ರೊನಾಲ್ಡೊಗಿಂತ ಮೊದಲು ಕೋಕೊ ಕೋಲಾ ಬಹಿಷ್ಕರಿಸಿದ್ದ ಕರೀನಾ ಕಪೂರ್!
ಪೋರ್ಚುಗೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಸಖತ್ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುಇಎಫ್ಎ ಯುರೋ ಕಪ್‌ನ ಪ್ರೆಸ್ ಮೀಟ್‌ನಲ್ಲಿ ಈ ಫುಟ್‌ಬಾಲ್ ಆಟಗಾರ ಕೋಕಾಕೋಲಾವನ್ನು ಬದಿಗಿಟ್ಟು ನೀರಿನ ಬಾಟಲಿ ಕೈಗೆ ಎತ್ತಿಕೊಂಡು ನ್ಯೂಸ್ ಆಗಿದ್ದಾರೆ. ಆದರೆ, ಅವರಿಗಿಂತ ಮೊದಲು, ಬಾಲಿವುಡ್ ನಟಿ ಕರೀನಾ ಕಪೂರ್ 2007ರಲ್ಲಿಯೇ ಅದೇ ರೀತಿ ಮಾಡಿದ್ದರು. ಇಲ್ಲಿದೆ ನೋಡಿ ವಿವರ.
ಪೋರ್ಚುಗೀಸ್ ಫುಟ್ಬಾಲ್ ಸೂಪರ್ ಸ್ಟಾರ್ ಆಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಅಸಾಧಾರಣ ಆಟದ ಮೂಲಕ ಇಡಿ ವಿಶ್ವದ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ, ನಡೆಯುತ್ತಿರುವ UEFA ಯುರೋ ಕಪ್‌ನಲ್ಲಿ ಅವರು ತಮ್ಮ ನಡೆಯ ಮೂಲಕ ಫ್ಯಾನ್ಸ್‌ಗ ಆರೋಗ್ಯದ ಬಗ್ಗೆ ಗಟ್ಟಿ ಸಂದೇಶವೊಂಗನ್ನು ನೀಡಿದ್ದಾರೆ.
ಪ್ರೆಸ್ ಮೀಟ್‌ನಲ್ಲಿ ರೊನಾಲ್ಡೊ ಕೋಕೊಕೋಲಾ ಬಾಟಲನ್ನು ಬಹಿಷ್ಕರಿಸಿ, ನೀರಿನ ಬಾಟಲಿ ತೆಗೆದುಕೊಂಡ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.
ರೊನಾಲ್ಡೋರ ಈ ನೆಡೆಗೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ಕೋಕಾ ಕೋಲಾಗೆ ಅದರ ಮಾರುಕಟ್ಟೆ ಮೌಲ್ಯದಲ್ಲಿ 4 ಬಿಲಿಯನ್ ನಷ್ಟವಾಗಿದೆ.
ಕೋಕಾ ಕೋಲಾ ಪೋರ್ಚುಗೀಸ್ ಆಟಗಾರನ ಈ ಕಾರ್ಯದ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಲಿಲ್ಲ ಮತ್ತು ಪ್ರತಿಯೊಬ್ಬರೂ ಅವನ / ಅವಳ ಆದ್ಯತೆಯ ಪಾನೀಯದ ಆಯ್ಕೆಗೆ ಅರ್ಹರಾಗಿದ್ದಾರೆ ಎಂದಷ್ಟೇ ಹೇಳಿದೆ.
ಈ ರೀತಿ ಕೋಕಾಕೋಲಾವನ್ನು ಬಹಿಷ್ಕರಿಸುವರಲ್ಲಿ ರೊನಾಲ್ಡೋ ಮೊದಲಿಗರಲ್ಲ ಬಾಲಿವುಡ್ ನಟಿ ಕರೀನಾ ಕಪೂರ್ ಈಗಾಗಲೇ 14 ವರ್ಷಗಳ ಹಿಂದೆ ತಮ್ಮ ಒಂದು ಸಿನಿಮಾದಲ್ಲಿ ಅದೇ ರೀತಿ ಮಾಡಿದ್ದರು
ತನ್ನ ಹಿಟ್ ಫಿಲ್ಮ್ ಜಬ್ ವಿ ಮೆಟ್‌ನಲ್ಲಿ, ಶಾಹಿದ್ ಕಪೂರ್ ಜೊತೆಗೆ ಕರೀನಾ ರೈಲ್ವೆ ನಿಲ್ದಾಣದ ಅಂಗಡಿಯೊಂದರಿಂದ ತಂಪು ಪಾನೀಯಗಳ ಬದಲಿಗೆ ನೀರನ್ನು ಆರಿಸಿಕೊಳ್ಳುವ ದೃಶ್ಯವಿದೆ.
ಕೋಲಾ ಗೀಲಾ ಅದರ ಜಾಗದಲ್ಲಿರಲಿ ನೀರಿನ ಆದರೆ ನೀರಿನ ಕೆಲಸವನ್ನು ನೀರು ಮಾತ್ರ ಮಾಡುತ್ತದೆ (ಕೋಲಾ-ಶೋಲಾ ಸಬ್ ಅಪ್ನಿ ಜಗಾ ಹೈ, ಪರ್ ಪಾನಿ ಕಾ ಕಾಮ್ ಪಾನಿ ಹೈ ಕರ್ತಾ ಹೈ) ಎಂಬ ಡೈಲಾಗ್ ಹೇಳಿದ್ದಾರೆ ಕರೀನಾ ಕಪೂರ್.
ಜಬ್ ವಿ ಮೆಟ್‌ನ ಈ ಡೈಲಾಗ್‌ನ ಮಿಮ್‌ಗಳು ಸೋಷಿಯಲ್ ಮಿಡೀಯಾದಲ್ಲಿ ಈಗ ಸಖತ್ ಸದ್ದು ಮಾಡುತ್ತಿದೆ.
ಸ್ವತಃ ಕರೀನಾ ಈ ಮಿಮ್ ಅನ್ನು ತಮ್ಮ ಸೋಷಿಯಲ್ ಮಿಡೀಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.