ಎದೆಯಿಂದ ಮೂಡಿಬಂದ ಕೊಂಬು; ಪೊಲೀಸ್ ಕಂಪ್ಲೇಂಟ್ ಆದ್ರೂ ಉರ್ಫಿ ಜಾವೇದ್ ಹುಚ್ಚಾಟ ಕಮ್ಮಿ ಅಗಿಲ್ಲ
ಹಾಟ್ ಫೋಟೋ ಅಪ್ಲೋಡ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಬೆಂಕಿ ಹಚ್ಚಿದ ಉರ್ಫಿ ಜಾವೇದ್....
ಬಿಗ್ ಬಾಸ್ ಓಟಿಟಿ ಸ್ಪರ್ಧಿ, ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ವಿರುದ್ಧ ಬಿಜಿಪಿ ಸದಸ್ಯೆ ಚಿತ್ರಾ ವಾಫ್ ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದರು.
ಸುಮಾತು ಎರಡು ಗಂಟೆಗಳ ಕಾಲ ಮುಂಬೈನ ಅಂಬೋಲಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಲ್ಲಿಗೆ ಸುಮ್ಮನಾಗುತ್ತಾರೆ ಅಂದುಕೊಳ್ಳಬೇಡಿ... ಮತ್ತೊಮ್ಮೆ ರಂಪಾಟ ಮಾಡಿದ್ದಾರೆ.
ಬೆತ್ತಲಾಗಿ ನಿಂತಿರುವ ಉರ್ಫಿ ಎದೆ ಮೇಲೆ ಕೊಂಬು ಅಂಟಿಸಿಕೊಂಡು ನೀಲಿ ಬಣ್ಣದ ಸ್ಕರ್ಟ್ ಧರಿಸಿದ್ದಾರೆ. ಉರ್ಫಿ ಮತ್ತೊಂದು ಹಾಟ್ ಲುಕ್‌ಗೆ ನೆಟ್ಟಿಗರು ಶಾಕ್ ಆಗಿದ್ದಾರೆ.
'ಪ್ರತಿಯೊಬ್ಬ ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿರುತ್ತದೆ. ಅವಳು ಮಾತ್ರ ಅವುಗಳನ್ನು ಹರಡಬೇಕಾಗಿದೆ ಮತ್ತು ಅವಳ ಕನಸುಗಳನ್ನು ನನಸು ಮಾಡಿಕೊಳ್ಳಬೇಕು. ಒಳ್ಳೆ ಕೆಲಸ ಮಾಡಿರುವೆ ಉರ್ಫಿ' ಎಂದು ನಝಾ ಜೋಶಿ ಕಾಮೆಂಟ್ ಮಾಡಿದ್ದಾರೆ.
'ನನ್ನನ್ನು ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ವಿಧಿ ಇಲ್ಲ. ಅಶ್ಲೀಲತೆ, ನಗ್ನತೆಯ ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ನನ್ನ ಖಾಸಗಿ ಭಾಗಗಳು ಕಾಣಿಸದ ಹೊರತು, ನೀವು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ.' ಎಂದು ಉರ್ಫಿ ದೂರುಗಳ ವಿರುದ್ಧ ರಿಯಾಕ್ಟ್ ಮಾಡಿದ್ದಾರೆ.
'ಪ್ರಚಾರ ಪಡೆಯಲು ಮಾತ್ರ ಇವರು ಇದನ್ನು ಮಾಡುತ್ತಿದ್ದಾರೆ.ಅತ್ಯಾಚಾರದ ಅಪರಾಧಿಗಳು ಸ್ವತಂತ್ರವಾಗಿ ತಿರುಗುತ್ತಿರುವಾಗ ಈ ರಾಜಕಾರಣಿಗಳು ನನ್ನನ್ನು ಬಂಧಿಸಲು ಬಂದಿದ್ದಾರೆ.'
'ನಮ್ಮ ದೇಶದ ರಾಜಕಾರಣಿಗಳು ನನ್ನ ಬಂಧನಕ್ಕೆ ಒತ್ತಾಯಿಸುತ್ತಿರುವಾಗ ಅವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಎಂಥ ವಿಪರ್ಯಾಸ. ಹಾಗಾದರೆ ನಾನು ಅತ್ಯಾಚಾರಿಗಳಿಗಿಂತ ಸಮಾಜಕ್ಕೆ ದೊಡ್ಡ ಭಯ ಆಗಿದ್ದೀನಾ? ಎಂದು ಪ್ರಶ್ನೆಸಿದ್ದರು.