2024)ರಲ್ಲಿ ವರದಿ ಮಾಡಲಾಗಿದೆ. ಆದಾಗ್ಯೂ, ಜಾಯೆದ್ ಇದನ್ನು ಒಪ್ಪಿಕೊಳ್ಳಲೂ ಇಲ್ಲ, ರಿಜೆಕ್ಟ್ ಕೂಡ ಮಾಡಿಲ್ಲ. ನಿಜವಾಗಿಯೂ ಜಾಯೆದ್ ಖಾನ್ ನಿವ್ವಳ ಮೌಲ್ಯ 1500 ಕೋಟಿ ರೂ, ಆಗಿದ್ದರೆ. ಇವರ ಆಸ್ತಿ ರಣಬೀರ್ ಕಪೂರ್, ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಗಿಂತಲೂ ಹೆಚ್ಚು. ಅಂದರೆ ಅವರಿಗಿಂತಲೂ ಹೆಚ್ಚು ಶ್ರೀಮಂತ ಈ ನಟ.
zayed khan
ಫ್ಲಾಪ್ ಸಿನಿಮಾಗಳಿಂದ ಖಿನ್ನತೆಗೆ ಜಾರಿಲ್ಲ
ಜಾಯೆದ್ ನಿರಂತರವಾಗಿ ಚಲನಚಿತ್ರಗಳಲ್ಲಿ ಸೋಲುತ್ತಿದ್ದರು. ಒಂದು ವೇಳೆ ಅವರ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಅವರು ಖಂಡಿತವಾಗಿಯೂ ಖಿನ್ನತೆಗೆ ಒಳಗಾಗುತ್ತಿದ್ದರು. ಆದರೆ ಜಾಯೆದ್ ಹಾಗೆ ಮಾಡಲಿಲ್ಲ. ಅವರು ತಮ್ಮ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ (business management) ಪದವಿಯನ್ನು ಉತ್ತಮವಾಗಿ ಬಳಸಿಕೊಂಡರು. ಇಂದು ಅತ್ಯಂತ ಜನಪ್ರಿಯ ನಟರಿಗಿಂತ ಹೆಚ್ಚು ಗಳಿಸುತ್ತಿದ್ದಾರೆ. ಜಾಯೆದ್ ಖಾನ್ ಅವರ ನಿರ್ಧಾರವು ಖಂಡಿತವಾಗಿಯೂ ಫೇಲ್ಯುರ್ ಆಗುತ್ತಿರುವ ಮಕ್ಕಳಿಗೆ, ಯುವಕರಿಗೆ ಸ್ಫೂರ್ತಿ ನೀಡುತ್ತದೆ, ನೀವು ಒಂದು ವಿಷಯದಲ್ಲಿ ವಿಫಲರಾಗುತ್ತಿದ್ದರೆ, ಅದೇ ನಿಮ್ಮ ಕೊನೆ ಎಂದು ಅಂದುಕೊಳ್ಳಬೇಡಿ. ಇದು ಹೊಸದರ ಆರಂಭ ಅನ್ನೋದು ನೆನಪಿರಲಿ.
ವ್ಯವಹಾರ ಕ್ಷೇತ್ರ
ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು (film career) ನಡೆಸಲು ಸಾಧ್ಯವಿಲ್ಲ ಎಂದು ಜಾಯೆದ್ ಖಾನ್ ಅರ್ಥಮಾಡಿಕೊಂಡರು, ಆದ್ದರಿಂದ ಅವರು ವ್ಯವಹಾರ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಯತ್ನಿಸಿದರು ಮತ್ತು ಯಶಸ್ವಿಯಾದರು. ಅವರು ನನ್ನಿಂದ ಸಾಧ್ಯ ಇಲ್ಲ ಎಂದು ಕುಳಿತರೇ ಹಿಂದೆಯೇ ಉಳಿಯುತ್ತಿದ್ದರು.
ಬ್ಯಾಕಪ್ ಇರಲಿ
ನಟನಾ ಕ್ಷೇತ್ರಕ್ಕೆ ಬರುವ ಮೊದಲು, ಅವರ ಪೋಷಕರು ಡಿಗ್ರಿ ಕಂಪ್ಲೀಟ್ ಮಾಡಿಯೇ ನಟನಾಗಬೇಕು ಎಂದು ಷರತ್ತು ವಿಧಿಸಿದ್ದರಂತೆ. ಅದೇ ಅವರು ನಟನಾಗಿ ಸೋತಾಗ ಕೈಹಿಡಿಯಿರು. ಅದೇ ರೀತಿ ಪ್ರತಿಯೊಬ್ಬರೂ ಕೂಡ ಒಂದು ಬ್ಯಾಕಪ್ ಇಟ್ಟುಕೊಂಡಿರಲೇಬೇಕು. ಇದರ ಪ್ರಯೋಜನವೆಂದರೆ ನೀವು ಒಂದು ಕ್ಷೇತ್ರದಲ್ಲಿ ವಿಫಲರಾದಾಗ, ನೀವು ಸಂಪಾದಿಸಲು ಅಥವಾ ಕೆಲಸ ಮಾಡಲು ಮತ್ತೊಂದು ಕ್ಷೇತ್ರವನ್ನು ಸಿದ್ಧಗೊಳಿಸಲು ಸಹಾಯ ಮಾಡುತ್ತೆ.
ಸೋಲನ್ನು ಒಪ್ಪಿಕೊಳ್ಳದ ಜಾಯೆದ್ ಖಾನ್
ಜಾಯೆದ್ ಖಾನ್ ಫ್ಲಾಪ್ ಮೇಲೆ ಫ್ಲಾಮ್ ಸಿನಿಮಾಗಳನ್ನು (flop films) ನೀಡಿದ್ದರು, ಹಾಗಂತ ಬೇಸರದಿಂದ ಕುಗ್ಗಲಿಲ್ಲ, ಅಥವಾ ಸಿನಿಮಾ ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಸುಮ್ಮನಾಗಲಿಲ್ಲ. ಸರಿಯಾದ ಸಮಯದಲ್ಲಿ ನಟನೆಯನ್ನು ತೊರೆದು ವ್ಯವಹಾರ ಮಾಡಲು ನಿರ್ಧರಿಸಿದರು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಪ್ರಯೋಜನಕಾರಿ ಎಂಬುದು ಇದು ತೋರಿಸುತ್ತದೆ.
ಕಠಿಣ ಪರಿಶ್ರಮ
ಚಲನಚಿತ್ರಗಳಲ್ಲಿ ಕರಿಯರ್ ಕಂಡುಕೊಳ್ಳಲು ಸಾಧ್ಯವಾಗೋದಿಲ್ಲ ಎಂದು ನಟ ಅರ್ಥಮಾಡಿಕೊಂಡರು, ಆದ್ದರಿಂದ ಅವರು ತಮ್ಮ ಕ್ಷೇತ್ರವನ್ನು ಬದಲಾಯಿಸಿದರು ಆದರೆ ಕಷ್ಟಪಟ್ಟು ಕೆಲಸ ಮಾಡುತ್ತಲೇ ಇದ್ದರು. ಈಗ ಅದ್ಭುತ ಯಶಸ್ಸನ್ನು ಪಡೆಯುವ ಮೂಲಕ 1500 ಕೋಟಿಯ ಒಡೆಯರಾಗಿದ್ದಾರೆ. ಆ ಮೂಲಕ ಅಲ್ಲು ಅರ್ಜುನ್, ಪ್ರಭಾಸ್ ರಂತಹ ಹೀರೋಗಳನ್ನೂ ಹಿಂದಿಕ್ಕಿ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ.