ಶಕ್ತಿ ಕಪೂರ್ ಮಗಳು, ಬಾಲಿವುಡ್ ನಟಿ ಶ್ರದ್ಧಾ ಸಪ್ತಪದಿ ತುಳೀತಾ ಇದಾರೆ!
ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಅವರ ಬಾಯ್‌ಫ್ರೆಂಡ್ ಹಾಗೂ ಫೋಟೋಗ್ರಾಫರ್ ರೋಹನ್ ಶ್ರೇಷ್ಠಾ ಅವರ ಮದುವೆಯ ಸುದ್ದಿ ಆಗಾಗ ಆಗುತ್ತಿರುತ್ತದೆ. ಇತ್ತೀಚೆಗೆ, ವರುಣ್ ಮತ್ತು ನತಾಶಾ ದಲಾಲ್ ವಿವಾಹವಾದಾಗ ರೋಹನ್ ಅಭಿನಂದಿಸಿದರು. ನಂತರ ವರುಣ್ ಶ್ರದ್ಧಾ ಮತ್ತು ರೋಹನ್ ವಿವಾಹದ ಬಗ್ಗೆ ಹಿಂಟ್ ನೀಡಿದರು. ಈಗ ಶ್ರದ್ಧಾ ತಂದೆ ಮತ್ತು ನಟ ಶಕ್ತಿ ಕಪೂರ್ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ, ಶಕ್ತಿ ಕಪೂರ್ ತಮ್ಮ ಮಗಳ ಮದುವೆಯ ಬಗ್ಗೆ?
ಮಗಳ ಮದುವೆ ಬಗ್ಗೆ ಏನೇನು ಸುದ್ದಿಗಳು ಹರಿದಾಡುತ್ತಿವೆಯೋ ಗೊತ್ತಿಲ್ಲ. ಆದರೆ, ನಾನು ಸದಾ ಅವಳ ಬೆಂಬಲಕ್ಕೆ ನಿಲ್ಲುವುದಾಗಿ ಶ್ರದ್ಧಾ ಕಪೂರ್ ಮದುವೆ ಬಗ್ಗೆ ಶಕ್ತಿ ಕಪೂರ್ ಹೇಳಿದ್ದಾರೆ.
'ಮದುವೆ ಸೇರಿ ಶ್ರದ್ಧಾ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ಅವಳ ಜೊತೆ ಇರುತ್ತೇನೆ. ರೋಹನ್ ಶ್ರೇಷ್ಠ ಮಾತ್ರ ಏಕೆ? ಅವಳು ಆರಿಸಿ ಕೊಂಡಿದ್ದಾಳೆ ಮತ್ತು ಅವನೊಂದಿಗೆ ಬಾಳು ನಡೆಸಲು ಬಯಸಿದ್ದಾಳೆ ಅಷ್ಟೇ,' ಎಂದಿದ್ದಾರೆ ಶಕ್ತಿ ಕಪೂರ್.
'ರೋಹನ್ ಒಳ್ಳೆಯ ಹುಡುಗ. ಬಾಲ್ಯದಿಂದಲೂ ಅವನು ಗೊತ್ತು. ರೋಹನ್‌ನನ್ನು ಮದುವೆಯಾಗಲು ಬಯಸಿರುವ ವಿಷಯ ಅವಳು ಹೇಳಲಿಲ್ಲ. ನನಗೆ ಇಬ್ಬರೂ ಬಾಲ್ಯದ ಸ್ನೇಹಿತರು. ಇಬ್ಬರೂ ಸಂಬಂಧ ಬಗ್ಗೆ ಸೀರಿಯಸ್ ಆಗಿದ್ದಾರೋ, ಇಲ್ಲವೋ ಗೊತ್ತಿಲ್ಲ,' ಎನ್ನುತ್ತಾರೆ ಶಕ್ತಿ ಕಪೂರ್.
'ಶ್ರೇಷ್ಠಾ ಮತ್ತು ಕಪೂರ್ ಕುಟುಂಬ ಸ್ನೇಹಿತರು. ರೋಹನ್ ತಂದೆ ರಾಕೇಶ್ ಶ್ರೇಷ್ಠರ ರಿಚಯ ಮೊದಲಿನಿಂದಲೂ ಇದೆ. ಅವರು ರಾಕೇಶ್ ಜೊತೆ ಅನೇಕ ಫೋಟೋಶೂಟ್‌ಗಳನ್ನು ಮಾತ್ರವಲ್ಲ, ಡಿನ್ನರ್ ಹಾಗೂ ಡ್ರಿಂಕ್ಸ್‌ಗೂ ಒಟ್ಟಿಗೆ ಹೋಗುತ್ತೇವೆ,' ಎಂದಿದ್ದಾರೆ.
'ಶ್ರದ್ಧಾ ತನ್ನ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ಕನಿಷ್ಠ 2-3 ವರ್ಷಗಳಾದರೂ ಮದುವೆಯಾಗುವುದಿಲ್ಲ,' ಎಂದು ಶಕ್ತಿ ಕಪೂರ್ ಕಳೆದ ವರ್ಷವೇ ಹೇಳಿದ್ದರು.
ವೃತ್ತಿ ಜೀವನದಲ್ಲಿ ಶ್ರದ್ಧಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಮತ್ತು ಅದರ ಬಗ್ಗೆ ಹೆಮ್ಮೆ ಇದೆ. ಪ್ರಸ್ತುತ ರಣಬೀರ್ ಕಪೂರ್ ಜೊತೆಗೆ ಚಿತ್ರೀಕರಣದಲ್ಲಿದ್ದಾಳೆ. ಅವರು ಇಂದಿನ ಸಮಯದಲ್ಲಿ ಅವಳ ನೆಚ್ಚಿನ ನಟರಾಗಿದ್ದಾರೆ,' ಎಂದಿದ್ದಾರೆ ಶಕ್ತಿ.
ರಣಬೀರ್ ಅವರ ಮಗ ಸಿದ್ಧಾಂತ್‌ರ ಫೇವರೇಟ್ ನಟ ಕೂಡ ಹೌದು. 'ಅವಳು ಮದುವೆ ಯಾಗಬೇಕಾದಾಗ, ಅವಳು ತನ್ನ ಸಂಗಾತಿಯನ್ನು ಮತ್ತು ಸಮಯವನ್ನು ಸ್ವತಃ ಆರಿಸಿಕೊಳ್ಳುತ್ತಾಳೆ,' ಎಂದು ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ ಶಕ್ತಿ ಕಪೂರ್.