ಈ ಟಾಪ್ ಮಹಿಳಾ ಪ್ರಧಾನ ಥ್ರಿಲ್ಲರ್ ಸಿನಿಮಾಗಳು ಓಟಿಟಿಯಲ್ಲಿ ಲಭ್ಯ!
ಭಕ್ಷಕ್ ಸಿನಿಮಾ ಫೆಬ್ರವರಿ 9, 2024 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಭೂಮಿ ಪಡ್ನೇಕರ್ ಅಭಿನಯದ ಈ ಥ್ರಿಲ್ಲರ್ ಎಲ್ಲರ ಗಮನ ಸೆಳೆಯುತ್ತಿದೆ ಹಾಗೂ ಸಾಕಷ್ಟು ಆಸಕ್ತಿದಾಯಕ ಕಥೆಯಾಗಿದ್ದು, ಭೂಮಿ ಪ್ರಶಂಸನೀಯ ಅಭಿನಯ ನೀಡಿದ್ದಾರೆ. ಇದೇ ರೀತಿ ಹಲವು ಫೇಮಸ್ ಮಹಿಳಾ ಪ್ರಮುಖ ಥ್ರಿಲ್ಲರ್‌ಗಳು ಒಟಿಟಿಯಲ್ಲಿ ವೀಕ್ಷಿಸಲು ಲಭ್ಯವಿದೆ.

bhakshak
ಭಕ್ಷಕ್: ಭಕ್ಷಕ್ ಚಿತ್ರದಲ್ಲಿ ಭೂಮಿ ಪಡ್ನೇಕರ್ ಅವರು ಯುವತಿಯರ ಆಶ್ರಯಧಾಮದಲ್ಲಿ ದೌರ್ಜನ್ಯ ಪ್ರಕರಣಗಳನ್ನು ತನಿಖೆ ಮಾಡುವ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿದೆ.
ಜಾನೆ ಜಾನ್: ಜಾನೆ ಜಾನ್ ಕರೀನಾ ಕಪೂರ್ ಖಾನ್ ಮತ್ತು ಹೆಚ್ಚಿನವರು ನಟಿಸಿರುವ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಸಿನಿಮಾ ಥ್ರಿಲ್ಲರ್ ರಹಸ್ಯವಾಗಿದೆ. ಇದು ಮಾಯಾ ಡಿಸೋಜಾ ಮತ್ತು ಅವರ ಮಾಜಿ ಪತಿಯ ಕೊಲೆಯನ್ನು ಆಧರಿಸಿದ ಕಥೆ ಹೊಂದಿದೆ.
ಖುಫಿಯಾ: ನೆಟ್‌ಫ್ಲಿಕ್ಸ್‌ನಲ್ಲಿರುವ ಖುಫಿಯಾ ಸಿನಿಮಾದಲ್ಲಿ ಟಬು, ಅಲಿ ಫಜಲ್, ವಾಮಿಕಾ ಗಾಬಿ ಮತ್ತು ಮುಂತಾದವರು ನಟಿಸಿದ್ದಾರೆ. ಇದರಲ್ಲಿ ಟಬು ರಾ ಏಜೆಂಟ್ ಆಗಿ ನಟಿಸಿದ್ದಾರೆ
movie
ಮಾಮ್: ಮಾಮ್ ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ ಮತ್ತು Zee 5 ನಲ್ಲಿರುವ ಈ ಚಿತ್ರದಲ್ಲಿ ತನ್ನ ಮಲಮಗಳು ಎದುರಿಸುವ ಲೈಂಗಿಕ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಳ್ಳುವ ತಾಯಿಯಾಗಿ ದಿವಗಂತ ಶ್ರೀದೇವಿ ನಟಿಸಿದ್ದಾರೆ.
ರಾಝಿ: ರಾಝಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗುತ್ತಿರುವ ರಾಝಿ ಆಲಿಯಾ ಭಟ್ ನಾಯಕಿಯಾಗಿರುವ ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದೆ. ಇದು ನಿರ್ಣಾಯಕ ಮಾಹಿತಿ ಪಡೆಯಲು ಪಾಕಿಸ್ತಾನಕ್ಕೆ ಕಳುಹಿಸಲಾದ ಭಾರತೀಯ ಗೂಢಚಾರರ ಕಥೆ ಹೊಂದಿದೆ.
ಎ ಥರ್ಸ್‌ಡೇ: ಡಿಸ್ನಿ++ ನಲ್ಲಿ ಹಾಟ್ ಸ್ಟಾರ್ ಲಭ್ಯವಿರುವ ಎ ಥರ್ಸ್‌ಡೇ ಸಿನಿಮಾದಲ್ಲಿ ಯಾಮಿ ಗೌತಮ್ ನಾಯಕರಾಗಿದ್ದಾರೆ. ಸರ್ಕಾರದಿಂದ ಬೇಡಿಕೆಗಳನ್ನು ಪೂರೈಸಲು ಮಕ್ಕಳನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳುವ ಶಿಕ್ಷಕಿಯ ಕಥೆಯಾಗಿದೆ.
ಮರ್ದಾನಿ: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮರ್ದಾನಿಯಲ್ಲಿ ರಾಣಿ ಮುಖರ್ಜಿ ಅತ್ಯುತ್ತಮ ಮಹಿಳಾ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ.
7 Khoon Maaf
7 ಖೂನ್ ಮಾಫ್: ಇದು 7 ಖೂನ್ ಮಾಫ್ ಥ್ರಿಲ್ಲರ್ ಆಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಕಹಾನಿ: ಕಹಾನಿ ಜಿಯೋ ಸಿನಿಮಾದಲ್ಲಿದೆ. ವಿದ್ಯಾ ಬಾಲನ್ ಅಭಿನಯದ ಈ ಸಿನಿಮಾ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಗರ್ಭಿಣಿ ಮಹಿಳೆ ತನ್ನ ಕಾಣೆಯಾದ ಗಂಡನನ್ನು ಹುಡುಕಲು ಪ್ರಯತ್ನಿಸುತ್ತಿರುವ ಬಗ್ಗೆ ಆಗಿದ್ದು ಇದರ ಕ್ಲೈಮ್ಯಾಕ್ಸ್ ಆಘಾತಕಾರಿಯಾಗಿದೆ.
ಬದ್ಲಾ: ತನ್ನ ಸಂಗಾತಿ ಕೊಲೆ ಮಾಡಿದ ಶಂಕಿತ ಮಹಿಳೆಯ ಸುತ್ತುವ ಕಥೆಯಾಗಿದೆ. ತಾಪ್ಸಿ ಪನ್ನು ಮತ್ತು ಅಮಿತಾಬ್ ಬಚ್ಚನ್ ಅವರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ.
kaun
ಕೌನ್?: ಕೌನ್ ಒಂದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಊರ್ಮಿಳಾ ಮಾತೋಂಡ್ಕರ್ ನಾಯಕಿಯಾಗಿರುವ ಈ ಚಿತ್ರ YouTube ನಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.